Iran Vice President Mokhber
ಇರಾನ್ ಉಪಾಧ್ಯಕ್ಷ ಮೊಹಮ್ಮದ್ ಮೋಖ್ಬರ್ online desk

ಇರಾನ್ ಅಧ್ಯಕ್ಷ ಸ್ಥಾನಕ್ಕೆ ಉಪಾಧ್ಯಕ್ಷ Mohammad Mokhber ನೇಮಕ ಸಾಧ್ಯತೆ

ಇರಾನ್ ನಾಯಕ ಇಬ್ರಾಹಿಂ ರೈಸಿ ಹೆಲಿಕಾಫ್ಟರ್ ದುರಂತದಲ್ಲಿ ಮೃತಪಟ್ಟ ನಂತರ ಇರಾನ್ ನ ಮೊದಲ ಉಪಾಧ್ಯಕ್ಷ ಮೊಹಮ್ಮದ್ ಮೋಖ್ಬರ್ ಇರಾನ್ ನ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ.
Published on

ಇರಾನ್: ಇರಾನ್ ನಾಯಕ ಇಬ್ರಾಹಿಂ ರೈಸಿ ಹೆಲಿಕಾಫ್ಟರ್ ದುರಂತದಲ್ಲಿ ಮೃತಪಟ್ಟ ನಂತರ ಇರಾನ್ ನ ಮೊದಲ ಉಪಾಧ್ಯಕ್ಷ ಮೊಹಮ್ಮದ್ ಮೋಖ್ಬರ್ ಇರಾನ್ ನ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ. ಅವಧಿಗೂ ಮುನ್ನವೇ ಚುನಾವಣೆ ಎದುರಿಸಲು ಇರಾನ್ ಸಿದ್ಧಗೊಂಡಿದೆ. ಇರಾನ್ ನ ಸಂವಿಧಾನದ ಪ್ರಕಾರ, ಅಧ್ಯಕ್ಷರು ರಾಜೀನಾಮೆ ನೀಡಿದರೆ, ವಜಾಗೊಂಡರೆ, ಅವರ ಅನುಪಸ್ಥಿತಿಯಲ್ಲಿ ಅಥವಾ 2 ತಿಂಗಳಿಗೂ ಅಧಿಕ ಸಮಯ ಅನಾರೋಗ್ಯಕ್ಕೀಡಾದರೆ ಉಪಾಧ್ಯಕ್ಷರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಬಹುದಾಗಿದೆ.

ವಿದೇಶಾಂಗ ಸಚಿವ ಹೊಸೈನ್ ಅಮೀರ್-ಅಬ್ದುಲ್ಲಾಹಿಯಾನ್ ಮತ್ತು ಇತರ ಅಧಿಕಾರಿಗಳು ತೆರಳುತ್ತಿದ್ದ ಹೆಲಿಕಾಪ್ಟರ್ ಭಾನುವಾರ ಪತನಗೊಂಡಿದ್ದು ರೈಸಿ ನಿಧನರಾದರು. ಅಧ್ಯಕ್ಷರಾಗಿ ಅವರ ಮೊದಲ ನಾಲ್ಕು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುವವರಿದ್ದರು.

ಅಧ್ಯಕ್ಷ ಹುದ್ದೆಗೆ ಮೋಖ್ಬರ್ ಅವರ ಮಧ್ಯಂತರ ನೇಮಕಾತಿಗೆ ಇರಾನ್ ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಅನುಮತಿ ಅಗತ್ಯವಿದೆ. ದೇಶದ ಎಲ್ಲಾ ವ್ಯವಹಾರಗಳಲ್ಲಿ ಖಮೇನಿ ನಿರ್ಧಾರವೇ ಅಂತಿಮವಾಗಿರಲಿದೆ.

Iran Vice President Mokhber
ಹೆಲಿಕಾಪ್ಟರ್ ಪತನ: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವಿಗೆ ಪ್ರಧಾನಿ ಮೋದಿ, ಜೈಶಂಕರ್ ತೀವ್ರ ಸಂತಾಪ

ಅಲ್ಲಿನ ಸಂವಿಧಾನದ ಪ್ರಕಾರ ಇನ್ನು 50 ದಿನಗಳಲ್ಲಿ ಅಧ್ಯಕ್ಷರ ಹುದ್ದೆ ನಡೆಯಬೇಕಿದೆ. ಸಂಸತ್ತಿನ ಸ್ಪೀಕರ್, ನ್ಯಾಯಾಂಗದ ಮುಖ್ಯಸ್ಥರು ಮತ್ತು ಉಪಾಧ್ಯಕ್ಷರನ್ನು ಒಳಗೊಂಡಿರುವ ಕೌನ್ಸಿಲ್ ರಾಷ್ಟ್ರೀಯ ಮತವನ್ನು ಸಂಘಟಿಸುವ ಕಾರ್ಯವನ್ನು ನಿರ್ವಹಿಸಲಿದೆ.

ರೈಸಿ ಆಗಸ್ಟ್ 2021 ರಲ್ಲಿ ಅಧಿಕಾರ ವಹಿಸಿಕೊಂಡಿದ್ದರು, ಈ ವೇಳೆ 68 ವರ್ಷದ ಮೋಖ್ಬರ್ ಅವರನ್ನು ಉಪಾಧ್ಯಕ್ಷರಾಗಿ ನೇಮಿಸಲಾಗಿತ್ತು. ಉಪಾಧ್ಯಕ್ಷರಾಗಿರುವ ಮೊಖ್ಬರ್ ಖುಜೆಸ್ತಾನ್‌ನ ನೈಋತ್ಯ ಪ್ರಾಂತ್ಯದ ಡೆಜ್‌ಫುಲ್ ನಗರದಲ್ಲಿ ಜನಿಸಿದರು, ಅಲ್ಲಿ ಅವರು ಹಲವಾರು ಅಧಿಕೃತ ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com