ಕಮಲಾ ಹ್ಯಾರಿಸ್ ತೀವ್ರ ಎಡಪಂಥೀಯ ಮನಸ್ಥಿತಿಯವರು, ಅವರು ಅಮೆರಿಕ ಅಧ್ಯಕ್ಷರಾಗಲು ಅನರ್ಹರು: ಡೊನಾಲ್ಡ್ ಟ್ರಂಪ್

ಈ ವರ್ಷಾಂತ್ಯಕ್ಕೆ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದು ಕಮಲಾ ಹ್ಯಾರಿಸ್ ಅವರು ನಮ್ಮ ಪಕ್ಷದ ಅಭ್ಯರ್ಥಿ ಎಂದು ಜೋ ಬೈಡನ್ ಅವರು ಘೋಷಣೆ ಮಾಡಿದ ನಂತರ 78 ವರ್ಷದ ಡೊನಾಲ್ಡ್ ಟ್ರಂಪ್ ಕಮಲಾ ಹ್ಯಾರಿಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪ್ರಚಾರ ತೀವ್ರವಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಿನ್ನೆ ಮಾಡಿದ ಪ್ರಚಾರ ಭಾಷಣದಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಈಗಿನ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಕಟುವಾಗಿ ಟೀಕಿಸಿದ್ದಾರೆ. ಕಮಲಾ ಹ್ಯಾರಿಸ್ ಅವರು ಆಡಳಿತ ನಡೆಸಲು ಅನರ್ಹರು ಮತ್ತು ಅವರು ತೀವ್ರಗಾಮಿ ಎಡಪಂಥೀಯ ಮನಸ್ಥಿತಿಯವರು ಎಂದು ವ್ಯಾಖ್ಯಾನಿಸಿದ್ದಾರೆ.

ಈ ವರ್ಷಾಂತ್ಯಕ್ಕೆ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದು ಕಮಲಾ ಹ್ಯಾರಿಸ್ ಅವರು ನಮ್ಮ ಪಕ್ಷದ ಅಭ್ಯರ್ಥಿ ಎಂದು ಜೋ ಬೈಡನ್ ಅವರು ಘೋಷಣೆ ಮಾಡಿದ ನಂತರ 78 ವರ್ಷದ ಡೊನಾಲ್ಡ್ ಟ್ರಂಪ್ ಕಮಲಾ ಹ್ಯಾರಿಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.

ಡೊನಾಲ್ಡ್ ಟ್ರಂಪ್
ಅಮೆರಿಕನ್ ರಾಜಕಾರಣದಲ್ಲಿ ನವಯುಗಕ್ಕೆ ನಾಂದಿಯಾಗಲಿದೆಯೇ JD Vance ಉತ್ಕರ್ಷ? (ಜಾಗತಿಕ ಜಗಲಿ)

ಕಮಲಾ ಹ್ಯಾರಿಸ್ ಅವರು ತೀವ್ರ ಎಡಪಂಥೀಯ ಮನಸ್ಥಿತಿಯವರಾಗಿದ್ದು, ಅವರಿಗೆ ಅಧಿಕಾರ ಸಿಕ್ಕಿದರೆ ನಮ್ಮ ದೇಶವನ್ನು ನಾಶ ಮಾಡಿಬಿಡುತ್ತಾರೆ. ಅದಾಗಲು ನಾವು ಬಿಡುವುದಿಲ್ಲ. ಕೆಲ ದಿನಗಳ ಹಿಂದೆ ನನ್ನ ಮೇಲೆ ಗುಂಡಿನ ದಾಳಿ ನಡೆದು ಅದೃಷ್ಟವಶಾತ್ ಗುಣಮುಖನಾಗಿ ಬಂದಿದ್ದೇನೆ. ಇಂತಹ ಎಡಪಂಥೀಯ ಮನಸ್ಥಿತಿಯವರೊಂದಿಗೆ ವ್ಯವಹರಿಸುವುದು ಕಷ್ಟದ ವಿಷಯ, ಇಂಥವರು ಅಪಾಯಕಾರಿ. ಅಂಥವರ ಜೊತೆ ಒಡನಾಟ ಹೊಂದಿರುವಾಗ ನೀವು ಚೆನ್ನಾಗಿರಲು ಸಾಧ್ಯವಿಲ್ಲ. ದೇಶದ ಜನತೆ ಎಚ್ಚೆತ್ತುಕೊಳ್ಳಬೇಕು. ನಾನು ಚೆನ್ನಾಗಿರಬೇಕೆಂದು ನಿಮಗೆ ಅನಿಸುವುದಿಲ್ಲವೇ ಎಂದು ತಮ್ಮ ಬೆಂಬಲಿಗರ ಮಧ್ಯೆ ಭಾಷಣ ಮಾಡಿದಾಗ ಪ್ರೇಕ್ಷಕರಿಂದ ಸಾಕಷ್ಟು ಕರತಾಡನ ಕೇಳಿಬಂತು.

ಕಮಲಾ ಹ್ಯಾರಿಸ್: ಕಮಲಾ ಹ್ಯಾರಿಸ್ ಅಮೆರಿಕದ ಇತಿಹಾಸದಲ್ಲಿ ಅತ್ಯಂತ ಉದಾರವಾದಿ ಚುನಾಯಿತ ರಾಜಕಾರಣಿ. ಆಕೆ ಅತಿ ಉದಾರವಾದಿ ರಾಜಕಾರಣಿ. ಅಷ್ಟೇ ಅಪಾಯಕಾರಿ ಕೂಡ. ಅವರು ಬರ್ನಿ ಸ್ಯಾಂಡರ್ಸ್‌ಗಿಂತ ಹೆಚ್ಚು ಉದಾರವಾದಿ ಎಂದರು. ಅವರು ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷೆಯಾದರೆ ದೇಶವನ್ನು ನಾಶ ಮಾಡಿಬಿಡುತ್ತಾರೆ ಎಂದು ಟೀಕಿಸಿದರು.

ಇನ್ನು ಜೋ ಬೈಡನ್ ವಿರುದ್ಧ ಕೂಡ ವಾಗ್ದಾಳಿ ಮುಂದುವರಿಸಿದ ಟ್ರಂಪ್, ಈ ವ್ಯಕ್ತಿ ಹೇಗೆ ಅಧ್ಯಕ್ಷರಾದರು, ಕಳೆದ ಮೂರೂವರೆ ವರ್ಷಗಳಲ್ಲಿ ಅವರು ಈ ದೇಶಕ್ಕೆ ಏನು ಮಾಡಿದ್ದಾರೆ ಅದನ್ನು ಬದಲಿಸಬೇಕಿದೆ. ಡೆಮಾಕ್ರಟಿಕ್ ಪಕ್ಷದವರು ದೇಶಕ್ಕೆ ಮಾಡಿರುವುದನ್ನು ಯೋಚನೆ ಮಾಡಲು ಸಾಧ್ಯವಿಲ್ಲ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com