ಜೈಶಂಕರ್- ಆಸ್ಟ್ರೇಲಿಯಾ ವಿದೇಶಾಂಗ ಸಚಿವರ ಪತ್ರಿಕಾಗೋಷ್ಠಿ ಪ್ರಸಾರ: ಮಾಧ್ಯಮಕ್ಕೆ ಕೆನಡಾ ನಿರ್ಬಂಧ

ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಮತ್ತು ಆಸ್ಟ್ರೇಲಿಯಾ ಟುಡೆಯ ಕೆಲವು ಪುಟಗಳನ್ನು ನಿರ್ಬಂಧಿಸುವ ಕೆನಡಾದ ಕ್ರಮ ವಾಕ್ ಸ್ವಾತಂತ್ರ್ಯದ ಬಗ್ಗೆ ಬೂಟಾಟಿಕೆಯನ್ನು ಬಯಲುಮಾಡಿದೆ.
S Jaishankar
ಎಸ್ ಜೈಶಂಕರ್ online desk
Updated on

ಕೆನಡಾ: ವಿದೇಶಾಂಗ ವ್ಯವಹಾರಗಳ ಸಚಿವ (ಇಎಎಂ) ಎಸ್ ಜೈಶಂಕರ್ ಮತ್ತು ಆಸ್ಟ್ರೇಲಿಯಾ ವಿದೇಶಾಂಗ ಸಚಿವ ಪೆನ್ನಿ ವಾಂಗ್ ಅವರ ಪತ್ರಿಕಾಗೋಷ್ಠಿಯನ್ನು ಪ್ರಸಾರ ಮಾಡಿದ ಕೆಲವೇ ಗಂಟೆಗಳ ನಂತರ ಕೆನಡಾ ಆಸ್ಟ್ರೇಲಿಯಾದ ಮಾಧ್ಯಮವನ್ನು ನಿರ್ಬಂಧಿಸಿದೆ ಎಂದು ಭಾರತ ಆರೋಪಿಸಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಈ ಬಗ್ಗೆ ಮಾತನಾಡಿದ್ದು, ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಮತ್ತು ಆಸ್ಟ್ರೇಲಿಯಾ ಟುಡೆಯ ಕೆಲವು ಪುಟಗಳನ್ನು ನಿರ್ಬಂಧಿಸುವ ಕೆನಡಾದ ಕ್ರಮ ವಾಕ್ ಸ್ವಾತಂತ್ರ್ಯದ ಬಗ್ಗೆ ಬೂಟಾಟಿಕೆಯನ್ನು ಬಯಲುಮಾಡಿದೆ ಎಂದು ಹೇಳಿದರು.

"ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು, ಈ ನಿರ್ದಿಷ್ಟ ಔಟ್‌ಲೆಟ್‌ನ ಪುಟಗಳು, ಪ್ರಮುಖ ಡಯಾಸ್ಪೊರಾ ಔಟ್‌ಲೆಟ್‌ಗಳನ್ನು ನಿರ್ಬಂಧಿಸಲಾಗಿದೆ ಮತ್ತು ಕೆನಡಾದಲ್ಲಿ ಇವುಗಳು ವೀಕ್ಷಕರಿಗೆ ಲಭ್ಯವಿಲ್ಲ ಎಂಬ ಮಾಹಿತಿ ನಾವು ಪಡೆದುಕೊಂಡಿದ್ದೇವೆ. ಈ ನಿರ್ದಿಷ್ಟ ಹ್ಯಾಂಡಲ್ ಇಎಎಂ ಡಾ ಎಸ್ ಜೈಶಂಕರ್ ಅವರು ಪೆನ್ನಿ ವಾಂಗ್ ಅವರ ಪತ್ರಿಕಾಗೋಷ್ಠಿಯನ್ನು ಪ್ರಸಾರ ಮಾಡಿದ ಕೇವಲ ಒಂದು ಗಂಟೆ ಅಥವಾ ಕೆಲವು ಗಂಟೆಗಳ ನಂತರ ಇದು ಸಂಭವಿಸಿದೆ ಎಂದು ಸಾಪ್ತಾಹಿಕ ಮಾಧ್ಯಮಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆಯಾಗಿ ಜೈಸ್ವಾಲ್ ಹೇಳಿದರು.

S Jaishankar
ಕೆನಡಾ: ಪ್ರತಿಭಟನೆಯಲ್ಲಿ ಭಾಗಿಯಾದ ಆರೋಪ; ಹಿಂದೂ ದೇವಾಲಯದ ಅರ್ಚಕ ಅಮಾನತು

"ನಮಗೆ ಕೆನಡಾದ ನಡೆ ಅಚ್ಚರಿ ಉಂಟುಮಾಡಿದೆ. ಇದು ನಮಗೆ ವಿಚಿತ್ರವಾಗಿ ಕಾಣುತ್ತದೆ. ಆದರೆ ಇವುಗಳು ವಾಕ್ ಸ್ವಾತಂತ್ರ್ಯದ ಬಗ್ಗೆ ಕೆನಡಾದ ಬೂಟಾಟಿಕೆಯನ್ನು ಮತ್ತೊಮ್ಮೆ ಎತ್ತಿ ತೋರಿಸುವ ನಡೆಯಾಗಿವೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ಹೇಳಿದರು.

ಜೈಶಂಕರ್ ಆಸ್ಟ್ರೇಲಿಯಾದಲ್ಲಿ ತಮ್ಮ ಮಾಧ್ಯಮ ಸಂವಾದದಲ್ಲಿ ಯಾವುದೇ ನಿರ್ದಿಷ್ಟ ಪುರಾವೆಗಳನ್ನು ಹಂಚಿಕೊಳ್ಳದೆ ಕೆನಡಾ ಭಾರತದ ವಿರುದ್ಧ ಮಾಡಿದ ಆರೋಪಗಳ ಬಗ್ಗೆ ಮಾತನಾಡಿದ್ದಾರೆ ಎಂದು ಅವರು ಹೇಳಿದರು.

"ವಿದೇಶಾಂಗ ವ್ಯವಹಾರಗಳ ಸಚಿವರು ತಮ್ಮ ಮಾಧ್ಯಮಗಳಲ್ಲಿ ಮೂರು ವಿಷಯಗಳ ಬಗ್ಗೆ ಮಾತನಾಡಿರುವುದನ್ನು ನೀವು ನೋಡಿದ್ದೀರಿ. ಕೆನಡಾ ಯಾವುದೇ ನಿರ್ದಿಷ್ಟ ಪುರಾವೆಗಳಿಲ್ಲದೆ ಆರೋಪಗಳನ್ನು ಮಾಡುತ್ತಿದೆ ಎಂಬುದು ಆ ಪೈಕಿ ಒಂದಾಗಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com