ರಷ್ಯಾ ಕ್ಷಿಪಣಿ ದಾಳಿಯಿಂದ ಉಕ್ರೇನ್ ಅಧ್ಯಕ್ಷ, ಗ್ರೀಕ್ ಪ್ರಧಾನಿ ಕೂದಲೆಳೆ ಅಂತರದಲ್ಲಿ ಪಾರು!

ರಷ್ಯಾ-ಉಕ್ರೇನ್ ನಡುವಿನ ಯುದ್ಧ ಮುಂದುವರೆದಿರುವಂತೆಯೇ ಇತ್ತ ರಷ್ಯಾ ಸೇನೆಯ ಕ್ಷಿಪಣಿ ದಾಳಿಯಿಂದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಗ್ರೀಕ್ ಪ್ರಧಾನಿ ಕಿರಿಯಾಕೋಸ್ ಮಿಟ್ಸೊಟಾಕಿಸ್ ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ- ಗ್ರೀಕ್ ಪ್ರಧಾನಿ ಮಿಟ್ಸೊಟಾಕಿಸ್
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ- ಗ್ರೀಕ್ ಪ್ರಧಾನಿ ಮಿಟ್ಸೊಟಾಕಿಸ್

ಮಾಸ್ಕೋ: ರಷ್ಯಾ-ಉಕ್ರೇನ್ ನಡುವಿನ ಯುದ್ಧ ಮುಂದುವರೆದಿರುವಂತೆಯೇ ಇತ್ತ ರಷ್ಯಾ ಸೇನೆಯ ಕ್ಷಿಪಣಿ ದಾಳಿಯಿಂದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಗ್ರೀಕ್ ಪ್ರಧಾನಿ ಕಿರಿಯಾಕೋಸ್ ಮಿಟ್ಸೊಟಾಕಿಸ್ ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಬುಧವಾರ ಕಪ್ಪು ಸಮುದ್ರದ ಬಂದರು ನಗರವಾದ ಒಡೆಸಾಗೆ ಭೇಟಿ ನೀಡುತ್ತಿದ್ದ ವೇಳೆ ರಷ್ಯಾದ ಕ್ಷಿಪಣಿ ದಾಳಿ ಮಾಡಿದೆ ಎಂದು ಸಿಎನ್ಎನ್ ಸುದ್ದಿಸಂಸ್ಥೆ ವರದಿ ಮಾಡಿದೆ. ರಷ್ಯಾದ ಕ್ಷಿಪಣಿ ಉಭಯ ನಾಯಕರು ಇದ್ದ ಸ್ಥಳದಿಂದ ಕೇವಲ 500 ಮೀಟರ್ ದೂರದಲ್ಲಿ ಸ್ಫೋಟಿಸಿದೆ. ಸ್ಫೋಟದ ಬಳಿಕ ದಟ್ಟಹೊಗೆ ಆವರಿಸಿದ್ದು, ಇದು "ಮಶ್ರೂಮ್ ಮೋಡ" ಕ್ಕೆ ಸಾಕ್ಷಿಯಾಯಿತು ಮತ್ತು ಈ ಕ್ಷಿಪಣಿ ದಾಳಿಯಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ- ಗ್ರೀಕ್ ಪ್ರಧಾನಿ ಮಿಟ್ಸೊಟಾಕಿಸ್
ರಷ್ಯಾ-ಉಕ್ರೇನ್ ಯುದ್ಧದಲ್ಲಿ 2ನೇ ಭಾರತೀಯ ಸಾವು, ವಂಚನೆಗೊಳಗಾಗಿ 'Wagner Army' ಸೇರಿದ್ದ ತೆಲಂಗಾಣ ಯುವಕ!

ಇದೇ ವಿಚಾರವಾಗಿ ಮಾಹಿತಿ ನೀಡಿರುವ ಉಕ್ರೇನಿಯನ್ ನೌಕಾಪಡೆಯ ವಕ್ತಾರರಾದ ಡಿಮಿಟ್ರೋ ಪ್ಲೆಟೆನ್‌ಚುಕ್ ಅವರು, ಕ್ಷಿಪಣಿ ದಾಳಿ ಮತ್ತು ಆ ಬಳಿಕ ನಡೆದ ಸ್ಫೋಟದಲ್ಲಿ ಐದು ಮಂದಿ ಬಲಿಯಾಗಿದ್ದಾರೆ ಎಂದು ಹೇಳಿದ್ದಾರೆ. ಆದರೆ ಸಿಎನ್‌ಎನ್ ಪ್ರಕಾರ, ಕ್ಷಿಪಣಿ ಸ್ಫೋಟದ ಸಾಮೀಪ್ಯದ ಹೊರತಾಗಿಯೂ ಜೆಲೆನ್ಸ್ಕಿ ಮತ್ತು ಮಿಟ್ಸೊಟಾಕಿಸ್ ಇಬ್ಬರೂ ಹಾನಿಗೊಳಗಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿ ಮಾಡಿದೆ.

ತನ್ನ ಧೈರ್ಯಶಾಲಿ ಪ್ರವಾಸಗಳಿಗೆ ಹೆಸರುವಾಸಿಯಾದ ಝೆಲೆನ್ಸ್ಕಿ ಮತ್ತು ರಷ್ಯಾದೊಂದಿಗೆ ನಡೆಯುತ್ತಿರುವ ಸಂಘರ್ಷದ ನಡುವೆ ಹಲವಾರು ವಿಶ್ವ ನಾಯಕರನ್ನು ತಮ್ಮದೇ ದೇಶದಲ್ಲಿ ಭೇಟಿ ಮಾಡುತ್ತಿದ್ದಾರೆ. ಅಪಾಯದ ಹೊರತಾಗಿಯೂ ರಷ್ಯಾವನ್ನು ಕಟ್ಟಿಹಾಕುವ ನಿಟ್ಟಿನಲ್ಲಿ ವಿಶ್ವನಾಯಕರು ಯುದ್ಧ ಪೀಡಿತ ಉಕ್ರೇನ್ ಗೆ ಭೇಟಿ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ.

ರಷ್ಯಾ ವಿರುದ್ಧ ಝೆಲೆನ್ಸ್ಕಿ ಕಿಡಿ

ಇನ್ನು ಕ್ಷಿಪಣಿ ದಾಳಿ ವಿಚಾರದ ಬೆನ್ನಲ್ಲೇ ರಷ್ಯಾ ವಿರುದ್ಧ ಕಿಡಿಕಾರಿರುವ ಝೆಲೆನ್ಸ್ಕಿ, "ಇದು ನಮ್ಮ ದಿನನಿತ್ಯದ ಪರಿಸ್ಥಿತಿ. ನಾವು ಯಾರೊಂದಿಗೆ ವ್ಯವಹರಿಸುತ್ತಿದ್ದೇವೆಂದು ನೀವು ನೋಡಬಹುದು; ಅವರು ಎಲ್ಲಿ ಹೊಡೆಯುತ್ತಾರೋ ಎಂದು ನಾವು ಹೆದರುವುದಿಲ್ಲ. ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com