ಉಕ್ರೇನ್ ಯುದ್ಧ: ಮಾತುಕತೆ, ರಾಜತಾಂತ್ರಿಕತೆ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಧಾನಿ ಮೋದಿ ಮಾತನ್ನು ಒಪ್ಪುತ್ತೇವೆ- ರಷ್ಯಾ

ಸ್ವಿಟ್ಜರ್ಲೆಂಡ್‌ನಲ್ಲಿ ಉಕ್ರೇನ್‌ನ ಶಾಂತಿ ಶೃಂಗಸಭೆಯನ್ನು 'ತಮಾಶಾ' ಎಂದು ಹೇಳಿರುವ ರಷ್ಯಾ, ರಷ್ಯಾ ಇಲ್ಲದೆ ಶಾಂತಿ ಶೃಂಗಸಭೆ ಹೇಗೆ ಸಾಧ್ಯ ಎಂದು ಕೇಳಿದೆ.
Russian President Vladimir Putin and Indian Prime Minister Narendra Modi shake hands during a meeting at the Kremlin in Moscow, Russia
ಪ್ರಧಾನಿ ಮೋದಿ- ರಷ್ಯ ಆಧ್ಯಕ್ಷ ವ್ಲಾದಿಮಿರ್ ಪುಟಿನ್online desk
Updated on

ಮಾಸ್ಕೋ: ಯುಕ್ರೇನ್ ವಿರುದ್ಧದ ಯುದ್ಧಕ್ಕೆ ಪರಿಹಾರ ಕಂಡುಕೊಳ್ಳುವ ವಿಷಯದಲ್ಲಿ ತಾನು ಪ್ರಧಾನಿ ಮೋದಿ ಅವರ ಅಭಿಪ್ರಾಯದೊಂದಿಗೆ ಸಹಮತ ಹೊಂದಿರುವುದಾಗಿ ರಷ್ಯ ಹೇಳಿದೆ.

ರಷ್ಯಾ ಭೇಟಿ ವೇಳೆ ಪ್ರಧಾನಿ ಯುಕ್ರೇನ್ ವಿಷಯ ಪ್ರಸ್ತಾಪಿಸಿ, "ಬಾಂಬ್‌ಗಳು, ಬಂದೂಕುಗಳು ಮತ್ತು ಗುಂಡುಗಳ ಮಧ್ಯೆ, ಪರಿಹಾರಗಳು ಮತ್ತು ಶಾಂತಿ ಮಾತುಕತೆಗಳು ಯಶಸ್ವಿಯಾಗುವುದಿಲ್ಲ, ನಾವು ಮಾತುಕತೆಯ ಮೂಲಕ ಮಾತ್ರ ಶಾಂತಿ ಮಾರ್ಗವನ್ನು ಅನುಸರಿಸಬೇಕು" ಎಂದು ಹೇಳಿದ್ದರು.

"ಪ್ರಧಾನಿ ಮೋದಿ ಪ್ರಸ್ತಾಪಿಸಿದಂತೆ ನಾವು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಉಕ್ರೇನ್‌ನೊಂದಿಗೆ ಶಾಂತಿಯನ್ನು ಹೊಂದಲು ಬಯಸುತ್ತೇವೆ. ವಾಸ್ತವವಾಗಿ, ಉಕ್ರೇನ್ ತಟಸ್ಥ, ಪರಮಾಣು ರಹಿತ ಮತ್ತು ರಷ್ಯಾ ಸ್ವಾಧೀನಪಡಿಸಿಕೊಂಡಿರುವ ಪ್ರದೇಶಗಳನ್ನು ಗುರುತಿಸುತ್ತದೆ ಎಂದು ಭರವಸೆ ನೀಡಿದರೆ, ಯುದ್ಧವನ್ನು ಕೊನೆಗೊಳಿಸಲು ಬಯಸುವುದಾಗಿ ಜೂನ್ 14 ರಂದು ಅಧ್ಯಕ್ಷ ಪುಟಿನ್ ಹೇಳಿದ್ದರು ಎಂದು ನವದೆಹಲಿಯಲ್ಲಿ ರಷ್ಯಾದ ಚಾರ್ಜ್ ಡಿ ಅಫೇರ್ಸ್ ರೋಮನ್ ಬಾಬುಶ್ಕಿನ್ ಹೇಳಿದರು.

Russian President Vladimir Putin and Indian Prime Minister Narendra Modi shake hands during a meeting at the Kremlin in Moscow, Russia
ರಷ್ಯಾ ಪ್ರವಾಸ ಮುಗಿಸಿ ಆಸ್ಟ್ರಿಯಾಕ್ಕೆ ಬಂದಿಳಿದ ಮೋದಿ: 40 ವರ್ಷಗಳ ನಂತರ ಭಾರತದ ಪ್ರಧಾನಿ ಭೇಟಿ

ಸ್ವಿಟ್ಜರ್ಲೆಂಡ್‌ನಲ್ಲಿ ಉಕ್ರೇನ್‌ನ ಶಾಂತಿ ಶೃಂಗಸಭೆಯನ್ನು 'ತಮಾಶಾ' ಎಂದು ಹೇಳಿರುವ ರಷ್ಯಾ, ರಷ್ಯಾ ಇಲ್ಲದೆ ಶಾಂತಿ ಶೃಂಗಸಭೆ ಹೇಗೆ ಸಾಧ್ಯ ಎಂದು ಕೇಳಿದೆ. ಯುಕ್ರೇನ್ ರಷ್ಯಾದ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡಿದೆ ಮತ್ತು ಕೀವ್‌ನಲ್ಲಿರುವ ಮಕ್ಕಳ ಆಸ್ಪತ್ರೆಯ ಮೇಲಿನ ದಾಳಿಯನ್ನು ತನಿಖೆ ಮಾಡಲು ಬಯಸುತ್ತದೆ ಎಂದು ಅದು ಹೇಳಿದೆ.

"ಅಮೆರಿಕವು ಇತರ ದೇಶಗಳ ಆಂತರಿಕ ವಿಷಯಗಳಲ್ಲಿ ಮಧ್ಯಪ್ರವೇಶಿಸುವುದನ್ನು ನಿಲ್ಲಿಸಬೇಕು. ಪ್ರಪಂಚದ ಗಮನವು ಇದ್ದಕ್ಕಿದ್ದಂತೆ ಪಿಎಂ ಮೋದಿ ಮತ್ತು ಅವರ ಮಾಸ್ಕೋ ಭೇಟಿಯ ಮೇಲೆ ಕೇಂದ್ರೀಕೃತವಾಗಿತ್ತು. ರಷ್ಯಾ ಮತ್ತು ಭಾರತ ದೀರ್ಘಾವಧಿಯ ಸ್ನೇಹಿತರಾಗಿದ್ದು, ಅದರಲ್ಲಿ ಅಸಹಜವಾದದ್ದೇನೂ ಇಲ್ಲ. ನಿಜವಲ್ಲ ರಷ್ಯಾ, ಭಾರತ ಮತ್ತು ಚೀನಾ ಯುರೇಷಿಯಾದಲ್ಲಿ ಪ್ರಬಲ ಬಣವಾಗಿ ಹೊರಹೊಮ್ಮಿವೆ ಮತ್ತು ಅದು ಅವರಿಗೆ ಸರಿ ಹೋಗುತ್ತಿಲ್ಲ ಎಂದು ಅಮೇರಿಕಾವನ್ನು ರಷ್ಯಾ ಟೀಕಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com