ನಿಜ್ಜರ್ ಹತ್ಯೆ ಪ್ರಕರಣ: ಕೆನಡಾದಲ್ಲಿ ನಾಲ್ಕನೇ ಭಾರತೀಯ ಬಂಧನ!

22 ವರ್ಷದ ಅಮರ್ದೀಪ್ ಸಿಂಗ್ ಬಂಧಿತ ಆರೋಪಿಯಾಗಿದ್ದು, ಬ್ರಾಂಪ್ಟನ್ ನಿವಾಸಿಯಾಗಿದ್ದಾರೆ. ಮೊದಲ ಹಂತದ ಕೊಲೆ ಮತ್ತು ಕೊಲೆಗೆ ಸಂಚು ರೂಪಿಸಿದ ಆರೋಪವನ್ನು ಈತನ ವಿರುದ್ಧ ಹೊರಿಸಲಾಗಿದೆ.
ಕೆನಡಾದಲ್ಲಿ ಭಾರತೀಯನ ಬಂಧನ
ಕೆನಡಾದಲ್ಲಿ ಭಾರತೀಯನ ಬಂಧನonline desk

ಕೆನಡಾ: ಖಲಿಸ್ಥಾನ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾದಲ್ಲಿ ನಾಲ್ಕನೆ ಭಾರತೀಯನನ್ನು ಬಂಧಿಸಲಾಗಿದೆ.

22 ವರ್ಷದ ಅಮರ್ದೀಪ್ ಸಿಂಗ್ ಬಂಧಿತ ಆರೋಪಿಯಾಗಿದ್ದು, ಬ್ರಾಂಪ್ಟನ್ ನಿವಾಸಿಯಾಗಿದ್ದಾರೆ. ಮೊದಲ ಹಂತದ ಕೊಲೆ ಮತ್ತು ಕೊಲೆಗೆ ಸಂಚು ರೂಪಿಸಿದ ಆರೋಪವನ್ನು ಈತನ ವಿರುದ್ಧ ಹೊರಿಸಲಾಗಿದೆ.

ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿನ ಪಾತ್ರಕ್ಕಾಗಿ ಸಿಂಗ್ ಅವರನ್ನು ಮೇ 11 ರಂದು ಬಂಧಿಸಲಾಯಿತು ಎಂದು ಸಂಯೋಜಿತ ನರಹತ್ಯೆ ತನಿಖಾ ತಂಡ (IHIT) ತಿಳಿಸಿದೆ. ಈತ ಬಂದೂಕುಗಳನ್ನು ಹೊಂದಿದ್ದ ಆರೋಪಗಳಿಗಾಗಿ ಅವರು ಈಗಾಗಲೇ ಪೀಲ್ ಪ್ರಾದೇಶಿಕ ಪೊಲೀಸರ ವಶದಲ್ಲಿದ್ದ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಕೆನಡಾದಲ್ಲಿ ಭಾರತೀಯನ ಬಂಧನ
ನಿಜ್ಜರ್‌ ಹತ್ಯೆ ಪ್ರಕರಣ: ಮೂವರು ಭಾರತೀಯರ ಬಂಧನ ಕುರಿತು ಕೆನಡಾ ಮಾಹಿತಿಗಾಗಿ ಕಾಯುತ್ತಿದ್ದೇವೆ; ಜೈಶಂಕರ್

"ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಪಾತ್ರ ವಹಿಸಿದವರನ್ನು ಹೊಣೆಗಾರರನ್ನಾಗಿ ಮಾಡಲು ನಡೆಯುತ್ತಿರುವ ನಮ್ಮ ತನಿಖೆಯ ಸ್ವರೂಪವನ್ನು ಈ ಬಂಧನವು ತೋರಿಸುತ್ತದೆ" ಎಂದು IHIT ಯ ಉಸ್ತುವಾರಿ ಅಧಿಕಾರಿ ಸೂಪರಿಂಟೆಂಡೆಂಟ್ ಮಂದೀಪ್ ಮೂಕರ್ ಹೇಳಿದ್ದಾರೆ.

ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಐಎಚ್‌ಐಟಿ ತನಿಖಾಧಿಕಾರಿಗಳು ಮೇ 3 ರಂದು ಮೂವರು ಭಾರತೀಯ ಪ್ರಜೆಗಳಾದ ಕರಣ್ ಬ್ರಾರ್ (22), ಕಮಲಪ್ರೀತ್ ಸಿಂಗ್ (22) ಮತ್ತು 28 ವರ್ಷದ ಕರಣ್‌ಪ್ರೀತ್ ಸಿಂಗ್ ಅವರನ್ನು ಬಂಧಿಸಿದ್ದಾರೆ.

ಎಲ್ಲಾ ಮೂರು ವ್ಯಕ್ತಿಗಳು ಎಡ್ಮಂಟನ್‌ನಲ್ಲಿ ವಾಸಿಸುವ ಭಾರತೀಯ ಪ್ರಜೆಗಳಾಗಿದ್ದು, ಮೊದಲ ಹಂತದ ಕೊಲೆ ಮತ್ತು ಕೊಲೆಗೆ ಸಂಚು ರೂಪಿಸಿದ ಆರೋಪ ಹೊರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com