'ಇನ್ನು ಕೈಕಟ್ಟಿ ಕುಳಿತಿರುವುದು ಅಸಾಧ್ಯ...': ಭಯೋತ್ಪಾದನೆ ಕುರಿತು ಪಾಕಿಸ್ತಾನಕ್ಕೆ ಎಸ್ ಜೈಶಂಕರ್ ನೇರ ಎಚ್ಚರಿಕೆ!

ಭಯೋತ್ಪಾದನೆಯನ್ನು ಉತ್ತೇಜಿಸುವ ವಿಷಯದ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತೊಮ್ಮೆ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿದೇಶಾಂಕ ಸಚಿವ ಎಸ್ ಜೈಶಂಕರ್
ವಿದೇಶಾಂಕ ಸಚಿವ ಎಸ್ ಜೈಶಂಕರ್PTI
Updated on

ಸಿಂಗಾಪುರ/ನವದೆಹಲಿ: ಭಯೋತ್ಪಾದನೆಯನ್ನು ಉತ್ತೇಜಿಸುವ ವಿಷಯದ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತೊಮ್ಮೆ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಭಯೋತ್ಪಾದನೆಯ ವಿಷಯದಲ್ಲಿ ಭಾರತವು ಇನ್ನು ಮುಂದೆ ಯಾರನ್ನು ಬಿಡುವ ಮನಸ್ಥಿತಿಯಲ್ಲಿಲ್ಲ. ಈಗ ಈ ಸಮಸ್ಯೆಯನ್ನು ನಿರ್ಲಕ್ಷಿಸುವುದಿಲ್ಲ ಎಂದು ವಿದೇಶಾಂಗ ಸಚಿವರು ಹೇಳಿದರು.

ಮೂರು ದಿನಗಳ ಸಿಂಗಾಪುರ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು, 'ವೈ ಇಂಡಿಯಾ ಮ್ಯಾಟರ್ಸ್' ಎಂಬ ತಮ್ಮ ಪುಸ್ತಕದ ಕುರಿತು ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾಲಯದ (ಎನ್‌ಯುಎಸ್) ಇನ್‌ಸ್ಟಿಟ್ಯೂಟ್ ಆಫ್ ಸೌತ್ ಏಷ್ಯನ್ ಸ್ಟಡೀಸ್ (ಐಎಸ್‌ಎಎಸ್) ನಲ್ಲಿ ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಉಪನ್ಯಾಸದ ನಂತರ ಕೇಳಿದ ಪ್ರಶ್ನೆಗಳಿಗೆ ಉತ್ತರವಾಗಿ ಅವರು ಪಾಕಿಸ್ತಾನದ ಕುರಿತು ಈ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನದ ಮೇಲೆ ತೀವ್ರವಾಗಿ ವಾಗ್ದಾಳಿ ನಡೆಸಿದ ಅವರು, 'ಪಾಕಿಸ್ತಾನವು ಈಗ ಕೈಗಾರಿಕಾ ಮಟ್ಟದಲ್ಲಿ ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿದೆ. ಭಾರತವು ಇನ್ನು ಮುಂದೆ ಭಯೋತ್ಪಾದಕರನ್ನು ನಿರ್ಲಕ್ಷಿಸುವ ಮನಸ್ಥಿತಿಯಲ್ಲಿಲ್ಲ. ಈ ಸಮಸ್ಯೆಯನ್ನು ಇನ್ನು ಮುಂದೆ ನಿರ್ಲಕ್ಷಿಸುವುದಿಲ್ಲ ಎಂದು ಹೇಳಿದರು.

ಪ್ರತಿಯೊಂದು ದೇಶವೂ ಸ್ಥಿರವಾದ ನೆರೆಯವರನ್ನು ಬಯಸುತ್ತದೆ

ಪಾಕಿಸ್ತಾನದೊಂದಿಗಿನ ಭಾರತದ ಸಂಬಂಧದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರತಿಯೊಂದು ದೇಶವು ಸ್ಥಿರವಾದ ನೆರೆಹೊರೆಯನ್ನು ಬಯಸುತ್ತದೆ. ಬೇರೇನೂ ಇಲ್ಲದಿದ್ದರೂ ನೀವು ಕನಿಷ್ಠ ಶಾಂತಿಯುತ ನೆರೆಹೊರೆಯನ್ನು ಬಯಸುತ್ತೀರಿ. ಆದರೆ, ದುರದೃಷ್ಟವಶಾತ್, ಭಾರತದ ಪರಿಸ್ಥಿತಿ ಆಗಿಲ್ಲ ಎಂದು ಹೇಳಿದರು.

ವಿದೇಶಾಂಕ ಸಚಿವ ಎಸ್ ಜೈಶಂಕರ್
ಮಾಸ್ಕೋದಲ್ಲಿ ಉಗ್ರರಿಂದ ರಕ್ತದೋಕುಳಿ: ಮೃತರ ಸಂಖ್ಯೆ 115ಕ್ಕೆ ಏರಿಕೆ, ಹನ್ನೊಂದು ISIS ಉಗ್ರರ ಬಂಧನ!

ಭಯೋತ್ಪಾದನೆಯನ್ನು ಆಡಳಿತದ ಸಾಧನವಾಗಿ ಬಳಸುತ್ತಿರುವ ನೆರೆಹೊರೆಯವರೊಂದಿಗೆ ನೀವು ಹೇಗೆ ವ್ಯವಹರಿಸುತ್ತೀರಿ. ಇದು ಒಂದು ಬಾರಿಯ ಘಟನೆಯಲ್ಲ, ಆದರೆ ನಿರಂತರ, ಬಹುತೇಕ ಉದ್ಯಮ ಮಟ್ಟವಾಗಿದೆ. ಆದರೆ ನಾವು ಬಂದಿದ್ದೇವೆ. ಬೆದರಿಕೆಯನ್ನು ಪರಿಹರಿಸಲು ನಾವು ಒಂದು ಮಾರ್ಗವನ್ನು ಕಂಡುಹಿಡಿಯುವ ತೀರ್ಮಾನಕ್ಕೆ ಬಂದಿದ್ದೇವೆ. ಅದನ್ನು ಇನ್ನು ನಿರ್ಲಕ್ಷಿಸಿದರೆ ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಯಾಗುತ್ತದೆ ಎಂದು ಹೇಳಿದರು.

ಭಯೋತ್ಪಾದನೆಯನ್ನು ಆಡಳಿತದ ಸಾಧನವಾಗಿ ಬಳಸುತ್ತಿರುವ ನೆರೆಹೊರೆಯವರೊಂದಿಗೆ ನೀವು ಹೇಗೆ ವ್ಯವಹರಿಸುತ್ತೀರಿ. ಇದು ಒಂದು ಬಾರಿಯ ಘಟನೆಯಲ್ಲ, ಆದರೆ ನಿರಂತರ, ಬಹುತೇಕ ಉದ್ಯಮ ಮಟ್ಟವಾಗಿದೆ. ಆದರೆ ನಾವು ಬಂದಿದ್ದೇವೆ. ಬೆದರಿಕೆಯನ್ನು ಪರಿಹರಿಸಲು ನಾವು ಒಂದು ಮಾರ್ಗವನ್ನು ಕಂಡುಹಿಡಿಯುವ ತೀರ್ಮಾನಕ್ಕೆ ಬಂದಿದ್ದೇವೆ. ಅದನ್ನು ಇನ್ನು ನಿರ್ಲಕ್ಷಿಸಿದರೆ ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಯಾಗುತ್ತದೆ. ಈ ಸಮಸ್ಯೆಗೆ ನನ್ನ ಬಳಿ ಯಾವುದೇ ತಕ್ಷಣದ ಪರಿಹಾರವಿಲ್ಲ. ಆದರೆ ಭಾರತವು ಇನ್ನು ಮುಂದೆ ಈ ಸಮಸ್ಯೆಯನ್ನು ನಿರ್ಲಕ್ಷಿಸುವುದಿಲ್ಲ ಎಂದು ನಾನು ನಿಮಗೆ ಹೇಳಬಲ್ಲೆ. ನಾವು ಹೇಳುವುದಿಲ್ಲ, ಸರಿ, ಆದರೆ ಅದು ನಡೆಯುತ್ತದೆ ಎಂದು ಜೈಶಂಕರ್ ಹೇಳಿದರು.

ವಿದೇಶಾಂಕ ಸಚಿವ ಎಸ್ ಜೈಶಂಕರ್
'Micro managing backfires': ಮಾಸ್ಕೋ ದಾಳಿ ಕುರಿತು ಪ್ರಧಾನಿ ಮೋದಿ ಆಡಳಿತಕ್ಕೆ Subramanian Swamy ಎಚ್ಚರಿಕೆ

ನಮಗೆ ಸಮಸ್ಯೆ ಇದೆ ಎಂಬುದು ತಿಳಿದಿರುವಾಗ ಅದನ್ನು ಎದುರಿಸಲು ಪ್ರಾಮಾಣಿಕವಾಗಿರಬೇಕು. ಎಷ್ಟೇ ಕಷ್ಟವಾದರೂ ಸರಿ, ಏನೂ ಇಲ್ಲ ಎಂದು ಹೇಳುವ ಮೂಲಕ ನಾವು ಇತರ ದೇಶಕ್ಕೆ ಭರವಸೆ ನೀಡಬಾರದು. ನಾವು ಅದರ ಬಗ್ಗೆ ಮುಕ್ತವಾಗಿ ಪ್ರಯತ್ನಿಸಬೇಕು. ಅದು ತುಂಬಾ ದೊಡ್ಡ ಸಮಸ್ಯೆ, ಅದನ್ನು ನಿರ್ಲಕ್ಷಿಸಿದರೆ ನಮಗೆ ಮುಂದೆ ದೊಡ್ಡ ಅಪಾಯವಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com