ಮೆಕ್ಸಿಕೊ: ಬರ್ಡ್ ಫ್ಲೂ (bird flu) ಗೆ ಕಾರಣವಾಗುವ ಏವಿಯನ್ ಇನ್ಫ್ಲುಯೆನ್ಸ ವೈರಾಣುವಿಗೆ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಮೊದಲ ಪ್ರಕರಣ ಮೆಕ್ಸಿಕೋದಲ್ಲಿ ವರದಿಯಾಗಿದೆ.
ಡಬ್ಲ್ಯುಹೆಚ್ಒ ಈ ಮಾಹಿತಿಯನ್ನು ದೃಢಪಡಿಸಿದೆ. ಇದು ಜಾಗತಿಕವಾಗಿ ವರದಿಯಾದ ಇನ್ಫ್ಲುಯೆನ್ಸ A (H5N2) ವೈರಸ್‌ನ ಸೋಂಕಿನ ಮಾನವನ ಮೊದಲ ಪ್ರಯೋಗಾಲಯ-ದೃಢಪಡಿಸಿದ ಪ್ರಕರಣವಾಗಿದೆ ಮತ್ತು ಮೆಕ್ಸಿಕೊದಲ್ಲಿ ವರದಿಯಾದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು WHO ಹೇಳಿಕೆಯಲ್ಲಿ ತಿಳಿಸಿದೆ.
ಮೇ 23, 2024 ರಂದು ಮೆಕ್ಸಿಕೋ IHR NFP ಯಿಂದ PAHO/WHO ಗೆ ಸೋಂಕು ಮೊದಲು ವರದಿಯಾಗಿತ್ತು. 59 ವರ್ಷದ ಮೆಕ್ಸಿಕೋ ನಿವಾಸಿಯನ್ನು ಮೆಕ್ಸಿಕೋ ನಗರದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತ ಕೋಳಿ ಅಥವಾ ಇತರ ಪ್ರಾಣಿಗಳಿಂದ ಸೋಂಕಿತರಾಗಿರುವುದು ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.
ಹೇಳಿಕೆಯ ಪ್ರಕಾರ, ವ್ಯಕ್ತಿಯು ಒಂದಕ್ಕಿಂತ ಹೆಚ್ಚಿನ ವೈದ್ಯಕೀಯ ಸಮಸ್ಯೆಗಳನ್ನು ಹೊಂದಿದ್ದರು ಮತ್ತು ತೀವ್ರತರವಾದ ರೋಗಲಕ್ಷಣಗಳು ಪ್ರಾರಂಭವಾಗುವ ಮೊದಲು ಇತರ ಕಾರಣಗಳಿಗಾಗಿ ಮೂರು ವಾರಗಳ ಕಾಲ ಚಿಕಿತ್ಸೆ ಪಡೆದಿದ್ದರು
UN ಆರೋಗ್ಯ ಸಂಸ್ಥೆಯ ಹೇಳಿಕೆಯ ಪ್ರಕಾರ, ಏಪ್ರಿಲ್ 17 ರಂದು, ವ್ಯಕ್ತಿಯು ಜ್ವರ, ಉಸಿರಾಟದ ತೊಂದರೆ, ಅತಿಸಾರ, ವಾಕರಿಕೆ ಮತ್ತು ಸಾಮಾನ್ಯ ಅಸ್ವಸ್ಥತೆ ಎದುರಿಸಿದ್ದರು
Advertisement