ಬಿಲಿಯನೇರ್ ಹಿಂದೂಜಾ ಕುಟುಂಬದ ಪ್ರಕಾಶ್ ಹಿಂದೂಜಾ ಸೇರಿ 4 ಮಂದಿಗೆ 4.5 ವರ್ಷ ಜೈಲು ಶಿಕ್ಷೆ!

ಭಾರತದಿಂದ ಕರೆತಂದ ಮನೆ ಕೆಲಸದವರನ್ನು ಶೋಷಣೆಗೆ ಒಳಪಡಿಸಿದ ಆರೋಪದ ಮೇಲೆ ಬ್ರಿಟನ್‌ನ ಶ್ರೀಮಂತ ಕುಟುಂಬಗಳಲ್ಲೊಂದಾದ ಹಿಂದೂಜಾ ಕುಟುಂಬದ ನಾಲ್ವರನ್ನು ಸ್ವಿಸ್ ನ್ಯಾಯಾಲಯವೊಂದು ತಪ್ಪಿತಸ್ಥರೆಂದು ಘೋಷಿಸಿದ್ದು ನಾಲ್ಕೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಹಿಂದೂಜಾ ಕುಟುಂಬ
ಹಿಂದೂಜಾ ಕುಟುಂಬ
Updated on

ಭಾರತದಿಂದ ಕರೆತಂದ ಮನೆ ಕೆಲಸದವರನ್ನು ಶೋಷಣೆಗೆ ಒಳಪಡಿಸಿದ ಆರೋಪದ ಮೇಲೆ ಬ್ರಿಟನ್‌ನ ಶ್ರೀಮಂತ ಕುಟುಂಬಗಳಲ್ಲೊಂದಾದ ಹಿಂದೂಜಾ ಕುಟುಂಬದ ನಾಲ್ವರನ್ನು ಸ್ವಿಸ್ ನ್ಯಾಯಾಲಯವೊಂದು ತಪ್ಪಿತಸ್ಥರೆಂದು ಘೋಷಿಸಿದ್ದು ನಾಲ್ಕೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಆದರೆ, ಮಾನವ ಕಳ್ಳಸಾಗಣೆ ಆರೋಪವನ್ನು ನ್ಯಾಯಾಲಯ ತಿರಸ್ಕರಿಸಿದೆ.

ಜಿನೀವಾ ಸರೋವರದಲ್ಲಿರುವ ಹಿಂದೂಜಾ ಕುಟುಂಬದ ಬಂಗಲೆಯಲ್ಲಿ ಈ ಘಟನೆ ನಡೆದಿದೆ. ಸ್ವಿಸ್ ಕೋರ್ಟ್ ಪ್ರಕಾಶ್ ಹಿಂದೂಜಾ ಮತ್ತು ಅವರ ಪತ್ನಿ ಕಮಲ್ ಹಿಂದುಜಾಗೆ 4.5 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅವರ ಪುತ್ರ ಅಜಯ್ ಹಿಂದುಜಾ ಮತ್ತು ಅವರ ಪತ್ನಿ ನಮ್ರತಾ ಹಿಂದುಜಾ ಅವರಿಗೆ ತಲಾ ನಾಲ್ಕು ವರ್ಷಗಳ ಶಿಕ್ಷೆ ವಿಧಿಸಿದೆ.

ಈ ಆದೇಶದ ವಿರುದ್ಧ ನಾಲ್ವರು ಆರೋಪಿಗಳು ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಿದ್ದಾರೆ. ಹಿಂದೂಜಾ ಕುಟುಂಬದ ಸದಸ್ಯರು ತಮ್ಮ ಮನೆ ಕೆಲಸದವರನ್ನು ಶೋಷಣೆಗೆ ಒಳಪಡಿಸಿದ ಮತ್ತು ಅವರಿಗೆ ಅಲ್ಪ ಪ್ರಮಾಣದ ಆರೋಗ್ಯ ಪ್ರಯೋಜನಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ. ಹಿಂದೂಜಾ ಕುಟುಂಬವು ತನ್ನ ಉದ್ಯೋಗಿಗಳಿಗೆ ಅವರ ಕೆಲಸಕ್ಕಾಗಿ ನೀಡುತ್ತಿರುವ ಸಂಬಳವು ಸ್ವಿಟ್ಜರ್ಲೆಂಡ್‌ನಲ್ಲಿ ಅಂತಹ ಉದ್ಯೋಗಗಳಿಗೆ ನೀಡುವ ಸಂಬಳದ ಹತ್ತನೇ ಒಂದು ಭಾಗಕ್ಕಿಂತ ಕಡಿಮೆ ಎಂದು ನ್ಯಾಯಾಲಯ ಹೇಳಿದೆ.

ಹಿಂದೂಜಾ ಕುಟುಂಬ
ಪನ್ನುನ್ ಹತ್ಯೆಗೆ ಸಂಚು: ಅಮೆರಿಕ ನ್ಯಾಯಾಲಯದ ಮುಂದೆ ನಿಖಿಲ್​ ಗುಪ್ತಾ ಹಾಜರು, ನಾನು ತಪ್ಪು ಮಾಡಿಲ್ಲ ಎಂದು ಹೇಳಿಕೆ!

ಬ್ರಿಟನ್‌ನ ಶ್ರೀಮಂತ ಹಿಂದೂಜಾ ಕುಟುಂಬವು ಅವರ ಮನೆ ಸಹಾಯಕರ ಪಾಸ್‌ಪೋರ್ಟ್‌ಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು. ನೌಕರನ ಸಂಬಳಕ್ಕಿಂತ ತನ್ನ ನಾಯಿಗೆ ಹೆಚ್ಚು ಖರ್ಚು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದಲ್ಲದೆ, ಉದ್ಯೋಗಿಗಳಿಗೆ ಸ್ವಿಸ್ ಫ್ರಾಂಕ್‌ಗಳ ಬದಲಿಗೆ ರೂಪಾಯಿಗಳಲ್ಲಿ ಪಾವತಿಸಲಾಯಿತು. ಹಿಂದೂಜಾ ಕುಟುಂಬವು ತಮ್ಮ ಮನೆಕೆಲಸಗಾರರನ್ನು ಬಂಗಲೆಯಿಂದ ಹೊರಹೋಗದಂತೆ ನಿಷೇಧಿಸಿತು. ದೀರ್ಘ ಗಂಟೆಗಳ ಕಾಲ ಕೆಲಸ ಮಾಡುವಂತೆ ಒತ್ತಾಯಿಸಿತು. ಹಲವಾರು ಸಂದರ್ಭಗಳಲ್ಲಿ, ಹಿಂದೂಜಾ ಕುಟುಂಬದ ಸದಸ್ಯರಿಂದ ನೌಕರರು ದಿನಕ್ಕೆ 18 ಗಂಟೆಗೂ ಹೆಚ್ಚು ಅಥವಾ ರಜೆಯಿಲ್ಲದೆ ಕೆಲಸ ಮಾಡುವಂತೆ ಒತ್ತಾಯಿಸಿದರು ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿತ್ತು.

ಹಿಂದೂಜಾ ಕುಟುಂಬವು ತಮ್ಮ ಗೃಹ ಸಹಾಯಕರಿಗೆ 18 ಗಂಟೆಗಳ ಕೆಲಸಕ್ಕೆ ಭಾರತೀಯ ರೂಪಾಯಿಯಲ್ಲಿ 6.19 ಫ್ರಾಂಕ್‌ಗಳಿಗೆ ಸಮಾನವಾದ ವೇತನವನ್ನು ಮಾತ್ರ ನೀಡುತ್ತಿದೆ ಎಂದು ಆರೋಪಿಸಲಾಗಿದೆ. ಅದೇ ಸಮಯದಲ್ಲಿ, ಕುಟುಂಬವು ತಮ್ಮ ಸಾಕು ನಾಯಿಗಾಗಿ ವಾರ್ಷಿಕವಾಗಿ 8554 ಫ್ರಾಂಕ್ಗಳನ್ನು ಖರ್ಚು ಮಾಡಿತು. ಪ್ರಕಾಶ್ ಹಿಂದೂಜಾ ಮತ್ತು ಕಮಲ್ ಹಿಂದುಜಾ ಅವರ ವಯಸ್ಸು ಮತ್ತು ಅನಾರೋಗ್ಯದ ಕಾರಣಕ್ಕಾಗಿ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಲಿಲ್ಲ. ಆದರೆ ನ್ಯಾಯಾಲಯವು ಅಜಯ್ ಹಿಂದುಜಾ ಮತ್ತು ನಮ್ರತಾ ಹಿಂದುಜಾ ಅವರನ್ನು ಬಂಧಿಸಲು ಆದೇಶಿಸಿದೆ.

ಭಾರತದಲ್ಲಿ ತನ್ನ ಬೇರುಗಳನ್ನು ಹೊಂದಿರುವ ಹಿಂದೂಜಾ ಕುಟುಂಬವು 1980ರ ದಶಕದ ಅಂತ್ಯದಲ್ಲಿ ಸ್ವಿಟ್ಜರ್ಲೆಂಡ್ನಲ್ಲಿ ನೆಲೆಸಿತ್ತು. ಹಿಂದುಜಾ ಗ್ರೂಪ್ ಐಟಿ, ಮಾಧ್ಯಮ, ವಿದ್ಯುತ್, ರಿಯಲ್ ಎಸ್ಟೇಟ್ ಮತ್ತು ಆರೋಗ್ಯದಂತಹ ಕ್ಷೇತ್ರಗಳಲ್ಲಿ ವ್ಯವಹಾರವನ್ನು ಹೊಂದಿದೆ. ಫೋರ್ಬ್ಸ್ ಪ್ರಕಾರ, ಹಿಂದೂಜಾ ಕುಟುಂಬದ ಒಟ್ಟು ಸಂಪತ್ತು ಸುಮಾರು 20 ಬಿಲಿಯನ್ ಡಾಲರ್ ಆಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com