
ಲಂಡನ್: ಬ್ರಿಟನ್ ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಕೀರ್ ಸ್ಟಾರ್ಮರ್ ಅವರು ಶನಿವಾರ ಬೆಳಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಎರಡೂ ಕಡೆಯಿಂದ ಮಾತುಕತೆ ಪೂರ್ಣಗೊಳಿಸಲು ಸಿದ್ಧವಾಗಿರುವುದಾಗಿ ತಿಳಿಸಿದ್ದಾರೆ.
ಭಾರತ ಹಾಗೂ ಬ್ರಿಟನ್ ನ ಕನ್ಸರ್ವೇಟಿವ್ ಪಾರ್ಟಿ ನೇತೃತ್ವದ ಸರ್ಕಾರದೊಂದಿಗೆ ಕಳೆದ ಎರಡು ವರ್ಷಗಳಿಂದ ಮುಕ್ತ ವ್ಯಾಪಾರ ಒಪ್ಪಂದ ಕುರಿತು ಮಾತುಕತೆ ನಡೆಸಿತ್ತು. ಆದರೆ, ಎರಡೂ ದೇಶಗಳ ಸಾರ್ವತ್ರಿಕ ಚುನಾವಣೆಯಿಂದಾಗಿ 14 ಸುತ್ತಿನಲ್ಲಿ ಮಾತುಕತೆ ಸ್ಥಗಿತಗೊಂಡಿತ್ತು. ಇದೀಗ ಸ್ಟಾರ್ಮರ್ ನೇತೃತ್ವದಲ್ಲಿ ಲೇಬರ್ ಪಕ್ಷ ಅಧಿಕಾರಕ್ಕೆ ಬಂದಿದ್ದು, FTA ಪೂರ್ಣಗೊಳಿಸುವತ್ತ ಕೆಲಸ ಮಾಡುವ ನಿರೀಕ್ಷೆಯಿದೆ.
ಉಭಯ ರಾಷ್ಟ್ರಗಳ ನಡುವೆ ಉತ್ತಮ ಹಾಗೂ ಗೌರವಯುತ ಸಂಬಂಧವನ್ನು ಮತ್ತಷ್ಟು ಭದ್ರಗೊಳಿಸುವುದನ್ನು ಎದುರು ನೋಡುತ್ತಿದ್ದೇನೆ. ಬದಲಾಗುತ್ತಿರುವ ಹವಾಮಾನ ಮತ್ತು ಆರ್ಥಿಕ ಪ್ರಗತಿಯಂತಹ ಜಾಗತಿಕ ಬದಲಾವಣೆಯಲ್ಲಿ ಪ್ರಧಾನಿ ಮೋದಿ ಅವರ ನಾಯಕತ್ವವನ್ನು ಸ್ವಾಗತಿಸುವುದಾಗಿ ಸ್ಟಾರ್ಮರ್ ಹೇಳಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.
ಎರಡೂ ರಾಷ್ಟ್ರಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವುದು, ಸೇನೆ ಹಾಗೂ ಭದ್ರತೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2030ರ ನೀಲನಕ್ಷೆ ಸಿದ್ಧಪಡಿಸುವ ಅಗತ್ಯವಿದೆ. ಇದರೊಂದಿಗೆ ನಿರ್ಣಾಯಕ ಹಾಗೂ ಉದಯೋನ್ಮಖ ತಂತ್ರಜ್ಞಾನ ಹಾಗೂ ಬದಲಾಗುತ್ತಿರುವ ಹವಾಮಾನ ಕುರಿತು ಎರಡೂ ರಾಷ್ಟ್ರಗಳ ಸಹಕಾರ ಕುರಿತು ಚರ್ಚಿಸಬೇಕಾದ ಅಗತ್ಯವಿದೆ ಎಂದು ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಮುಕ್ತ ವ್ಯಾಪಾರ ಒಪ್ಪಂದ ಕುರಿತ ಚರ್ಚೆಯಲ್ಲಿ ಉಭಯ ರಾಷ್ಟ್ರಗಳ ಕಡೆಯಿಂದ ಮಾತುಕತೆ ಪೂರ್ಣಗೊಳಿಸಲು ಸಿದ್ದನಿರುವುದಾಗಿ ಸ್ಟಾರ್ಮರ್ ಹೇಳಿದ್ದಾರೆ. ಉಭಯ ನಾಯಕರು ಆದಷ್ಟು ಬೇಗ ಭೇಟಿಯಾಗುವ ವಿಶ್ವಾಸವಿದೆ ಎಂದು ವಕ್ತಾರರು ಹೇಳಿದ್ದಾರೆ. 2022 ರಲ್ಲಿ ಬೋರಿಸ್ ಜಾನ್ಸನ್ ಬ್ರಿಟಿಷ್ ಪ್ರಧಾನಿಯಾಗಿದ್ದಾಗ GBP 38.1 ಶತಕೋಟಿ ಮೊತ್ತದ (40 ಸಾವಿರ ಕೋಟಿ) ದ್ವಿಪಕ್ಷೀಯ ವ್ಯಾಪಾರ ಪಾಲುದಾರಿಕೆ ನಡೆದಿದೆ. ಈಮಾತುಕತೆಗಳು ಯುಕೆಯಲ್ಲಿನ ರಾಜಕೀಯ ಪ್ರಕ್ಷುಬ್ಧತೆಗೆ ಕಾರಣವಾಗಿತ್ತು. ಎದುರಿಸಬೇಕಾಗಿತ್ತು. ನಂತರ ಭಾರತ ಮೂಲದ ರಿಷಿ ಸುನಕ್ ಬ್ರಿಟನ್‌ನ ಮೊದಲ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದರು.
ಲೇಬರ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲೇ ಭಾರತದೊಂದಿಗೆ ಸಂಬಂಧ ವೃದ್ಧಿಯನ್ನು ಒತ್ತಿ ಹೇಳಿತ್ತು. ಇದೇ ಮಾತನ್ನು ಸ್ಟಾರ್ಮರ್ ನೇತೃತ್ವದ ಸರ್ಕಾರದ ವಿದೇಶಾಂಗ ಸಚಿವ ಡೇವಿಡ್ ಲ್ಯಾಮ್ಮಿ ಪುನರುಚ್ಚರಿಸಿದ್ದಾರೆ. ಸ್ಟಾರ್ಮರ್ ಆಯ್ಕೆಯಾದ ಮೊದಲ ತಿಂಗಳಲ್ಲೇ ಭಾರತಕ್ಕೆ ಭೇಟಿ ನೀಡಲು ಯೋಜಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮುಕ್ತ ವ್ಯಾಪಾರ ಒಪ್ಪಂದ ಮಾತುಕತೆ ಪೂರ್ಣಗೊಳಿಸೋಣ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕಾರ್ಮಿಕ ಸಚಿವ ಪಿಯೂಷ್ ಗೋಯೆಲ್ ಅವರಿಗೆ ವಾರದ ಹಿಂದಷ್ಟೇ ಲ್ಯಾಮ್ಮಿ ಸಂದೇಶ ಕಳುಹಿಸಿದ್ದರು.
Advertisement