ಮೂರನೇ ಬಾರಿಗೆ ನೇಪಾಳದ ಪ್ರಧಾನಿಯಾಗಿ ಕೆಪಿ ಶರ್ಮಾ ಒಲಿ ನೇಮಕ

ಶುಕ್ರವಾರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಪುಷ್ಪ ಕಮಲ್ ದಹಲ್ ಪ್ರಚಂಡ ಅವರು ವಿಶ್ವಾಸ ಮತವನ್ನು ಕಳೆದುಕೊಂಡ ನಂತರ 72 ವರ್ಷದ ಓಲಿ ಅವರು ಸಂವಿಧಾನದ 76 (2) ರ ಪ್ರಕಾರ ಹೊಸ ಸರ್ಕಾರ ರಚನೆ ಪ್ರಕ್ರಿಯೆಗೆ ಕಾರಣರಾದರು.
ಕೆಪಿ ಶರ್ಮಾ ಒಲಿ
ಕೆಪಿ ಶರ್ಮಾ ಒಲಿ
Updated on

ಕಠ್ಮಂಡು: ಮೂರನೇ ಬಾರಿಗೆ ನೇಪಾಳದ ಪ್ರಧಾನಿಯಾಗಿ ಕೆಪಿ ಶರ್ಮಾ ಒಲಿ ನೇಮಕವಾಗಿದ್ದಾರೆ. ದೇಶದಲ್ಲಿ ರಾಜಕೀಯ ಸ್ಥಿರತೆ ಒದಗಿಸುವ ಕಠಿಣ ಸವಾಲನ್ನು ಎದುರಿಸಿ, ಹೊಸ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸಲು ಕೆಪಿ ಶರ್ಮಾ ಒಲಿ ಅವರನ್ನು ಭಾನುವಾರ ನೇಮಿಸಲಾಗಿದೆ.

ಶುಕ್ರವಾರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಪುಷ್ಪ ಕಮಲ್ ದಹಲ್ ಪ್ರಚಂಡ ಅವರು ವಿಶ್ವಾಸ ಮತವನ್ನು ಕಳೆದುಕೊಂಡ ನಂತರ 72 ವರ್ಷದ ಓಲಿ ಅವರು ಸಂವಿಧಾನದ 76 (2) ರ ಪ್ರಕಾರ ಹೊಸ ಸರ್ಕಾರ ರಚನೆ ಪ್ರಕ್ರಿಯೆಗೆ ಕಾರಣರಾದರು.

ನೇಪಾಳದ ಕಮ್ಯುನಿಸ್ಟ್ ಪಾರ್ಟಿ-ಯುನಿಫೈಡ್ ಮಾರ್ಕ್ಸ್‌ವಾದಿ ಲೆನಿನಿಸ್ಟ್ (CPN-UML) ನೇಪಾಳಿ ಕಾಂಗ್ರೆಸ್ (NC) ಮೈತ್ರಿಕೂಟದ ಹೊಸ ಪ್ರಧಾನ ಮಂತ್ರಿಯಾಗಿ ಒಲಿ ಅವರನ್ನು ಅಧ್ಯಕ್ಷ ರಾಮ್ ಚಂದ್ರ ಪೌಡೆಲ್ ನೇಮಕ ಮಾಡಿದರು.

ಒಲಿ ಹಾಗೂ ನೂತನ ಸಚಿವ ಸಂಪುಟ ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಒಲಿ ಅವರು ಶುಕ್ರವಾರ ತಡರಾತ್ರಿ ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ದೇವುಬಾ ಅವರ ಬೆಂಬಲದೊಂದಿಗೆ ಮುಂದಿನ ಪ್ರಧಾನಿಯಾಗಲು ಹಕ್ಕನ್ನು ಮಂಡಿಸಿದ್ದರು. ಅಲ್ಲದೇ ತಮ್ಮ ಪಕ್ಷದಿಂದ 77 ಮತ್ತು ನ್ಯಾಷನಲ್ ಕಾಂಗ್ರೆಸ್ ಪಕ್ಷದಿಂದ 88 ಸದಸ್ಯರ ಸಹಿಯನ್ನು ಸಲ್ಲಿಸಿದ್ದರು.

ಕೆಪಿ ಶರ್ಮಾ ಒಲಿ
ವಿಶ್ವಾಸಮತ ಕಳೆದುಕೊಳ್ಳುವ ಮುನ್ನ ಚೀನಾದೊಂದಿಗೆ ರೈಲು ಒಪ್ಪಂದಕ್ಕೆ ನೇಪಾಳ ಪ್ರಧಾನಿ ಅನುಮೋದನೆ: ವರದಿ

ಈ ಹಿಂದೆ ಅಕ್ಟೋಬರ್ 11, 2015 ರಿಂದ ಆಗಸ್ಟ್ 3, 2016 ಮತ್ತು ಫೆಬ್ರವರಿ 5, 2018 ರಿಂದ ಜುಲೈ 13, 2021 ರವರೆಗೆ ಒಲಿ ನೇಪಾಳದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com