
ಪ್ಯಾರೀಸ್: ಒಲಿಂಪಿಕ್ಸ್ 2024 ಕ್ಕೆ ಅಡಚಣೆ ಉಂಟು ಮಾಡಲು ಯೋಜಿಸಿದ್ದ ರಷ್ಯಾ ಪ್ರಜೆಯನ್ನು ಫ್ರಾನ್ಸ್ ನ ರಾಜಧಾನಿಯಲ್ಲಿ ಬಂಧಿಸಲಾಗಿದೆ.
ಬಂಧಿತ ರಷ್ಯಾ ಪ್ರಜೆ 14 ವರ್ಷಗಳಿಂದ ಪ್ಯಾರಿಸ್ ನಲ್ಲಿ ವಾಸವಿದ್ದ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಶುಕ್ರವಾರ (ಜು.26) ರಂದು ಸೀನ್ ನದಿ ದಡದಲ್ಲಿ ದೋಣಿ ಮೆರವಣಿಗೆ (boat parade) ಒಳಗೊಂಡ ಕಾರ್ಯಕ್ರಮದ ಮೂಲಕ ಒಲಂಪಿಕ್ಸ್ ಗೆ ಚಾಲನೆ ಸಿಗಲಿದೆ.
ಪ್ಯಾರಿಸ್‌ನ ಪಾಕಶಾಲೆಯೊಂದರಲ್ಲಿ ತರಬೇತಿ ಪಡೆದ ಮಾಜಿ ರಿಯಾಲಿಟಿ ಟಿವಿ ತಾರೆಯಾಗಿರುವ 40 ವರ್ಷದ ವ್ಯಕ್ತಿ ಜುಲೈ 21 ರಂದು ಬಂಧಿಸುವ ಮೊದಲು ಒಲಿಂಪಿಕ್ಸ್ ನ ಉದ್ಘಾಟನಾ ಸಮಾರಂಭವನ್ನು ಅಡ್ಡಿಪಡಿಸುವುದಾಗಿ ಹೇಳಿ ಸುದ್ದಿಯಾಗಿದ್ದ ಎಂದು ಫ್ರೆಂಚ್ ಪತ್ರಿಕೆ ಲೆ ಮಾಂಡೆ ವರದಿ ಮಾಡಿದೆ.
ಫ್ರೆಂಚ್ ಮಾಧ್ಯಮದ ಪ್ರಕಾರ, ಬಂಧಿತ ವ್ಯಕ್ತಿ ಫೆಡರಲ್ ಸೆಕ್ಯುರಿಟಿ ಸರ್ವಿಸ್ (ಎಫ್‌ಎಸ್‌ಬಿ), ರಷ್ಯಾದ ಆಂತರಿಕ ಭದ್ರತೆ ಮತ್ತು ಪ್ರತಿ-ಗುಪ್ತಚರ ಸೇವೆಯ ಏಜೆಂಟ್ ಆಗಿದ್ದಾನೆ ಎಂದು ತಿಳಿದುಬಂದಿದೆ.
Advertisement