2020 ರಲ್ಲಿ ನಾನು ಶ್ವೇತಭವನ ಬಿಡಬಾರದಿತ್ತು: ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್

ಯೂನಿವರ್ಸಿಟಿ ಆಫ್ ಫ್ಲೋರಿಡಾದ ಎಲೆಕ್ಷನ್ ಲ್ಯಾಬ್ ಪ್ರಕಾರ, 75 ಮಿಲಿಯನ್‌ಗಿಂತಲೂ ಹೆಚ್ಚು ಅಮೆರಿಕನ್ನರು ಭಾನುವಾರದ ವೇಳೆಗೆ ತಮ್ಮ ಮತಗಳನ್ನು ಚಲಾಯಿಸಿದ್ದಾರೆ
Donald Trump
ಡೊನಾಲ್ಡ್ ಟ್ರಂಪ್ online desk
Updated on

ವಾಷಿಂಗ್ ಟನ್: ಇತ್ತೀಚಿನ ದಶಕಗಳಲ್ಲಿ ಅಮೇರಿಕಾದಲ್ಲಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.

ಮತದಾರರನ್ನು ಸೆಳೆಯಲು ಟ್ರಂಪ್- ಕಮಲಾ ಹ್ಯಾರಿಸ್ ಕೊನೆಯ ಕ್ಷಣದ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.

ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಟ್ರಂಪ್ 2020 ರ ನೆನಪುಗಳನ್ನು ಕೆದಕಿದ್ದು, 2020 ರಲ್ಲಿ ನಾನು ಸೊಲೊಪ್ಪಿಕೊಂಡು ಶ್ವೇತ ಭವನವನ್ನು ಬಿಟ್ಟು ಹೊರಬರಬಾರದಿತ್ತು ಎಂದು ಹೇಳಿದ್ದಾರೆ. ಈ ಮೂಲಕ ನ.05 ರಂದು ನಡೆಯುವ ಮತದಾನದಲ್ಲಿ ಒಂದು ವೇಳೆ ತಾವು ಕಮಲಾ ಹ್ಯಾರಿಸ್ ವಿರುದ್ಧ ಪರಾಭವಗೊಂಡರೆ ಈ ಬಾರಿ ಸೋಲೊಪ್ಪಿಕೊಳ್ಳುವುದಿಲ್ಲ ಎಂಬ ಸುಳಿವು ನೀಡಿದ್ದಾರಾ? ಎಂಬ ಪ್ರಶ್ನೆ ಮೂಡಿದೆ.

ಯೂನಿವರ್ಸಿಟಿ ಆಫ್ ಫ್ಲೋರಿಡಾದ ಎಲೆಕ್ಷನ್ ಲ್ಯಾಬ್ ಪ್ರಕಾರ, 75 ಮಿಲಿಯನ್‌ಗಿಂತಲೂ ಹೆಚ್ಚು ಅಮೆರಿಕನ್ನರು ಭಾನುವಾರದ ವೇಳೆಗೆ ತಮ್ಮ ಮತಗಳನ್ನು ಚಲಾಯಿಸಿದ್ದಾರೆ, ಇದು ಯುಎಸ್‌ನಾದ್ಯಂತ ಆರಂಭಿಕ ಮತ್ತು ಮೇಲ್-ಇನ್ ಮತದಾನದ ಮಾಹಿತಿ ನೀಡುತ್ತದೆ.

ಒಟ್ಟಾರೆ ಪ್ರಚಾರದಲ್ಲಿ, ಕಮಲ ಹ್ಯಾರಿಸ್ ದೇಶದ ಮೂಲಭೂತ ಸ್ವಾತಂತ್ರ್ಯಗಳನ್ನು ರಕ್ಷಿಸಲು, ಸಾಂವಿಧಾನಿಕ ಮೌಲ್ಯಗಳನ್ನು ಕಾಪಾಡಲು ಮತ್ತು ಮಹಿಳಾ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ಚುನಾವಣೆಯನ್ನು ಎದುರಿಸುತ್ತಿರುವುದಾಗಿ ಹೇಳಿದ್ದರೆ, ಟ್ರಂಪ್ ಆರ್ಥಿಕತೆಯನ್ನು ಪುನರ್ನಿರ್ಮಿಸುವ ಮತ್ತು ಅಕ್ರಮ ವಲಸಿಗರಿಂದ ಅಮೇರಿಕಾವನ್ನು ಅನ್ನು ಮುಕ್ತಗೊಳಿಸುವ ಭರವಸೆ ನೀಡುತ್ತಿದ್ದಾರೆ.

ವಿವಿಧ ಸಮೀಕ್ಷೆಗಳು ಇಬ್ಬರು ಸ್ಪರ್ಧಿಗಳ ನಡುವೆ ಅಸಾಧಾರಣವಾದ ಬಿಗಿಯಾದ ಸ್ಪರ್ಧೆಯ ಏರ್ಪಟ್ಟಿದೆ ಎಂದು ಹೇಳುತ್ತಿವೆ. ತುರುಸಿದ ಸ್ಪರ್ಧೆ ಮುಂದುವರೆದಿರುವುದರಿಂದ ಬೆಂಬಲವನ್ನು ಹೆಚ್ಚಿಸಲು ಉಭಯ ಅಭ್ಯರ್ಥಿಗಳೂ ಅಂತಿಮ ವಾದಗಳನ್ನು ಮಾಡುತ್ತಿದ್ದಾರೆ.

Donald Trump
ಭಾರತದೊಂದಿಗೆ ಬಾಂಧವ್ಯ ಮತ್ತಷ್ಟು ಬಲಪಡಿಸುತ್ತೇವೆ; ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ ಖಂಡನೀಯ: ಡೊನಾಲ್ಡ್ ಟ್ರಂಪ್

ಅಯೋವಾದಲ್ಲಿ ನಡೆದ ಹೊಸ ಸಮೀಕ್ಷೆಯು ಟ್ರಂಪ್‌ 44 ಪ್ರತಿಶತದ ವಿರುದ್ಧ ಹ್ಯಾರಿಸ್ 47 ಪ್ರತಿಶತದಷ್ಟು ಮುನ್ನಡೆ ಸಾಧಿಸಿದ್ದಾರೆ ಎಂದು ಹೇಳಿದೆ. ಟ್ರಂಪ್ ಈ ಸಮೀಕ್ಷೆಯನ್ನು ತ್ವರಿತವಾಗಿ ತಿರಸ್ಕರಿಸಿದ್ದಾರೆ.

ರಾಜಕೀಯ ವಿಶ್ಲೇಷಕರು ಹೇಳುವ ಪ್ರಕಾರ, ಏಳು ರಾಜ್ಯಗಳಲ್ಲಿ ಕನಿಷ್ಠ ನಾಲ್ಕು ರಾಜ್ಯಗಳಲ್ಲಿ ತೀವ್ರ ಸ್ಪರ್ಧೆ ಇದೆ. 2020 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಎಣಿಕೆ ಪ್ರಕ್ರಿಯೆಯನ್ನು ಪ್ರಶ್ನಿಸಿದ ಟ್ರಂಪ್, ಭಾನುವಾರ ಪೆನ್ಸಿಲ್ವೇನಿಯಾದಲ್ಲಿ ನಡೆದ ರ್ಯಾಲಿಯಲ್ಲಿ ಅವರು ಶ್ವೇತಭವನವನ್ನು "ಬಿಟ್ಟು" ಹೋಗಬಾರದಿತ್ತೆಂದು ಹೇಳಿರುವುದು ಈಗ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com