ಆಸ್ಕರ್ಸ್ 2024: ಅತ್ಯುತ್ತಮ ವಸ್ತ್ರ ವಿನ್ಯಾಸ ಪ್ರಶಸ್ತಿ ನೀಡಲು ಬೆತ್ತಲಾಗಿ ಬಂದ ಜಾನ್ ಸಿನಾ!

96 ನೇ ಅಕಾಡೆಮಿ ಅವಾರ್ಡ್ಸ್ ನಲ್ಲಿ ಅಮೇರಿಕಾದ ವೃತ್ತಿಪರ ಕುಸ್ತಿಪಟು ಹಾಗೂ ನಟ ಜಾನ್ ಸಿನಾ ಕಾಣಿಸಿಕೊಂಡ ರೀತಿ ಎಲ್ಲರಿಗೂ ದಿಗ್ಭ್ರಮೆ ಮೂಡಿಸಿತ್ತು.
ಆಸ್ಕರ್ಸ್ 2024 ಕಾರ್ಯಕ್ರಮದಲ್ಲಿ ಜಾನ್ ಸಿನಾ
ಆಸ್ಕರ್ಸ್ 2024 ಕಾರ್ಯಕ್ರಮದಲ್ಲಿ ಜಾನ್ ಸಿನಾOnline desk

ಲಾಸ್ ಏಂಜಲೀಸ್: 96 ನೇ ಅಕಾಡೆಮಿ ಅವಾರ್ಡ್ಸ್ ನಲ್ಲಿ ಅಮೇರಿಕಾದ ವೃತ್ತಿಪರ ಕುಸ್ತಿಪಟು ಹಾಗೂ ನಟ ಜಾನ್ ಸಿನಾ ಕಾಣಿಸಿಕೊಂಡ ರೀತಿ ಎಲ್ಲರಿಗೂ ದಿಗ್ಭ್ರಮೆ ಮೂಡಿಸಿತ್ತು. ಅತ್ಯುತ್ತಮ ವಸ್ತ್ರ ವಿನ್ಯಾಸಕ್ಕಾಗಿ ನೀಡಬೇಕಿದ್ದ ಪ್ರಶಸ್ತಿಯನ್ನು ಪ್ರದಾನ ಮಾಡುವುದಕ್ಕೆ ವೇದಿಕೆಗೆ ಜಾನ್ ಸಿನಾ ಬೆತ್ತಲೆಯಾಗಿ ಆಗಮಿಸಿದ್ದರು.

ಹೋಸ್ಟ್ ಜಿಮ್ಮಿ ಕಿಮ್ಮೆಲ್ ಪರಿಕಲ್ಪನೆ ಇದಾಗಿದ್ದು, 1974 ರ ಅಕಾಡೆಮಿ ಪ್ರಶಸ್ತಿಗಳ ಸಂದರ್ಭದಲ್ಲಿ ಸ್ಟ್ರೀಕರ್ ವೇದಿಕೆಯಾದ್ಯಂತ ಓಡಿದ ಪ್ರಸಂಗವೊಂದನ್ನು ಹಂಚಿಕೊಂಡರು. ನಗ್ನವಾಗಿ ಕಾಣಿಸಿಕೊಂಡ ಜಾನ್ ಸಿನಾ, ಇದೊಂದು ಸೊಗಸಾದ ಕಾರ್ಯಕ್ರಮವಾಗಿದ್ದು, ಇಂತಹ ಕೆಟ್ಟ ಅಭಿರುಚಿಯ ಕಲ್ಪನೆಯನ್ನು ಹೇಳಿದ್ದಕ್ಕಾಗಿ ನಾಚಿಕೆಯಾಗಬೇಕು, ನಗ್ನವಾಗಿ ಕಾಣಿಸಿಕೊಳ್ಳುವುದು ತಮಾಷೆಯ ವಿಷಯವಲ್ಲ ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಹೋಸ್ಟ್ ಜಿಮ್ಮ್ ಕಿಮ್ಮೆಲ್, ನೀವು ಹೇಗಿದ್ದರೂ ನಗ್ನವಾಗಿಯೇ ಕುಸ್ತಿಯಾಡುತ್ತೀರಿ ಬಿಡಿ ಎಂದು ಕಾಲೆಳೆದಿದ್ದಾರೆ. ಆದರೆ ನಾನು ನಗ್ನವಾಗಿ ಕುಸ್ತಿಯಾಡುವುದಿಲ್ಲ ಜೋರ್ಟ್ಸ್ ಹಾಕಿಕೊಂಡು ಕುಸ್ತಿ ಮಾಡುತ್ತೇನೆ ಎಂದು ಜಾನ್ ಸಿನಾ ಹೇಳಿದ್ದಕ್ಕೆ ಪ್ರತಿಯಾಗಿ, ಜೋರ್ಟ್ಸ್ ಧರಿಸುವುದು ನಗ್ನವಾಗಿರುವುದಕ್ಕಿಂತಲೂ ಕೆಟ್ಟದಾಗಿರುತ್ತದೆ ಎಂದು ಕಿಮ್ಮೆಲ್ ಹೇಳಿದ್ದಾರೆ.

ಆಸ್ಕರ್ಸ್ 2024 ಕಾರ್ಯಕ್ರಮದಲ್ಲಿ ಜಾನ್ ಸಿನಾ
ಸಾಕ್ಷ್ಯಚಿತ್ರ ವಿಭಾಗದಲ್ಲಿ ಭಾರತದ 'ಟು ಕಿಲ್ ಎ ಟೈಗರ್' ಹಿಂದಿಕ್ಕಿ ಆಸ್ಕರ್ ಗೆದ್ದ '20 ಡೇಸ್ ಇನ್ ಮಾರಿಯುಪೋಲ್‌'!

ಈ ಹಂತದಲ್ಲಿ, ಜಾನ್ ತನ್ನ ಖಾಸಗಿ ಭಾಗಗಳನ್ನು ಒಂದು ಲಕೋಟೆಯಿಂದ ಮರೆಮಾಡಿ “ವೇಷಭೂಷಣಗಳು, ತುಂಬಾ ಮುಖ್ಯವಾಗಿವೆ. ಬಹುಶಃ ಅತ್ಯಂತ ಮುಖ್ಯವಾದ ವಿಷಯವಾಗಿದೆ ಎಂದು ಹೇಳಿದ್ದಾರೆ.

ನಾಮನಿರ್ದೇಶಿತರ ಹೆಸರನ್ನು ಓದಲು ದೀಪಗಳು ಮಂದವಾಗುತ್ತಿದ್ದಂತೆ, ಹಲವಾರು ಸಹಾಯಕರು ಜಾನ್ ಸಿನಾ ಅವರಿಗೆ ವಿಸ್ತಾರವಾದ ಗೌನ್‌ನೊಂದಿಗೆ ನೀಡಲು ಧಾವಿಸಿದರು ನಂತರ ಅವರು ವಸ್ತ್ರ ವಿನ್ಯಾಸದ ವಿಜೇತರನ್ನು ಘೋಷಿಸಿದರು- ಪೂರ್ ಥಿಂಗ್ಸ್ ಸಿನಿಮಾದ ವಸ್ತ್ರ ವಿನ್ಯಾಸಕರಾದ ಹಾಲಿ ವಾಡಿಂಗ್ಟನ್ ಗೆ ಅತ್ಯುತ್ತಮ ವಸ್ತ್ರ ವಿನ್ಯಾಸದ ಪ್ರಶಸ್ತಿ ಲಭಿಸಿದೆ.

ಆಸ್ಕರ್ಸ್ 2024 ಕಾರ್ಯಕ್ರಮದಲ್ಲಿ ಜಾನ್ ಸಿನಾ
96 ನೇ ಅಕಾಡೆಮಿ ಅವಾರ್ಡ್ಸ್: 'ಓಪನ್ ಹೈಮರ್' ಗೆ ಅತ್ಯುತ್ತಮ ಸಿನಿಮಾ ಸೇರಿ 7 ಪ್ರಶಸ್ತಿ!

ಬಾರ್ಬಿ ಸಿನಿಮಾಗೆ ಜಾಕ್ವೆಲಿನ್ ಡುರಾನ್, ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್‌ ಗೆ ಜಾಕ್ವೆಲಿನ್ ವೆಸ್ಟ್, ನೆಪೋಲಿಯನ್‌ ಸಿನಿಮಾಗೆ ಜಾಂಟಿ ಯೇಟ್ಸ್ ಮತ್ತು ಡೇವ್ ಕ್ರಾಸ್‌ಮನ್ ಮತ್ತು ಓಪನ್‌ಹೈಮರ್‌ ಚಿತ್ರಕ್ಕೆ ಎಲೆನ್ ಮಿರೋಜ್ನಿಕ್ ನಾಮನಿರ್ದೇಶನಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com