"Press This Button": 'ಒಂದೇ ನಿಮಿಷದಲ್ಲಿ ನೋವಿಲ್ಲದೆ ಸಾಯಿಸುವ ಯಂತ್ರ' ಆವಿಷ್ಕರಿಸಿದ ಸ್ವಿಟ್ಜರ್ಲೆಂಡ್!

ಯಂತ್ರವು ಆತ್ಮಹತ್ಯೆಗಾಗಿ ಬರುವ ವ್ಯಕ್ತಿ ಬಟನ್ ಒತ್ತಿದ ಕೂಡಲೇ ಆತನಿಗೆ ಆಕ್ಸಿಜನ್ ಬದಲಿಗೆ ನೈಟ್ರೋಜನ್ ಬಿಡುಗಡೆ ಮಾಡುತ್ತದೆ. ಇದರಿಂದ ವ್ಯಕ್ತಿ ಆಕ್ಸಿಜನ್ ಸಿಗದೇ ಹೈಪೋಕ್ಸಿಯಾದಿಂದ ಕೇವಲ ಒಂದೇ ನಿಮಿಷದಲ್ಲಿ ಪ್ರಾಣಬಿಡುತ್ತಾನೆ.
Portable Suicide Pod To Be Used In Switzerland
ಆತ್ಮಹತ್ಯಾ ಯಂತ್ರ ಆವಿಷ್ಕರಿಸಿದ ಸ್ವಿಟ್ಜರ್ಲೆಂಡ್
Updated on

ಜ್ಯೂರಿಚ್: 'ಒಂದೇ ನಿಮಿಷದಲ್ಲಿ ನೋವಿಲ್ಲದೆ ಸಾಯಿಸುವ ಯಂತ್ರ'ವನ್ನು ಸ್ವಿಟ್ಜರ್ಲೆಂಡ್ ಆವಿಷ್ಕರಿಸಲಾಗಿದ್ದು, ಶೀಘ್ರದಲ್ಲೇ ಇದು ಬಳಕೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಹೌದು.. ಸ್ವಿಟ್ಜರ್ಲೆಂಡ್‌ ಸರ್ಕಾರ 'ಆತ್ಮಹತ್ಯೆ ಯಂತ್ರ' ಬಳಕೆಗೆ ಕಾನೂನು ಅನುಮೋದನೆ ನೀಡಿದ್ದು, ಒಬ್ಬ ವ್ಯಕ್ತಿಯು ಕೇವಲ ಒಂದು ನಿಮಿಷದಲ್ಲಿ ಈ ಯಂತ್ರವನ್ನು ಬಳಸಿ ತನ್ನ ಪ್ರಾಣವನ್ನು ತ್ಯಾಗ ಮಾಡಬಹುದು.

ಸಾರ್ಕೋ ಎಂಬ ಸಂಸ್ಥೆ ಈ ವಿನೂತನ ಯಂತ್ರವನ್ನು ಆವಿಷ್ಕರಿಸಿದ್ದು, 2019ರಲ್ಲೇ ಈ ಆತ್ಮಹತ್ಯಾ ಸಾಧನೆವನ್ನು ಸಂಸ್ಥೆ ರಿವೀಲ್ ಮಾಡಿತ್ತು. ಆದರೆ ಇದೀಗ ಅತ್ಯಾಧುನಿಕ ಅಪ್ ಡೇಟ್ ನೊಂದಿಗೆ ಈ ಯಂತ್ರ ಬಳಕೆಗೆ ಸಿದ್ಧವಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

Portable Suicide Pod To Be Used In Switzerland
ಬೆಂಗಳೂರು: ಸಾಲ ವಸೂಲಾತಿ ಏಜೆಂಟರಿಂದ ಮನೆಗೆ ಬೀಗ; ಚಲಿಸುತ್ತಿರುವ ರೈಲಿಗೆ ತಲೆಕೊಟ್ಟು ಟೆಕ್ಕಿ ಆತ್ಮಹತ್ಯೆ

ಈ ಯಂತ್ರದ ಪ್ರಮುಖ ವಿಷಯವೆಂದರೆ, ಈ ಯಂತ್ರವನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡವರು ಯಾವುದೇ ನೋವು ಅನುಭವಿಸದೇ ಸಾಯುತ್ತಾರೆ. ಈ ಯಂತ್ರವು ಆತ್ಮಹತ್ಯೆಗಾಗಿ ಬರುವ ವ್ಯಕ್ತಿ ಬಟನ್ ಒತ್ತಿದ ಕೂಡಲೇ ಆತನಿಗೆ ಆಕ್ಸಿಜನ್ ಬದಲಿಗೆ ನೈಟ್ರೋಜನ್ ಬಿಡುಗಡೆ ಮಾಡುತ್ತದೆ. ಇದರಿಂದ ವ್ಯಕ್ತಿ ಆಕ್ಸಿಜನ್ ಸಿಗದೇ ಹೈಪೋಕ್ಸಿಯಾದಿಂದ ಕೇವಲ ಒಂದೇ ನಿಮಿಷದಲ್ಲಿ ಪ್ರಾಣಬಿಡುತ್ತಾನೆ ಎಂದು ಹೇಳಲಾಗಿದೆ.

ಈ ಆತ್ಮಹತ್ಯಾ ಪಾಡ್ ಅನ್ನು ಸ್ವಿಟ್ಜರ್ಲೆಂಡ್ ನ ''ದಿ ಲಾಸ್ಟ್ ರೆಸಾರ್ಟ್'' ಸಂಸ್ಥೆ ಆವಿಷ್ಕರಿಸಿದೆ. ಸ್ವಿಟ್ಜರ್ಲೆಂಡ್ ನಲ್ಲಿ ಆತ್ಮಹತ್ಯೆಗೆ ಕಾನೂನು ಬದ್ಧ ಮಾನ್ಯತೆ ನೀಡಿರುವುದರಿಂದ ಈ ವರೆಗೂ ಈ ಸಂಸ್ಥೆ ಸೇವೆಗೆ ಯಾವುದೇ ರೀತಿಯ ಕಾನೂನು ತೊಡಕು ಉಂಟಾಗಿಲ್ಲ.

ಸ್ವಿಟ್ಜರ್ಲೆಂಡ್ ನಲ್ಲಿ ವ್ಯಕ್ತಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಸೂಕ್ತ ಕಾರಣ ನೀಡಿದರೆ ಅಥವಾ ಆತನ ಸಾವಿಗೆ ಪೂರಕವಾದ ಅಂಶವನ್ನು ಸಾಬೀತುಪಡಿಸಿದರೆ ಆತನ ಆತ್ಮಹತ್ಯೆಗೆ ಕಾನೂನಿನಲ್ಲಿ ಅವಕಾಶವಿದೆ. ಕಾನೂನು ಆತನ ಆತ್ಮಹತ್ಯೆಗೆ ಅನುಮತಿಸುತ್ತದೆ ಎಂದು ಹೇಳಲಾಗಿದೆ.

ಈ ಬಗ್ಗೆ ಮಾತನಾಡಿರುವ ಆತ್ಮಹತ್ಯಾ ಪಾಡ್ ಯಂತ್ರದ ತಯಾರಕಾ ಸಂಸ್ಥೆ ''ದಿ ಲಾಸ್ಟ್ ರೆಸಾರ್ಟ್'' ಮುಖ್ಯ ಕಾರ್ಯನಿರ್ವಾಹಕ ಫ್ಲೋರಿಯನ್ ವಿಲೆಟ್, 'ನಮ್ಮಲ್ಲಿ ಜನರು ಆತ್ಮಹತ್ಯೆ ಮಾಡಿಕೊಳ್ಳಲು ಸರಥಿ ಸಾಲಲ್ಲಿ ನಿಂತಿದ್ದಾರೆ. ನಮ್ಮ ಸಾರ್ಕೋ ಯಂತ್ರದ ಬಳಕೆಗಾಗಿ ಕಾಯುತ್ತಿದ್ದಾರೆ. ಇಲ್ಲಿ ಸಾವು ಬಹಳ ಬೇಗ ನಡೆದುಹೋಗುತ್ತದೆ. ನಿಮ್ಮ ಸಾವು ನೋವು ರಹಿತವಾಗಿರುತ್ತದೆ ಎಂದು ನಾನು ಹೇಳಬಲ್ಲೆ. ಶಾಶ್ವತ ನಿದ್ರೆಗೆ ಬೀಳುವವರೆಗೆ ಆಮ್ಲಜನಕವಿಲ್ಲದೆ ಗಾಳಿಯನ್ನು ಉಸಿರಾಡುವ (ಸಾಯಲು) ಹೆಚ್ಚು ಸುಂದರವಾದ ಮಾರ್ಗ ಇದಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com