
ಶ್ವೇತಭವನ: ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ಚುನಾವಣಾ ಪ್ರಚಾರ ರ್ಯಾಲಿ ವೇಳೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಬಂಧೂಕುದಾರಿಯಿಂದ ನಡೆದ ಗುಂಡಿನ ದಾಳಿಯನ್ನು ಅಧ್ಯಕ್ಷ ಜೋ ಬೈಡನ್ ತೀವ್ರವಾಗಿ ಖಂಡಿಸಿದ್ದಾರೆ.
ಪೆನ್ಸಿಲ್ವೇನಿಯಾದಲ್ಲಿ ನಡೆದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ನಡೆದ ಹತ್ಯೆಯ ಯತ್ನದಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಮಾಜಿ ಅಧ್ಯಕ್ಷ ಟ್ರಂಪ್ ಅವರು ಗಾಯಗೊಂಡ ಘಟನೆ ನಂತರ ಅಧ್ಯಕ್ಷ ಜೋ ಬೈಡನ್ ಅವರು ತಮ್ಮ ಚುನಾವಣಾ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತನಾಡಿದ್ದಾರೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಂಜೆ, ಅಧ್ಯಕ್ಷ ಬೈಡನ್ ಮಾಜಿ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಮಾತನಾಡಿದ್ದಾರೆ ಎಂದು ಅಧಿಕಾರಿ ಹೇಳಿದರು, ಇಂದು ಭಾನುವಾರ ಬೆಳಿಗ್ಗೆ ಘಟನೆಯ ಕುರಿತು ಕಾನೂನು ಜಾರಿ ಅಧಿಕಾರಿಗಳಿಂದ ಯುಎಸ್ ಪದಾಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ.
ಈ ರೀತಿಯ ಕುಕೃತ್ಯವನ್ನು ಅಮೆರಿಕ ಎಂದಿಗೂ ಸಹಿಸುವುದಿಲ್ಲ. ಇದೊಂದು ರೋಗಮನಸ್ಥಿತಿಯವರು ಮಾಡುವ ಕೆಲಸ. ಇಂತಹದ್ದರ ವಿರುದ್ಧ ನಾವು ದೇಶದ ಪ್ರಜೆಗಳೆಲ್ಲರೂ ಒಂದಾಗಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸದ್ಯ ವೈದ್ಯರ ನಿಗಾದಲ್ಲಿದ್ದು ಗಾಯದ ಬೇನೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ನಾನು ಎಲ್ಲಾ ಪೆಢರಲ್ ಏಜೆನ್ಸಿಗಳ ಜೊತೆ ಮಾತುಕತೆಯಲ್ಲಿ ಇದ್ದು ಟ್ರಂಪ್ ಅವರನ್ನು ಕೂಡ ಮಾತನಾಡಿಸುವ ಪ್ರಯತ್ನದಲ್ಲಿದ್ದೇನೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅವರೊಂದಿಗೆ ದೂರವಾಣಿ ಮೂಲಕ ಮಾತನಾಡುವ ಪ್ರಯತ್ನದಲ್ಲಿ ಇದ್ದೇನೆ ಎಂದರು.
ವಿಶ್ವ ನಾಯಕರ ಖಂಡನೆ: ನಿನ್ನೆ ಶನಿವಾರ ಸಂಜೆ ಪಾ ಬಟ್ಲರ್‌ನಲ್ಲಿ ನಡೆದ ಪ್ರಚಾರ ರ‍್ಯಾಲಿಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ನಡೆದ ದಾಳಿಯನ್ನು ಪಕ್ಷಬೇಧ ಮರೆತು ರಾಜಕೀಯ ನಾಯಕರು ಖಂಡಿಸಿದ್ದಾರೆ.
ಈ ಘಟನೆಯು ರ್ಯಾಲಿಯಲ್ಲಿ ಭಾಗವಹಿಸಿದ ಒಬ್ಬ ವ್ಯಕ್ತಿಯನ್ನು ಬಲಿತೆಗೆದುಕೊಂಡಿತು. ಶಂಕಿತ ಬಂದೂಕುಧಾರಿಯನ್ನು ರಹಸ್ಯ ಸೇವಾ ಏಜೆಂಟರು ಗುಂಡು ಹಾರಿಸಿ ಕೊಂದಿದ್ದಾರೆ. ಇದು ಸಂಭವನೀಯ ಹತ್ಯೆಯ ಪ್ರಯತ್ನ ಎಂದು ತನಿಖೆ ನಡೆಸಲಾಗುತ್ತಿದೆ. ರ್ಯಾಲಿ ಆರಂಭವಾದ ಕೆಲವೇ ನಿಮಿಷಗಳಲ್ಲಿ ಗುಂಡಿನ ದಾಳಿ ನಡೆದಿದ್ದು, ಭಾಗವಹಿಸಿದ್ದವರನ್ನು ಗೊಂದಲಕ್ಕೆ ತಳ್ಳಿದೆ.
ಅನೇಕ ಗುಂಡಿನ ಸದ್ದು ಇದ್ದಕ್ಕಿದ್ದಂತೆ ಕೇಳಲಾರಂಭಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ತನ್ನ ಬಲ ಕಿವಿಯ ಮೇಲ್ಭಾಗವನ್ನು ಚುಚ್ಚಿದ ಬುಲೆಟ್‌ನಿಂದ ಗುಂಡು ಹಾರಿಸಲಾಗಿದೆ ಎಂದು ಟ್ರಂಪ್ ತಮ್ಮ ಸಾಮಾಜಿಕ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. "ಏನೋ ತಪ್ಪಾಗಿದೆ ಎಂದು ನನಗೆ ತಕ್ಷಣ ತಿಳಿದಿತ್ತು, ಗುಸುಗುಸು ಶಬ್ದ, ಹೊಡೆತಗಳನ್ನು ಕೇಳಿದೆ ತಕ್ಷಣವೇ ಬುಲೆಟ್ ಚರ್ಮದ ಮೂಲಕ ಹರಿದುಹೋಗಿ ರಕ್ತಸ್ರಾವವಾಯಿತು, ಅಮೆರಿಕವನ್ನು ದೇವರೇ ಕಾಪಾಡಲಿ ಎಂದು ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.
ರಿಪಬ್ಲಿಕನ್ ಹೌಸ್ ಸ್ಪೀಕರ್ ಮೈಕ್ ಜಾನ್ಸನ್: ಮಾಜಿ ಅಧ್ಯಕ್ಷರ ನಿಕಟ ಮಿತ್ರರಾದ ಹೌಸ್ ಸ್ಪೀಕರ್ ಮೈಕ್ ಜಾನ್ಸನ್ ಅವರು ರಾಜಕೀಯ ಹಿಂಸಾಚಾರವನ್ನು ಖಂಡಿಸಬೇಕು ಎಂದು ಹೇಳಿಕೆಯಲ್ಲಿ ಹೇಳಿದ್ದಾರೆ. ಕೆಲ್ಲಿ ಮತ್ತು ನಾನು ಮಾಜಿ ಅಧ್ಯಕ್ಷ ಟ್ರಂಪ್ ಮತ್ತು ಪೆನ್ಸಿಲ್ವೇನಿಯಾದಲ್ಲಿ ಇಂದು ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಿದ ವೇಳೆ ಈ ಘಟನೆ ನಡೆದಿದೆ. ಶಾಂತಿಯುತ ಪ್ರಚಾರ ರ್ಯಾಲಿಯಲ್ಲಿ ನಡೆದ ಈ ಭೀಕರ ರಾಜಕೀಯ ಹಿಂಸಾಚಾರವನ್ನು ಸರ್ವಾನುಮತದಿಂದ ಮತ್ತು ಬಲವಾಗಿ ಖಂಡಿಸಬೇಕು ಎಂದಿದ್ದಾರೆ.
ಉಪಾಧ್ಯಕ್ಷೆ ಕಮಲಾ ಹ್ಯಾರಿಸ್: ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿಕೆಯಲ್ಲಿ ಟ್ರಂಪ್ ಅವರು ಅದೃಷ್ಟವಶಾತ್ ಗಂಭೀರವಾಗಿ ಗಾಯಗೊಂಡಿಲ್ಲ, ನಾವೆಲ್ಲರೂ ಈ ಅಸಹ್ಯಕರ ಕೃತ್ಯವನ್ನು ಖಂಡಿಸಬೇಕು. ಇದು ಹೆಚ್ಚಿನ ಹಿಂಸಾಚಾರಕ್ಕೆ ಕಾರಣವಾಗದಂತೆ ನೋಡಿಕೊಳ್ಳಲು ನಾವು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಮಾಜಿ ಅಧ್ಯಕ್ಷ ಬರಾಕ್ ಒಬಾಮಾ: ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಸಾಮಾಜಿಕ ಮಾಧ್ಯಮದಲ್ಲಿ ನಮ್ಮ ಪ್ರಜಾಪ್ರಭುತ್ವದಲ್ಲಿ ರಾಜಕೀಯ ಹಿಂಸಾಚಾರಕ್ಕೆ ಖಂಡಿತವಾಗಿಯೂ ಜಾಗವಿಲ್ಲ. ಮಾಜಿ ಅಧ್ಯಕ್ಷ ಟ್ರಂಪ್ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ನಾವೆಲ್ಲ ಸಮಾಧಾನಪಟ್ಟುಕೊಳ್ಳಬೇಕು ಎಂದಿದ್ದಾರೆ.
Advertisement