
ಲಾಹೋರ್: ಹೆಣ್ಣು ಮಕ್ಕಳ ಶಿಕ್ಷಣವನ್ನು ಇಸ್ಲಾಂ ಒಪ್ಪಿಕೊಳ್ಳುವುದಿಲ್ಲ. ಶಾಲೆಗೆ ಹೋದ ಹೆಣ್ಣು ಮಕ್ಕಳು ವೇಶ್ಯೆಯರಾಗುತ್ತಾರೆ ಎಂದು ಪಾಕಿಸ್ತಾನಿ ಯೂಟ್ಯೂಬರ್ Hasan Iqbal Chishti ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನಿ ಯೂಟ್ಯೂಬರ್ (Pakistani Youtuber) ಹಸನ್ ಇಕ್ಬಾಲ್ ಚಿಶ್ತಿ ಎಂಬಾತ ತನ್ನ ನೂತನ ಹಾಡೊಂದರಲ್ಲಿ ಇಂತಹ ವಿವಾದಾತ್ಮಕ ಹೇಳಿಕೆ ನೀಡಿದ್ದು, ಹೆಣ್ಣು ಮಕ್ಕಳ ಶಿಕ್ಷಣವನ್ನು ಖಂಡಿಸುವ ಸಾಹಿತ್ಯ ಬರೆದು ಹಾಡು ತಯಾರಿಸಿದ್ದಾನೆ.
ಯೂಟ್ಯೂಬ್ ನಲ್ಲಿ ಈ ಹಾಡು ಬಿಡುಗಡೆಯಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗುತ್ತಿದೆ.
‘ಅಪ್ನಿ ಧಿ ಸ್ಕೂಲ್ಲೋ ಹತಾ ಲೇ ಓಥಿ ಡ್ಯಾನ್ಸ್ ಕರಡಿ ಪಾಯಿ ಏ.. ಎನ್ನುವ ಶೀರ್ಷಿಕೆಯ ಈ ಹಾಡನ್ನು ಈ ವರ್ಷದ ಜೂನ್‌ನಲ್ಲಿ ಬಿಡುಗಡೆ ಮಾಡಿರುವ ಈತ ವಿಡಿಯೋದಲ್ಲಿ ಜನರು ತಮ್ಮ ಹೆಣ್ಣುಮಕ್ಕಳನ್ನು ಶಾಲೆಯಿಂದ ತೆಗೆದುಹಾಕುವಂತೆ ಕರೆ ನೀಡಿರುವ ಈತ ಹೆಣ್ಣು ಮಕ್ಕಳ ಶಿಕ್ಷಣವನ್ನು ಇಸ್ಲಾಂ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾನೆ.
ಅಲ್ಲದೆ ಜನರು ತಮ್ಮ ಹೆಣ್ಣು ಮಕ್ಕಳನ್ನು ಶಾಲೆಯಿಂದ ತೆಗೆದುಹಾಕಲು ಮತ್ತು ಮನೆಗಳಲ್ಲಿ ಇರಿಸಿಕೊಳ್ಳಲು ಸಲಹೆ ನೀಡಿದ್ದಾನೆ. ನೀವು ಗೌರವವನ್ನು ಕಳೆದುಕೊಳ್ಳಲು ಬಯಸಿದರೆ ಅಥವಾ ಅವಳನ್ನು ವೇಶ್ಯೆಯನ್ನಾಗಿ ಮಾಡಲು ಬಯಸಿದರೆ ಅವಳನ್ನು ಶಾಲೆಗೆ ಕಳುಹಿಸಿ ಎಂದು ಹಾಡಿದ್ದಾನೆ. ಶಾಲೆಗೆ ಹೋಗುವ ಹೆಣ್ಣುಮಕ್ಕಳು ತಮ್ಮ ಪವಿತ್ರತೆ ಮತ್ತು ಗೌರವವನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳುವ ಸಾಹಿತ್ಯವೂ ಇದೆ.
ಈಗಾಗಲೇ ಆಫ್ಘಾನಿಸ್ತಾನದಲ್ಲಿ ಅಲ್ಲಿನ ತಾಲಿಬಾನ್ ಸರ್ಕಾರ ಮಹಿಳಾ ಶಿಕ್ಷಣವನ್ನು ವಿರೋಧಿಸಿದ್ದು ಮಾತ್ರವಲ್ಲದೇ ನಿರ್ಬಂಧ ಕೂಡ ಹೇರಿದೆ.
Advertisement