ಮಾಸ್ಕೋ ಕನ್ಸರ್ಟ್ ಹಾಲ್ ದಾಳಿ: 40 ಕ್ಕೂ ಹೆಚ್ಚು ಮಂದಿ ಸಾವು, 100 ಕ್ಕೂ ಹೆಚ್ಚು ಮಂದಿಗೆ ಗಾಯ

ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಕನ್ಸರ್ಟ್ ಹಾಲ್ ಮೇಲೆ ಹಲವು ಬಂದೂಕುಧಾರಿಗಳು ನುಗ್ಗಿ ದಾಳಿ ನಡೆಸಿದ್ದು ಘಟನೆಯಲ್ಲಿ 40 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರೆ, 100 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.
ಮಾಸ್ಕೋ ಕನ್ಸರ್ಟ್ ಹಾಲ್ ದಾಳಿ
ಮಾಸ್ಕೋ ಕನ್ಸರ್ಟ್ ಹಾಲ್ ದಾಳಿonline desk
Updated on

ಮಾಸ್ಕೋ: ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಕನ್ಸರ್ಟ್ ಹಾಲ್ ಮೇಲೆ ಹಲವು ಬಂದೂಕುಧಾರಿಗಳು ನುಗ್ಗಿ ದಾಳಿ ನಡೆಸಿದ್ದು ಘಟನೆಯಲ್ಲಿ 40 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರೆ, 100 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.

ರಷ್ಯಾದಲ್ಲಿ ಪುಟಿನ್ ಮರು ಆಯ್ಕೆಯಾದ ಬೆನ್ನಲ್ಲೇ ಈ ದಾಳಿ ನಡೆದಿದೆ. ಈ ದಾಳಿಗೆ ತಕ್ಷಣಕ್ಕೆ, ಈ ವರೆಗೂ ಯಾರೂ ಹೊಣೆ ಹೊತ್ತುಕೊಂಡಿಲ್ಲ. ಎರಡು ದಶಕಗಳಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ. ಇದೊಂದು ಬೃಹತ್ ಅನಾಹುತ ಎಂದು ಮಾಸ್ಕೋ ಮೇಯರ್ ಸೆರ್ಗೆಯ್ ಸೋಬಯಾನಿನ್ ಹೇಳಿದ್ದಾರೆ.

ರಷ್ಯಾದ ಉನ್ನತ ದೇಶೀಯ ಭದ್ರತಾ ಸಂಸ್ಥೆ, ಫೆಡರಲ್ ಸೆಕ್ಯುರಿಟಿ ಸರ್ವಿಸ್, ಪ್ರಾಣಹಾನಿಯಾಗಿದೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಹೇಳಿದೆಯಷ್ಟೆ. ಆದರೆ ಯಾವುದೇ ಸಂಖ್ಯೆಯನ್ನು ನೀಡಿಲ್ಲ. ದಾಳಿಕೋರರು ಸ್ಫೋಟಕಗಳನ್ನು ಎಸೆದಿದ್ದಾರೆ. ಅಷ್ಟೇ ಅಲ್ಲದೇ ಮಾಸ್ಕೋದ ಪಶ್ಚಿಮ ಅಂಚಿನಲ್ಲಿರುವ ಕ್ರೋಕಸ್ ಸಿಟಿ ಹಾಲ್‌ನಲ್ಲಿ ಭಾರಿ ಗುಂಡಿನ ದಾಳಿ ನಡೆಸಿದ್ದಾರೆ ರಷ್ಯಾದ ಸುದ್ದಿ ವರದಿಗಳು ತಿಳಿಸಿವೆ.

ಮಾಸ್ಕೋ ಕನ್ಸರ್ಟ್ ಹಾಲ್ ದಾಳಿ
ಪುಟಿನ್ ಜೊತೆ ಮಾತುಕತೆ ಬಳಿಕ ಝೆಲೆನ್ಸ್ಕಿಗೆ ಕರೆ; ರಷ್ಯಾ-ಯುಕ್ರೇನ್ ಸಂಘರ್ಷದ ಶಾಂತಿಯುತ ಪರಿಹಾರಕ್ಕೆ ಭಾರತ ಬೆಂಬಲ!

ದಾಳಿಕೋರರು ಸ್ಫೋಟಕಗಳನ್ನು ಎಸೆದಿದ್ದಾರೆ. ಅಷ್ಟೇ ಅಲ್ಲದೇ ಮಾಸ್ಕೋದ ಪಶ್ಚಿಮ ಅಂಚಿನಲ್ಲಿರುವ ಕ್ರೋಕಸ್ ಸಿಟಿ ಹಾಲ್‌ನಲ್ಲಿ ಭಾರಿ ಗುಂಡಿನ ದಾಳಿ ನಡೆಸಿದ್ದಾರೆ ರಷ್ಯಾದ ಸುದ್ದಿ ವರದಿಗಳು ತಿಳಿಸಿವೆ. 6,000 ಕ್ಕೂ ಹೆಚ್ಚು ಜನರಿಗೆ ಅವಕಾಶ ಕಲ್ಪಿಸಬಹುದಾದ ಸಭಾಂಗಣದಲ್ಲಿ ರಷ್ಯಾದ ಪ್ರಸಿದ್ಧ ರಾಕ್ ಬ್ಯಾಂಡ್ ಪಿಕ್ನಿಕ್ ಸಂಗೀತ ಕಾರ್ಯಕ್ರಮಕ್ಕಾಗಿ ಜನಸಮೂಹ ಜಮಾಯಿಸಿದ್ದಾಗ ಈ ದಾಳಿ ನಡೆದಿದೆ. ಸಂದರ್ಶಕರನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ರಷ್ಯಾದ ಸುದ್ದಿ ವರದಿಗಳು ತಿಳಿಸಿವೆ. ಆದರೆ ಕೆಲವರು ಅನಿರ್ದಿಷ್ಟ ಸಂಖ್ಯೆಯ ಜನರು ಬೆಂಕಿಯಲ್ಲಿ ಸಿಲುಕಿಹಾಕಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಮಾಸ್ಕೋ ಕನ್ಸರ್ಟ್ ಹಾಲ್ ದಾಳಿ
ರಷ್ಯಾ ಅಧ್ಯಕ್ಷೀಯ ಚುನಾವಣೆ: ಪುಟಿನ್ ಗೆ ಮತ್ತೆ ಗೆಲುವು

ಪುರುಷರು ಕನ್ಸರ್ಟ್ ಹಾಲ್‌ಗೆ ಪ್ರವೇಶಿಸಿ ಸಂದರ್ಶಕರ ಮೇಲೆ ಗುಂಡು ಹಾರಿಸಿದರು ಎಂದು ಪ್ರಾಸಿಕ್ಯೂಟರ್ ಕಚೇರಿ ಹೇಳಿದೆ. ರಷ್ಯಾದ ಮಾಧ್ಯಮಗಳು ಮತ್ತು ಟೆಲಿಗ್ರಾಮ್ ಚಾನೆಲ್‌ಗಳು ಪೋಸ್ಟ್ ಮಾಡಿದ ಬಹು ವೀಡಿಯೊಗಳಲ್ಲಿ ಹಲವು ಸುತ್ತು ಗುಂಡು ಹಾರಿಸಿರುವುದು ಸ್ಪಷ್ಟವಾಗಿದೆ. ಒಬ್ಬರು ರೈಫಲ್‌ಗಳೊಂದಿಗೆ ಇಬ್ಬರು ವ್ಯಕ್ತಿಗಳು ಮಾಲ್ ಮೂಲಕ ಚಲಿಸುತ್ತಿರುವುದು ಸೆರೆಯಾಗಿದ್ದರೆ, ಮತ್ತೊಬ್ಬರು ಸಭಾಂಗಣದ ಒಳಗಿದ್ದ ವ್ಯಕ್ತಿಯನ್ನು ಚಿತ್ರೀಕರಿಸಿರುವುದು ವೀಡಿಯೋದಲ್ಲಿ ದಾಖಲಾಗಿದೆ. ನಂತರ ಬೆಂಕಿ ಹೊತ್ತುಕೊಂಡಿದೆ.

ಈ ತಿಂಗಳ ಆರಂಭದಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದ ಯುಎಸ್ ರಾಯಭಾರ ಕಚೇರಿ, ರಷ್ಯಾ ರಾಜಧಾನಿಯಲ್ಲಿ ದಾಳಿ ನಡೆಯುವ ಸಾಧ್ಯತೆ ಇದೆ ಆದ್ದರಿಂದ ದಾಳಿಯ ದೃಷ್ಟಿಯಿಂದ ರಷ್ಯಾದ ರಾಜಧಾನಿಯಲ್ಲಿ ಜನನಿಬಿಡ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸಲು ಅಮೆರಿಕನ್ನರಿಗೆ ಒತ್ತಾಯಿಸಿತು. ಇದನ್ನು ಹಲವಾರು ಇತರ ಪಾಶ್ಚಿಮಾತ್ಯ ರಾಯಭಾರ ಕಚೇರಿಗಳು ಪುನರಾವರ್ತಿಸಿದವು. ಈ ಬೆನ್ನಲ್ಲೇ ದಾಳಿ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com