
ಇರಾನ್: ಇರಾನ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾಣೆಯಲ್ಲಿ ಮಸೂದ್ ಪೆಜೆಶ್ಕಿಯನ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇರಾನ್ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಕ್ಕೆ ಪೆಜೆಶ್ಕಿಯನ್ ಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ತಿಳಿಸಿದ್ದಾರೆ.
ಸುಧಾರಣಾವಾದಿ ಅಭ್ಯರ್ಥಿ ಪೆಜೆಶ್ಕಿಯಾನ್ ಶನಿವಾರದಂದು ಇರಾನ್‌ನ ರನ್‌ಆಫ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿದ್ದಾರೆ. ಇಸ್ಲಾಮಿಕ್ ಗಣರಾಜ್ಯವನ್ನು ಕಾಡುತ್ತಿರುವ ವರ್ಷಗಳ ನಿರ್ಬಂಧಗಳು ಮತ್ತು ಪ್ರತಿಭಟನೆಗಳ ನಡುವೆ, ಪಶ್ಚಿಮ ದೇಶಗಳ ವಿಶ್ವಾಸ ಗಳಿಸುವುದು ಮತ್ತು ದೇಶದ ಕಡ್ಡಾಯ ಶಿರಸ್ತ್ರಾಣ ಕಾನೂನನ್ನು ಸಡಿಲಗೊಳಿಸುವ ಭರವಸೆ ನೀಡುವ ಮೂಲಕ ಕಠಿಣವಾದಿ ಸಯೀದ್ ಜಲಿಲಿಗೆ ಪೆಜೆಶ್ಕಿಯಾನ್ ಸವಾಲಾಗಿದ್ದಾರೆ.
ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ನಮ್ಮ ಜನರು ಮತ್ತು ಪ್ರದೇಶದ ಪ್ರಯೋಜನಕ್ಕಾಗಿ ನಮ್ಮ ಆಪ್ತ ಮತ್ತು ದೀರ್ಘಕಾಲದ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ನಿಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.
Advertisement