ಅಮೇರಿಕಾ ನಿಯೋಗದಿಂದ ದಲೈ ಲಾಮ ಭೇಟಿ: ಚೀನಾ ಪ್ರತಿಕ್ರಿಯೆ ಹೀಗಿದೆ...

ಅಮೇರಿಕಾ ಟಿಬೆಟ್ ಗೆ ಸಂಬಂಧಿಸಿದಂಟೆ ಕಠಿಣ ನೀತಿಗಳನ್ನು ಜಾರಿಗೊಳಿಸುವುದಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ದಲೈ ಲಾಮ ಭೇಟಿ ಹಾಗೂ ಅದಕ್ಕೆ ಸಂಬಂಧಿಸಿದಂತೆ ಚೀನಾ ಪ್ರತಿಕ್ರಿಯೆ ಪ್ರಾಮುಖ್ಯತೆ ಪಡೆದುಕೊಂಡಿದೆ.
US Delegation Meets Dalai Lama In Dharamsala
ದಲೈ ಲಾಮ- ಅಮೇರಿಕಾ ನಿಯೋಗonline desk

ಬೀಜಿಂಗ್: ಅಮೇರಿಕಾ ನಿಯೋಗವೊಂದು ದಲೈ ಲಾಮ ಅವರನ್ನು ಭೇಟಿ ಮಾಡಿರುವುದರ ಬಗ್ಗೆ ಚೀನಾ ಪ್ರತಿಕ್ರಿಯೆ ನೀಡಿದೆ.

ದಲೈ ಲಾಮ ಅವರೊಂದಿಗೆ ಮಾತುಕತೆ ನಡೆಸಬೇಕಾದರೆ, ಅವರ ಅದರ ರಾಜಕೀಯ ಪ್ರತಿಪಾದನೆಗಳನ್ನು ಸಂಪೂರ್ಣವಾಗಿ ಪ್ರತಿಬಿಂಬಿಸಿ ಮತ್ತು ಸಂಪೂರ್ಣವಾಗಿ ಸರಿಪಡಿಸಿಕೊಳ್ಳಬೇಕು ಎಂದು ಹೇಳಿದೆ. ಇದೇ ವೇಳೆ ಟಿಬೆಟ್-ಸಂಬಂಧಿತ ಸಮಸ್ಯೆಗಳಿಗೆ ಚೀನಾದ ಸೂಕ್ಷ್ಮತೆ ಮತ್ತು ಪ್ರಾಮುಖ್ಯತೆಯನ್ನು ಗೌರವಿಸಲು ಕೇಳಿದೆ.

ಅಮೇರಿಕಾ ಟಿಬೆಟ್ ಗೆ ಸಂಬಂಧಿಸಿದಂಟೆ ಕಠಿಣ ನೀತಿಗಳನ್ನು ಜಾರಿಗೊಳಿಸುವುದಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ದಲೈ ಲಾಮ ಭೇಟಿ ಹಾಗೂ ಅದಕ್ಕೆ ಸಂಬಂಧಿಸಿದಂತೆ ಚೀನಾ ಪ್ರತಿಕ್ರಿಯೆ ಪ್ರಾಮುಖ್ಯತೆ ಪಡೆದುಕೊಂಡಿದೆ.

14 ನೇ ದಲೈಲಾಮಾ ಅವರೊಂದಿಗೆ ಕೇಂದ್ರ ಸರ್ಕಾರದ ಸಂಪರ್ಕ ಮತ್ತು ಮಾತುಕತೆಗಳ ಕುರಿತು ಚೀನಾದ ನೀತಿ ಸ್ಥಿರ ಮತ್ತು ಸ್ಪಷ್ಟವಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಉನ್ನತ ಅಧಿಕಾರದ ಯುಎಸ್ ಕಾಂಗ್ರೆಷನಲ್ ನಿಯೋಗದ ಧರ್ಮಶಾಲಾ ಭೇಟಿ ಮತ್ತು 88 ವರ್ಷದ ದಲೈ ಲಾಮಾ ಅವರೊಂದಿಗಿನ ಸಭೆಯನ್ನು ಚೀನಾ ಎಚ್ಚರಿಕೆಯಿಂದ ಗಮನಿಸಿದೆ. ಜೊತೆಗೆ ಅದರ ಪ್ರಮುಖ ಸದಸ್ಯರಾದ ಯುಎಸ್ ಹೌಸ್ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಮೈಕೆಲ್ ಮೆಕಾಲ್ ಮತ್ತು ಯುಎಸ್ ಹೌಸ್ ಮಾಜಿ ಸ್ಪೀಕರ್ ನ್ಯಾನ್ಸಿ ಪೆಲೋಸಿ ಟಿಬೆಟ್ ಬಗ್ಗೆ ಚೀನಾದ ನೀತಿ ಮತ್ತು ದಲೈ ಲಾಮಾ ಅವರೊಂದಿಗೆ ಮಾತುಕತೆ ನಡೆಸಲು ಚೀನಾದ ಕರೆಯ ಕುರಿತು ಪ್ರಬಲ ಟೀಕೆಗಳನ್ನು ಮಾಡಿದ್ದಾರೆ.

US Delegation Meets Dalai Lama In Dharamsala
ದಲೈ ಲಾಮ ಜೊತೆ ಮಾತುಕತೆಗೆ ಸಿದ್ಧ; ಆದರೆ ಟಿಬೆಟ್ ವಿಷಯವಾಗಿ ಅಲ್ಲ: ಚೀನಾ

ಯುಎಸ್ ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಎರಡೂ ಅಂಗೀಕರಿಸಿದ ಟಿಬೆಟ್ ನೀತಿ ಮಸೂದೆಗೆ ಯುಎಸ್ ಅಧ್ಯಕ್ಷ ಜೋ ಬಿಡೆನ್ ಸಿದ್ಧವಿದ್ದು, ಈ ಹಂತದಲ್ಲಿ ಅಮೇರಿಕಾ ನಿಯೋಗ ದಲೈ ಲಾಮ ಅವರನ್ನು ಭೇಟಿ ಮಾಡಿರುವುದು ಮಹತ್ವ ಪಡೆದುಕೊಂಡಿದೆ.

ಟಿಬೆಟ್‌ನ ಮೇಲಿನ ತನ್ನ ನಿಯಂತ್ರಣದ ಕುರಿತು ಚೀನಾದ ನಿರೂಪಣೆಯನ್ನು ಎದುರಿಸಲು ಮತ್ತು 1959 ರಲ್ಲಿ ಹಿಮಾಲಯ ಪ್ರದೇಶದಿಂದ ಪಲಾಯನ ಮಾಡಿದ ನಂತರ ಭಾರತದಲ್ಲಿ ನೆಲೆಸಿರುವ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರ ನಡುವಿನ ಮಾತುಕತೆಯನ್ನು ಉತ್ತೇಜಿಸಲು ಮಸೂದೆ ಪ್ರಯತ್ನಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com