ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನೈಜೀರಿಯಾ: ಮದುವೆ ಸಮಾರಂಭದಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟ; 18 ಮಂದಿ ಸಾವು

ಮದುವೆ ಸಮಾರಂಭ ನಡೆಯುತ್ತಿದ್ದ ಸಂದರ್ಭ ಶನಿವಾರ 3 ಗಂಟೆ ಸುಮಾರಿಗೆ ಮೊದಲ ಸ್ಪೋಟ ಸಂಭವಿಸಿದೆ. ಗ್ವೋಜಾ ಸರ್ಕಾರಿ ಆಸ್ಪತ್ರೆಯಲ್ಲಿ ಎರಡನೇ ಸ್ಟೋಟ ಮತ್ತು ಅಂತ್ಯಸಂಸ್ಕಾರದ ವೇಳೆ 3ನೇ ಸ್ಫೋಟ ಸಂಭವಿಸಿದೆ.
Published on

ನೈಜೀರಿಯಾ: ನೈಜೀರಿಯಾದ ಈಶಾನ್ಯ ರಾಜ್ಯ ಬಾರ್ನೊದಲ್ಲಿ ಸಂಭವಿಸಿದ ಆತ್ಮಾಹುತಿ ಸರಣಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ 18 ಮಂದಿ ಮೃತಪಟ್ಟಿದ್ದು, 48 ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ತುರ್ತು ಸೇವೆ ನಿರ್ವಹಣಾ ಸಂಸ್ಥೆಯನ್ನು(ಎಸ್‌ಇಎಂಎ) ಉಲ್ಲೇಖಿಸಿ ಸಿಎನ್‌ಎನ್‌ ವರದಿ ಮಾಡಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ತಿಳಿಸಿದೆ.

ಮದುವೆ ಸಮಾರಂಭ ನಡೆಯುತ್ತಿದ್ದ ಸಂದರ್ಭ ಶನಿವಾರ 3 ಗಂಟೆ ಸುಮಾರಿಗೆ ಮೊದಲ ಸ್ಪೋಟ ಸಂಭವಿಸಿದೆ. ಗ್ವೋಜಾ ಸರ್ಕಾರಿ ಆಸ್ಪತ್ರೆಯಲ್ಲಿ ಎರಡನೇ ಸ್ಟೋಟ ಮತ್ತು ಅಂತ್ಯಸಂಸ್ಕಾರದ ವೇಳೆ 3ನೇ ಸ್ಫೋಟ ಸಂಭವಿಸಿದೆ. ಬಾರ್ನೊ ರಾಜ್ಯದ ತುರ್ತು ಸೇವೆಗಳ ನಿರ್ವಹಣಾ ಸಂಸ್ಥೆಯ (ಎಸ್‌ಇಎಂಎ) ಡಿಜಿ ಬರ್ಕಿಂಡೋ ಮುಹಮ್ಮದ್ ಸೈದು ಅವರು ಗ್ವೋಜಾ ಪಟ್ಟಣದ ಸ್ಫೋಟದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರಲ್ಲಿ ಮಹಿಳೆಯರು, ಪುರುಷರು ಮತ್ತು ಮಕ್ಕಳು ಸೇರಿದ್ದಾರೆ.

ಇದುವರೆಗೆ, ಮಕ್ಕಳು, ಪುರುಷರು, ಮಹಿಳೆಯರು ಮತ್ತು ಗರ್ಭಿಣಿಯರನ್ನು ಒಳಗೊಂಡಂತೆ 18 ಸಾವುಗಳು ವರದಿಯಾಗಿವೆ ಎಂದು ಏಜೆನ್ಸಿಯ ಮುಖ್ಯಸ್ಥ ಬರ್ಕಿಂಡೋ ಸೈದು ತಿಳಿಸಿದ್ದಾರೆ. "ಗಂಭೀರವಾಗಿ ಗಾಯಗೊಂಡ" ಹತ್ತೊಂಬತ್ತು ಜನರನ್ನು ಪ್ರಾದೇಶಿಕ ರಾಜಧಾನಿ ಮೈದುಗುರಿಗೆ ಕರೆದೊಯ್ಯಲಾಯಿತು, ಇತರ 23 ಜನರು ಸ್ಥಳಾಂತರಿಸುವಿಕೆಗೆ ಕಾಯುತ್ತಿದ್ದಾರೆ ಎಂದು ಸೈದು ವರದಿಯಲ್ಲಿ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಡ್ರಗ್ಸ್ ಕೇಸ್: ಬಂಧಿಸಲು ಬಂದ ಬೆಂಗಳೂರು ಪೊಲೀಸರನ್ನು ಅಟ್ಟಾಡಿಸಿ ಹೊಡೆದ ನೈಜೀರಿಯಾ ಪ್ರಜೆಗಳು!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com