Russia vs Ukraine: ಶಸ್ತ್ರಾಸ್ತ್ರಗಳಿಲ್ಲದೇ ಪರದಾಟ; ಅಧ್ಯಕ್ಷರ ವಿರುದ್ಧವೇ ತಿರುಗಿಬಿದ್ದ ಉಕ್ರೇನ್ ಸೈನಿಕರು!

ರಷ್ಯಾ ವಿರುದ್ಧದ ಯುದ್ಧ ಚಾಲ್ತಿಯಲ್ಲಿರುವಂತೆಯೇ ಅತ್ತ ಉಕ್ರೇನ್ ಸೈನಿಕರು ತಮ್ಮದೇ ಅಧ್ಯಕ್ಷರ ವಿರುದ್ಧ ತಿರುಗಿ ಬಿದಿದ್ದಾರೆ ಎಂದು ಹೇಳಲಾಗಿದೆ.
ಅಧ್ಯಕ್ಷ ಝೆಲೆನ್ಸ್ಕಿ
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ
Updated on

ಕೀವ್: ರಷ್ಯಾ ವಿರುದ್ಧದ ಯುದ್ಧ ಚಾಲ್ತಿಯಲ್ಲಿರುವಂತೆಯೇ ಅತ್ತ ಉಕ್ರೇನ್ ಸೈನಿಕರು ತಮ್ಮದೇ ಅಧ್ಯಕ್ಷರ ವಿರುದ್ಧ ತಿರುಗಿ ಬಿದಿದ್ದಾರೆ ಎಂದು ಹೇಳಲಾಗಿದೆ.

ಉಕ್ರೇನ್ ಮೇಲೆ ಸಮರ ಸಾರಿರುವ ರಷ್ಯಾ ದಿನಕಳೆದಂತೆ ಉಕ್ರೇನ್ ಮೇಲಿನ ಹಿಡಿತವನ್ನು ಬಿಗಿಗೊಳಿಸುತ್ತಿದ್ದು, ಉಕ್ರೇನ್ ಹಿಡಿತದಲ್ಲಿದ್ದ ಪ್ರದೇಶಗಳನ್ನು ತನ್ನ ಕೈವಶ ಮಾಡಿಕೊಳ್ಳುತ್ತಿದೆ.

ಇದೀಗ ಉಕ್ರೇನ್ ಗೆ ಗಾಯದ ಮೇಲೆ ಬರೆ ಎಂಬಂತೆ ಇದೀಗ ಉಕ್ರೇನ್ ಸೈನಿಕರೇ ತಮ್ಮ ಅಧ್ಯಕ್ಷ ಝೆಲೆನ್ಸ್ಕಿ ವಿರುದ್ಧ ತಿರುಗಿಬಿದ್ದಿದ್ದು, ರಷ್ಯಾ ವಿರುದ್ಧ ಹೋರಾಟ ಮಾಡಲು ಅಗತ್ಯ ಶಸ್ತ್ರಾಸ್ತ್ರ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಅಧ್ಯಕ್ಷ ಝೆಲೆನ್ಸ್ಕಿ
ಉಕ್ರೇನ್ ಮೇಲಿನ ರಷ್ಯಾದ ‘ಸಂಭಾವ್ಯ ಪರಮಾಣು’ ದಾಳಿ ತಪ್ಪಲು ಪ್ರಧಾನಿ ಮೋದಿ ಮಧ್ಯಸ್ಥಿಕೆ ಕಾರಣ- ವರದಿಗಳು

ಮೂಲಗಳ ಪ್ರಕಾರ ಯುದ್ಧದಲ್ಲಿ ರಷ್ಯಾ ಸೈನಿಕರು ಮುನ್ನಡೆಯಲ್ಲಿದ್ದು, ಉಕ್ರೇನ್‌ನ ದೊಡ್ಡ ಪ್ರಾಂತ್ಯ ಮತ್ತು ರಷ್ಯಾ ಗಡಿಗೆ ಹತ್ತಿರದಲ್ಲೇ ಇರುವ ಖಾರ್ಕೀವ್ ಮೇಲೆ ರಷ್ಯಾ ಸೈನಿಕರು ಬಹುತೇಕ ಹಿಡಿತ ಸಾಧಿಸಿದ್ದಾರೆ. ಕಳೆದ 2 ದಿನದಲ್ಲಿ ಭರ್ಜರಿ 10 ಹಳ್ಳಿ, ಹಾಗೂ ಹಲವು ಪ್ರದೇಶಗಳ ಮೇಲೆ ಹಿಡಿತ ಸಾಧಿಸಿದ್ದಾರೆ.

ಉಕ್ರೇನ್ ಸೈನಿಕರಿಗೆ ಸೂಕ್ತ ಶಸ್ತ್ರಾಸ್ತ್ರಗಳು ಸಿಗದ ಕಾರಣ ಯಾವುದೇ ವಿರೋಧ ಇಲ್ಲದೆ ರಷ್ಯಾ ಈಗ ಖಾರ್ಕೀವ್ ನಗರವನ್ನು ವಶಕ್ಕೆ ಪಡೆಯುತ್ತಿದ್ದು, ಇದು ಉಕ್ರೇನ್ ಜನರ ಚಿಂತೆ ಹೆಚ್ಚಿಸಿದ್ದು ಮಾತ್ರವಲ್ಲದೇ ಸೈನಿಕರ ಆಕ್ರೋಶಕ್ಕೂ ಕಾರಣವಾಗಿದೆ.

ಝೆಲೆನ್ಸ್ಕಿ ಜಾಗತಿಕ ಸಮುದಾಯಕ್ಕೆ ಉಕ್ರೇನ್ ಸಮಸ್ಯೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಇದೇ ಕಾರಣಕ್ಕೆ ಜಾಗತಿಕ ಸಮುದಾಯದಿಂದ ಉಕ್ರೇನ್ ಗೆ ಸರಿಯಾದ ನೆರವು ಸಿಗುತ್ತಿಲ್ಲ ಎಂದು ಸೈನಿಕರು ಆರೋಪಿಸುತ್ತಿದ್ದಾರೆ ಎನ್ನಲಾಗಿದೆ.

ಅಧ್ಯಕ್ಷ ಝೆಲೆನ್ಸ್ಕಿ
ರಷ್ಯಾ-ಉಕ್ರೇನ್ ಯುದ್ಧದ ನಡುವೆಯೇ, ನ್ಯಾಟೋದ 32ನೇ ಸದಸ್ಯ ರಾಷ್ಟ್ರವಾಗಿ ಸ್ವೀಡನ್ ಸೇರ್ಪಡೆ

ನ್ಯಾಟೋ ಸೇರ್ಪಡೆ ವಿಚಾರವೇ ಯುದ್ಧಕ್ಕೆ ಕಾರಣ

ಅಮೆರಿಕ ನೇತೃತ್ವದ 'ನ್ಯಾಟೋ' ಒಕ್ಕೂಟಕ್ಕೆ ಉಕ್ರೇನ್ ಸೇರ್ಪಡೆ ಆಗುತ್ತಿದೆ ಎಂಬ ಆರೋಪವೇ ಯುದ್ಧ ಆರಂಭವಾಗಲು ಕಾರಣವಾಗಿತ್ತು. ರಷ್ಯಾದ ಅಧ್ಯಕ್ಷ ಪುಟಿನ್ ಯುದ್ಧ ಘೋಷಿಸಿದ್ದರು. 2022ರ ಫೆಬ್ರವರಿ 24ರಂದು ರಷ್ಯಾ ಸೇನೆ ಉಕ್ರೇನ್ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಭಾರತವೂ ಸೇರಿದಂತೆ ಜಾಗತಿಕ ಸಮುದಾಯದ ಒತ್ತಡದ ಹೊರತಾಗಿಯೂ ರಷ್ಯಾ ಅಧ್ಯಕ್ಷ ಉಕ್ರೇನ್ ಮೇಲೆ ಯುದ್ಧ ನಡೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com