ಖಲಿಸ್ತಾನಿ ಉಗ್ರನ ಬಿಡುಗಡೆಗೆ ಬದಲಾಗಿ ಕೇಜ್ರಿವಾಲ್ 134 ಕೋಟಿ ರೂ. ಪಡೆದಿದ್ದಾರೆ: ಗುರುಪತ್ವಂತ್ ಸಿಂಗ್ ಪನ್ನು ಆರೋಪ

ಅಬಕಾರಿ ನೀತಿ ಹಗರಣ ಸಂಬಂಧ ಜೈಲು ಸೇರಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ ಖಲಿಸ್ತಾನಿ ಪ್ರತ್ಯೇಕತಾವಾದಿ ಗುಂಪುಗಳಿಂದ ಬರೋಬ್ಬರಿ 134 ಕೋಟಿ ರೂಪಾಯಿ ಪಡೆದ ಆರೋಪ ಕೇಳಿ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಅಬಕಾರಿ ನೀತಿ ಹಗರಣ ಸಂಬಂಧ ಜೈಲು ಸೇರಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ ಖಲಿಸ್ತಾನಿ ಪ್ರತ್ಯೇಕತಾವಾದಿ ಗುಂಪುಗಳಿಂದ ಬರೋಬ್ಬರಿ 134 ಕೋಟಿ ರೂಪಾಯಿ ಪಡೆದ ಆರೋಪ ಕೇಳಿ ಬಂದಿದೆ.

ಅರವಿಂದ್ ಕೇಜ್ರಿವಾಲ್ ವಿರುದ್ಧ ಸಿಖ್ ಫಾರ್ ಜಸ್ಟಿಸ್ ಎಂಬ ಪ್ರತ್ಯೇಕತಾವಾದಿ ಸಂಘಟನೆ ಸಂಸ್ಥಾಪಕ ಗುರುಪತ್ವಂತ್ ಸಿಂಗ್ ಪನ್ನು ಗಂಭೀರ ಆರೋಪ ಮಾಡಿದ್ದು ಇದು ದೇಶದ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ವಿಡಿಯೋ ಬಿಡುಗಡೆ ಮಾಡಿರುವ ಪನ್ನು ದೆಹಲಿ ಬಾಂಬ್ ಸ್ಫೋಟದ ರುವಾರಿ ದೇವಿಂದರ್ ಪಾಲ್ ಸಿಂಗ್ ಭುಲ್ಲರ್ ಅವರನ್ನು ಬಂಧಮುಕ್ತ ಸಲುವಾಗಿ ಎಎಪಿಗೆ ಹಣ ನೀಡಲಾಗಿದೆ. ಹೀಗಾಗಿ ಕೇಜ್ರಿವಾಲ್ ಭುಲ್ಲರ್‌ನನ್ನು ಬಿಡುಗಡೆ ಮಾಡಲು ಮುಂದಾಗಿರುವುದನ್ನು ಬಹಿರಂಗಪಡಿಸಿದ್ದಾನೆ. ಇದೇ ಅಲ್ಲದೆ 2014 ಮತ್ತು 2022ರ ನಡುವೆ, ಅರವಿಂದ್ ಕೇಜ್ರಿವಾಲ್ ಖಲಿಸ್ತಾನಿಗಳಿಂದ ಒಟ್ಟು 134 ಕೋಟಿ ರೂಪಾಯಿ ಹಣ ತೆಗೆದುಕೊಂಡಿದ್ದಾರೆ ಎಂದು ಪನ್ನು ಆರೋಪಿಸಿದ್ದಾರೆ.

ವೀಡಿಯೊದಲ್ಲಿ ತನ್ನನ್ನು ಪ್ರಾಮಾಣಿಕ ಭಾರತೀಯ ಹಿಂದೂ ಎಂದು ಕರೆದುಕೊಳ್ಳುವ ಅರವಿಂದ್ ಕೇಜ್ರಿವಾಲ್, ಅಪ್ರಾಮಾಣಿಕ ಭಾರತೀಯ ಹಿಂದೂಗಿಂತ ಹೆಚ್ಚು ಅಪಾಯಕಾರಿ. 2014ರಲ್ಲಿ ಅರವಿಂದ್ ಕೇಜ್ರಿವಾಲ್ ಅಧಿಕಾರದಲ್ಲಿ ಇರಲಿಲ್ಲ. ನಂತರ ಅಮೆರಿಕಕ್ಕೆ ಬಂದು ನಮ್ಮ ಸರ್ಕಾರ ರಚನೆಯಾದರೆ ಐದು ಗಂಟೆಯೊಳಗೆ ಪ್ರೊ.ದೇವಿಂದರ್ ಪಾಲ್ ಸಿಂಗ್ ಭುಲ್ಲರ್ ಅವರನ್ನು ಬಿಡುಗಡೆ ಮಾಡುವುದಾಗಿ ನ್ಯೂಯಾರ್ಕ್ ನಲ್ಲಿ ಭರವಸೆ ನೀಡುತ್ತಾರೆ. ಇಂದಿಗೆ 9 ವರ್ಷಗಳು ಕಳೆದರೂ ದೇವಿಂದರ್ ಪಾಲ್ ಅವರನ್ನು ಬಿಟ್ಟಿಲ್ಲ. ಆದರೆ, ಅವರು ಆಮ್ ಆದ್ಮಿ ಪಕ್ಷದ ಸರ್ಕಾರ ರಚಿಸಲು ನಮ್ಮಿಂದ 16.70 ಮಿಲಿಯನ್ ಡಾಲರ್ ತೆಗೆದುಕೊಂಡಿದ್ದಾರೆ.

ಸಂಗ್ರಹ ಚಿತ್ರ
ಮುಖ್ಯಮಂತ್ರಿ ಸ್ಥಾನಕ್ಕೆ ಕೇಜ್ರಿವಾಲ್ ರಾಜೀನಾಮೆ ನೀಡಲ್ಲ: ಎಎಪಿ ಸಭೆಯಲ್ಲಿ ನಿರ್ಧಾರ

ಇಷ್ಟೇ ಅಲ್ಲ, ಪನ್ನು ಅರವಿಂದ್ ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ಅವರನ್ನು ದಲ್ಲಾಳಿಗಳೆಂದು ಕರೆದಿದ್ದಾರೆ. ಒಬ್ಬ ಹಿಂದೂ ಮತ್ತೊಬ್ಬ ಮೂಲಭೂತವಾದಿ ಹಿಂದೂವನ್ನು ಸೆರೆ ಹಿಡಿದಿದ್ದಾನೆ. ದೇವಿಂದರ್ ಪಾಲ್ ಸಿಂಗ್ ಭುಲ್ಲರ್ ಅವರನ್ನು ಏಕೆ ಬಿಡುಗಡೆ ಮಾಡಲಿಲ್ಲ. ಖಲಿಸ್ತಾನ್ ಜನಾಭಿಪ್ರಾಯ ಸಂಗ್ರಹಣೆಗೆ ಒತ್ತಾಯಿಸುವವರ ವಿರುದ್ಧ ಏಕೆ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪನ್ನು ವೀಡಿಯೊದಲ್ಲಿ ಹೇಳುತ್ತಾರೆ? ಅಮೃತಪಾಲ್ ಸಿಂಗ್ ಮತ್ತು ಇತರರ ಮೇಲೆ NSA ಅನ್ನು ಏಕೆ ವಿಧಿಸಲಾಯಿತು ಮತ್ತು ಅವರನ್ನು ದಿಬ್ರುಗಢಕ್ಕೆ ಕಳುಹಿಸಲಾಯಿತು. ಜೈಲಿನಲ್ಲಿ ಎಲ್ಲವನ್ನೂ ಲೆಕ್ಕ ಹಾಕಲಾಗುತ್ತದೆ ಎಂದರು.

ದೇವಿಂದರ್ ಪಾಲ್ ಸಿಂಗ್ ಭುಲ್ಲರ್ ಯಾರು?

1993ರಲ್ಲಿ ದೆಹಲಿಯಲ್ಲಿ ನಡೆದ ಭೀಕರ ಬಾಂಬ್ ಸ್ಫೋಟದಲ್ಲಿ ಭುಲ್ಲರ್ ತಪ್ಪಿತಸ್ಥ. ನ್ಯಾಯಾಲಯ ಆತನಿಗೆ ಮರಣದಂಡನೆ ವಿಧಿಸಿದೆ. ದೇವಿಂದರ್ ಪಾಲ್ ಸಿಂಗ್ ಭುಲ್ಲರ್ ವೃತ್ತಿಯಲ್ಲಿ ಇಂಜಿನಿಯರ್. 1993ರಲ್ಲಿ ಆತ ಮಣಿಂದರ್ಜಿತ್ ಸಿಂಗ್ ಬಿಟ್ಟಾ ಅವರನ್ನು ಗುರಿಯಾಗಿಸಿಕೊಂಡು ಬಾಂಬ್ ಸ್ಫೋಟವನ್ನು ನಡೆಸಿದನು. ಇದರಲ್ಲಿ 9 ಜನರು ಸಾವನ್ನಪ್ಪಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com