
ವಾಷಿಂಗ್ ಟನ್: ನೀಲಿ ಚಿತ್ರತಾರೆ ಎಮಿಲಿ ವಿಲ್ಲೀಸ್ ಗೆ ಹೃದಯ ಸ್ತಂಭನಕ್ಕೊಳಗಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ. ಅಮೇರಿಕಾದ ಪುನರ್ವಸತಿ ಶಿಬಿರವೊಂದರಲ್ಲಿ ಎಮಿಲಿ ವಿಲ್ಲೀಸ್ ಗೆ ಹೃದಯ ಸ್ತಂಭನವಾಗಿದೆ.
ಇನ್ಸ್ಟಾಗ್ರಾಮ್ ನಲ್ಲಿ ಎಮಿಲಿ ವಿಲ್ಲೀಸ್ ಗೆ 20 ಲಕ್ಷ ಅನುಯಾಯಿಗಳಿದ್ದು, ಹೃದಯ ಸ್ತಂಭನ ಉಂಟಾದಾಗ ಆಕೆ ಸೆಲಬ್ರಿಟಿ ಪುನರ್ವಸತಿ ಕೇಂದ್ರದಲ್ಲಿದ್ದರು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಎಮಿಲಿ ವಿಲ್ಲೀಸ್ ಕೋಮಾದಲ್ಲಿದ್ದು, ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದಾರೆ. ಆಕೆಯ ವೈದ್ಯಕೀಯ ಬಿಲ್‌ಗಳನ್ನು ಸರಿದೂಗಿಸಲು ಸಹಾಯ ಮಾಡಲು ದೇಣಿಗೆಯನ್ನು ಕೋರಿರುವ ಆಕೆಯ ಸಹೋದರ ಮೈಕೆಲ್ ಶುಕ್ರವಾರ GoFundMe ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.
25 ವರ್ಷದ ನೀಲಿ ಚಿತ್ರ ನಟಿಯನ್ನು "ಓವರ್ ಡೋಸ್" ಗಾಗಿ ಕರೆತರಲಾಗಿದೆ ಎಂಬ ವರದಿಗಳ ಕುರಿತು ಅವರು ಮಾತನಾಡಿದರು ಮತ್ತು ಅವು "ನಿಖರವಾಗಿಲ್ಲ" ಎಂದು ಹೇಳಿದರು.
ಎಮಿಲಿ ಸುಮಾರು ಎರಡು ವರ್ಷಗಳ ಹಿಂದೆ ನೀಲಿ ಚಿತ್ರ ಉದ್ಯಮದಿಂದ ನಿವೃತ್ತರಾಗಿದ್ದರು ಮತ್ತು "ಮನೋರಂಜನೆಯ ಇತರ ಕ್ಷೇತ್ರಗಳಲ್ಲಿ ಆಕಾಂಕ್ಷೆಗಳನ್ನು ಹೊಂದಿದ್ದರು" ಎಂದು ಮೈಕೆಲ್ ಮಾಹಿತಿ ನೀಡಿದ್ದಾರೆ.
Advertisement