CIA ಮುಖ್ಯಸ್ಥರಾಗಿ Kash Patel ನೇಮಕ?: ಗುಜರಾತ್ ಮೂಲದ ಈ ಅಮೇರಿಕನ್ ಯಾರು ಗೊತ್ತಾ?

ಈ ಹಿಂದೆ ರಾಮ ಮಂದಿರ ವಿಷಯವಾಗಿ ಅಮೇರಿಕಾ ಮಾಧ್ಯಮಗಳ ದೃಷ್ಟಿಕೋನಗಳನ್ನು ಪ್ರಶ್ನಿಸಿದ್ದ ಕಶ್ಯಪ್ ಪಟೇಲ್ ಅಮೇರಿಕಾ ಮಾಧ್ಯಮಗಳು ಐತಿಹಾಸಿಕ ಸನ್ನಿವೇಶವನ್ನು ಕಡೆಗಣಿಸಿದ್ದಕ್ಕೆ ತೀವ್ರ ಟೀಕೆ ಮಾಡಿದ್ದರು.
Narendra Modi in Ram Temple- Kashyap Patel with Donald Trump
ರಾಮ ಮಂದಿರದಲ್ಲಿ ಪ್ರಧಾನಿ ಮೋದಿ, ಡೊನಾಲ್ಡ್ ಟ್ರಂಪ್ ಜೊತೆ ಕಶ್ಯಪ್ ಪಟೇಲ್online desk
Updated on

ವಾಷಿಂಗ್ ಟನ್: ಅಮೇರಿಕಾದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಆಡಳಿತದಲ್ಲಿ ವಿವಿಧ ಇಲಾಖೆಗಳ ಮುಖ್ಯಸ್ಥರ ನೇಮಕವನ್ನು ಆರಂಭಿಸಿದ್ದಾರೆ.

ಹೊಸ ಆಡಳಿತಕ್ಕೆ ಅಮೇರಿಕಾ ಸಜ್ಜುಗೊಳ್ಳುತ್ತಿದ್ದು, ಅಮೇರಿಕಾದ ಗುಪ್ತಚರ ಇಲಾಖೆಯಾಗಿರುವ ಸೆಂಟ್ರಲ್ ಇಂಟಲಿಜೆನ್ಸ್ ಏಜೆನ್ಸಿಯ ಮುಖ್ಯಸ್ಥರಾಗಿ ಗುಜರಾತ್ ಮೂಲದ ಕಶ್ಯಪ್ ಪಟೇಲ್ (Kashyap Patel) ಅಥವಾ ಕಶ್ ಪಟೆಲ್ (Kash Patel) ನೇಮಕವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕಶ್ಯಪ್ ಪಟೇಲ್ ಡೊನಾಲ್ಡ್ ಟ್ರಂಪ್ ಆಪ್ತರಾಗಿದ್ದು, ರಿಪಬ್ಲಿಕನ್ ನ ಮಾಜಿ ಹೌಸ್ ಸ್ಟಾಫರ್ ಆಗಿದ್ದರು. ಈ ಹಿಂದೆ ಟ್ರಂಪ್ ಆಡಳಿತಾವಧಿಯಲ್ಲಿ ಅವರು ರಕ್ಷಣಾ ಹಾಗೂ ಗುಪ್ತಚರ ವಿಭಾಗಗಳಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.

ಸಿಐಎ ನಿರ್ದೇಶಕರ ಹುದ್ದೆಗೆ ಕಶ್ಯಪ್ ಪಟೇಲ್ ಅವರ ನೇಮಕಕ್ಕೆ ಅನುಮೋದನೆ ಸಿಗದೇ ಇದ್ದಲ್ಲಿ ಅವರನ್ನು ರಾಷ್ಟ್ರೀಯ ಭದ್ರತಾ ಕೌನ್ಸಿಲ್ ಗೆ ನೇಮಕ ಮಾಡಲಾಗುತ್ತದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಟ್ರಂಪ್ ರೀತಿಯಲ್ಲೇ ವಿಭಿನ್ನ ಚಿಂತನೆಗಳಿಗೆ ಕಶ್ಯಪ್ ಪಟೇಲ್ ಸಹ ಹೆಸರಾಗಿದ್ದಾರೆ. ರಾಮಮಂದಿರ ವಿಷಯದಲ್ಲಿ ಅಮೇರಿಕಾ ಮಾಧ್ಯಮಗಳಿಗೆ ತಪರಾಕಿ ನೀಡಿದ್ದ ಕಶ್ಯಪ್ ಪಟೇಲ್

ಈ ಹಿಂದೆ ರಾಮ ಮಂದಿರ ವಿಷಯವಾಗಿ ಅಮೇರಿಕಾ ಮಾಧ್ಯಮಗಳ ದೃಷ್ಟಿಕೋನಗಳನ್ನು ಪ್ರಶ್ನಿಸಿದ್ದ ಕಶ್ಯಪ್ ಪಟೇಲ್ ಅಮೇರಿಕಾ ಮಾಧ್ಯಮಗಳು ಐತಿಹಾಸಿಕ ಸನ್ನಿವೇಶವನ್ನು ಕಡೆಗಣಿಸಿದ್ದಕ್ಕೆ ತೀವ್ರ ಟೀಕೆ ಮಾಡಿದ್ದರು.

"ರಾಮನ ಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅಯೋಧ್ಯೆಗೆ ಹೋದಾಗ, ಎಲ್ಲಾ ವಾಷಿಂಗ್ಟನ್ ಪತ್ರಿಕೆಗಳು ಕಳೆದ 50 ವರ್ಷಗಳ ಇತಿಹಾಸವನ್ನು ಮಾತ್ರ ಪ್ರಕಟಿಸಿದ್ದವು. ಆದರೆ ಅದಕ್ಕೂ ಹಿಂದಿನ 500 ವರ್ಷಗಳ ಇತಿಹಾಸವನ್ನು ಇಲ್ಲಿನ ಮಾಧ್ಯಮಗಳು ಮರೆತಿವೆ. ನೀವು ಹಿಂದೂ ಅಥವಾ ಮುಸ್ಲಿಮರಾಗಿರಿ ಅಥವಾ ಇಲ್ಲದಿರಲಿ, 1500 ರಲ್ಲಿ ಉರುಳಿಸಲ್ಪಟ್ಟ ಹಿಂದೂ ಪಂಥದಲ್ಲಿ ಸರ್ವೋತ್ಕೃಷ್ಟ ದೇವತೆಗಳಲ್ಲಿ ಒಂದಾದ ದೇವರಿಗೆ ಸಮರ್ಪಿತವಾದ ದೇವಾಲಯವಿತ್ತು ಮತ್ತು ಅದನ್ನು 500 ವರ್ಷಗಳಿಂದ ಮರಳಿ ಪಡೆಯಲು ಹಿಂದೂಗಳು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಕಶ್ಯಪ್ ಪಟೇಲ್ ತಾವು ರಾಮ ಮಂದಿರದ ಪ್ರತಿಪಾದಕ ಎಂಬ ಸಂದೇಶ ನೀಡಿದ್ದರು.

Narendra Modi in Ram Temple- Kashyap Patel with Donald Trump
Donald Trump ಆಡಳಿತದಲ್ಲಿ ಭಾರತಕ್ಕೆ ಉಂಟಾಗಬಹುದಾದ ಲಾಭ-ನಷ್ಟಗಳ ಲೆಕ್ಕಾಚಾರ ಹೀಗಿದೆ...

ಪಟೇಲ್ ಅವರು ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವಿನ ಸಂಪರ್ಕದ ಬಗ್ಗೆ ಮಾಧ್ಯಮ ಪ್ರಸಾರದ ಬಗ್ಗೆ ಮಾತನಾಡಿದ್ದ ಕಶ್ಯಪ್ ಪಟೇಲ್, ವಾಷಿಂಗ್ಟನ್ ಸ್ಥಾಪನೆಯು (ವಾಷಿಂಗ್ ಟನ್ ಮಾಧ್ಯಮಗಳು) ಇತಿಹಾಸದ ಭಾಗವನ್ನು ಮರೆತು ಭಾರತಕ್ಕೆ ಮತ್ತು ಪ್ರಧಾನಿ ಸ್ಥಾನಕ್ಕೆ ಹಾನಿಕಾರಕವಾದುದ್ದನ್ನು ಪ್ರಕಟಿಸಿರುವುದು ತಪ್ಪು ಮಾಹಿತಿ ಪ್ರಚಾರ ಎಂದು ನಾನು ನಂಬುತ್ತೇನೆ. ಅವರು ಅದನ್ನು ಬಳಸುತ್ತಿದ್ದಾರೆ ಏಕೆಂದರೆ ಅವರು ಟ್ರಂಪ್ ಮತ್ತು ಮೋದಿಯನ್ನು ಒಂದೇ ರೀತಿಯ ವ್ಯಕ್ತಿಗಳಾಗಿ ಹೋಲಿಸುತ್ತಾರೆ ಮತ್ತು ವಾಷಿಂಗ್ಟನ್‌ನ ಸ್ಥಾಪನೆಯ ವರ್ಗ ಆ ರೀತಿ ಆಗುವುದನ್ನು ಬಯಸುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com