ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಟ್ಲರ್, ಪಾದಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಗುಂಡಿನ ದಾಳಿಯಿಂದ ಗಾಯಗೊಂಡಾಗ ಅವರನ್ನು ಸುರಕ್ಷಿತವಾಗಿ ಹೊರತರುತ್ತಿರುವುದು
ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಟ್ಲರ್, ಪಾದಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಗುಂಡಿನ ದಾಳಿಯಿಂದ ಗಾಯಗೊಂಡಾಗ ಅವರನ್ನು ಸುರಕ್ಷಿತವಾಗಿ ಹೊರತರುತ್ತಿರುವುದು

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆಗೆ ಯತ್ನ: ಬಂದೂಕು ಗುಂಡು ಹಾರಿಸಿ ದಾಳಿ, ಬಲಕಿವಿಗೆ ಗಾಯ!

ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ಅವರು, ತಮ್ಮ ಮೇಲೆ ಬಂದೂಕು ದಾಳಿಯ ನಂತರ, ನನ್ನ ಬಲ ಕಿವಿಯ ಮೇಲ್ಭಾಗಕ್ಕೆ ಒಬ್ಬಾತ ಗುಂಡು ಹಾರಿಸಿದ್ದು ನನಗೆ ಗಾಯವಾಗಿದೆ ಎಂದು ಹೇಳಿದ್ದಾರೆ.
Published on

ಯುನೈಟೆಡ್ ಸ್ಟೇಟ್ಸ್(ಅಮೆರಿಕ): ಈ ವರ್ಷಾಂತ್ಯದ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮುಂಚಿತವಾಗಿ ಅಸ್ಥಿರತೆಯ ಭಯವನ್ನು ಹೆಚ್ಚಿಸುವ ಆಘಾತಕಾರಿ ಘಟನೆಯಲ್ಲಿ ಭಾರತೀಯ ಕಾಲಮಾನ ನಿನ್ನೆ ಶನಿವಾರ ರಾತ್ರಿ ಪ್ರಚಾರ ರ್ಯಾಲಿಯಲ್ಲಿ ಬಂದೂಕುಧಾರಿಯೊಬ್ಬನ ಹತ್ಯೆಯ ಯತ್ನದಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಿವಿಗೆ ಗಾಯವಾಗಿದೆ.

ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ನಡೆದ ಗುಂಡಿನ ದಾಳಿಯಿಂದ 78 ವರ್ಷದ ಡೊನಾಲ್ಡ್ ಟ್ರಂಪ್ ಅವರ ಮುಖಕ್ಕೆ ರಕ್ತವಾಗಿದ್ದು, ಅಂಗಪಕ್ಷಕರು ವೇದಿಕೆಯಿಂದ ಹೊರಗೆ ಕರೆತಂದರು. ಘಟನೆಯಲ್ಲಿ ಬಂದೂಕುಧಾರಿ ಮತ್ತು ಒಬ್ಬ ದಾರಿಹೋಕ ವ್ಯಕ್ತಿ ಮೃತಪಟ್ಟಿದ್ದು, ರ್ಯಾಲಿ ನೋಡಲು ಬಂದಿದ್ದ ಇಬ್ಬರು ಪ್ರೇಕ್ಷಕರು ತೀವ್ರವಾಗಿ ಗಾಯಗೊಂಡಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರು ಬುಲ್ಲೆಟ್ ಪ್ರೂಫ್ ಜಾಕೆಟ್ ಧರಿಸಿದ್ದರಿಂದ ಮತ್ತು ಗುಂಡಿನ ದಾಳಿಯಾಗುತ್ತಿದ್ದಂತೆ ಟ್ರಂಪ್ ಕುಳಿತರು.

ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ಅವರು, ತಮ್ಮ ಮೇಲೆ ಬಂದೂಕು ದಾಳಿಯ ನಂತರ, ನನ್ನ ಬಲ ಕಿವಿಯ ಮೇಲ್ಭಾಗಕ್ಕೆ ಒಬ್ಬಾತ ಗುಂಡು ಹಾರಿಸಿದ್ದು ನನಗೆ ಗಾಯವಾಗಿದೆ ಎಂದು ಹೇಳಿದ್ದಾರೆ.

ಮುಂದಿನ ನವೆಂಬರ್ ತಿಂಗಳಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಘಟನೆ ಬಗ್ಗೆ ಅಧ್ಯಕ್ಷ ಜೋ ಬೈಡನ್ ಪ್ರತಿಕ್ರಿಯಿಸಿದ್ದಾರೆ. ಇದೊಂದು ಅನಾರೋಗ್ಯಕರ ಬೆಳವಣಿಗೆ ಎಂದು ಬಣ್ಣಿಸಿದ್ದಾರೆ. ಅಮೆರಿಕದಲ್ಲಿ ಈ ರೀತಿಯ ಹಿಂಸಾಚಾರಕ್ಕೆ ಅವಕಾಶವಿಲ್ಲ. ಈ ಘಟನೆಯನ್ನು ಖಂಡಿತಾ ಸಮರ್ಥಿಸುವುದಿಲ್ಲ ಎಂದಿದ್ದಾರೆ.

ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳು ವೇದಿಕೆಯ ಮೇಲೆ ನುಗ್ಗುತ್ತಿದ್ದಂತೆ ಡೊನಾಲ್ಡ್ ಟ್ರಂಪ್ ನೆಲಕ್ಕೆ ಮುಗ್ಗರಿಸಿದಂತೆ ಆದರು. ಅವರನ್ನು ಸುತ್ತುವರೆದರು ವೇದಿಕೆಯಿಂದ ಹತ್ತಿರದ ವಾಹನಕ್ಕೆ ಬೆಂಗಾವಲು ಮೂಲಕ ಕರೆತಂದರು.

ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಟ್ಲರ್, ಪಾದಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಗುಂಡಿನ ದಾಳಿಯಿಂದ ಗಾಯಗೊಂಡಾಗ ಅವರನ್ನು ಸುರಕ್ಷಿತವಾಗಿ ಹೊರತರುತ್ತಿರುವುದು
ಹಷ್‌ ಮನಿ ಪ್ರಕರಣ: ಡೊನಾಲ್ಡ್ ಟ್ರಂಪ್ ಅಪರಾಧಿ; ಹೊಸ ದಾಖಲೆ ಬರೆದ ಮಾಜಿ ಅಧ್ಯಕ್ಷ!

ನಮ್ಮ ದೇಶದಲ್ಲಿ ಇಂತಹ ಕೃತ್ಯ ನಡೆಯುವುದು ನಂಬಲಸಾಧ್ಯವಾಗಿದೆ ಎಂದು ಟ್ರಂಪ್ ತಮ್ಮ TruthSocial ನೆಟ್‌ವರ್ಕ್‌ನಲ್ಲಿ ಕೆಲವೇ ಗಂಟೆಗಳಲ್ಲಿ ಹೇಳಿದರು,

ಹತ್ಯೆಯಾದ ರ್ಯಾಲಿಯ ವ್ಯಕ್ತಿಯ ಕುಟುಂಬಕ್ಕೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದು ಟ್ರಂಪ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ದಾಳಿಯು ಪ್ರಪಂಚದಾದ್ಯಂತ ರಾಜಕೀಯ ವಲಯದಲ್ಲಿ ತೀವ್ರ ಆಘಾತವನ್ನುಂಟುಮಾಡಿದೆ. ಅಧ್ಯಕ್ಷ ಬೈಡನ್ ಅವರು ಘಟನೆ ಬಗ್ಗೆ ಟ್ರಂಪ್ ಅವರ ಜೊತೆ ಚರ್ಚಿಸಲಿದ್ದಾರೆ.

ಯುನೈಟೆಡ್ ಸ್ಟೇಟ್ಸ್ ರಾಜಕೀಯ ಹಿಂಸಾಚಾರದ ಇತಿಹಾಸವನ್ನು ಹೊಂದಿದೆ, ಈ ನಿಟ್ಟಿನಲ್ಲಿ ಅಲ್ಲಿನ ಅಧ್ಯಕ್ಷರು, ಮಾಜಿ ಅಧ್ಯಕ್ಷರು ಮತ್ತು ಅಭ್ಯರ್ಥಿಗಳಿಗೆ ಬಿಗಿ ಭದ್ರತೆ ಇದೆ.ಮಾಜಿ ಅಧ್ಯಕ್ಷ ಜಾನ್ ಎಫ್. ಕೆನಡಿಯನ್ನು 1963 ರಲ್ಲಿ ಅವರ ಮೋಟಾರು ವಾಹನದಲ್ಲಿ ಸವಾರಿ ಮಾಡುವಾಗ ಹತ್ಯೆ ಮಾಡಲಾಯಿತು, ಅವರ ಸಹೋದರ ಬಾಬಿ ಕೆನಡಿ ಅವರನ್ನು 1968 ರಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ 1981 ರಲ್ಲಿ ಹತ್ಯೆಯ ಪ್ರಯತ್ನದಿಂದ ಬದುಕುಳಿದರು.

Follow KannadaPrabha channel on WhatsApp

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com