Donald Trump ಆಡಳಿತದಲ್ಲಿ ಭಾರತಕ್ಕೆ ಉಂಟಾಗಬಹುದಾದ ಲಾಭ-ನಷ್ಟಗಳ ಲೆಕ್ಕಾಚಾರ ಹೀಗಿದೆ...

ಟ್ರಂಪ್ ಆಡಳಿತದಿಂದ ಭಾರತಕ್ಕೆ ಯಾವೆಲ್ಲಾ ಕ್ಷೇತ್ರಗಳಲ್ಲಿ ಲಾಭ ಆಗುವ ಸಾಧ್ಯತೆ ಇದೆ, ಉಂಟಾಗಲಿರುವ ನಷ್ಟ ಏನು ಎಂಬುದನ್ನ ಈ ಲೇಖನದಲ್ಲಿ ತಿಳಿದುಕೊಳ್ಳುವುದಾದರೆ...
PM Modi- Donald Trump
ಪ್ರಧಾನಿ ನರೇಂದ್ರ ಮೋದಿ-ಡೊನಾಲ್ಡ್ ಟ್ರಂಪ್online desk
Updated on

ಅಮೇರಿಕಾದಲ್ಲಿ ಡೊನಾಲ್ಡ್ ಟ್ರಂಪ್ ನಿಯೋಜಿತ ಅಧ್ಯಕ್ಷರಾಗಿದ್ದಾರೆ. ಜನವರಿಯಿಂದ ಅವರ ಆಡಳಿತ ಆರಂಭವಾಗಲಿದೆ. ಈ ಆಡಳಿತದ ಬದಲಾವಣೆಯಿಂದಾಗಿ ತಮಗೆ ಉಂಟಾಗುವ ಲಾಭ-ನಷ್ಟಗಳ ಲೆಕ್ಕಾಚಾರದಲ್ಲಿ ಅನೇಕ ರಾಷ್ಟ್ರಗಳು ತೊಡಗಿವೆ.

ಡೊನಾಲ್ಡ್ ಟ್ರಂಪ್ ಅಮೇರಿಕಾದ ಅಧ್ಯಕ್ಷರಾಗುತ್ತಿರುವುದು ಸಹಜವಾಗಿ ಭಾರತದ ಮೇಲೆಯೂ ಪರಿಣಾಮ ಉಂಟುಮಾಡಲಿದೆ. ಟ್ರಂಪ್ ಆಡಳಿತದಿಂದ ಭಾರತಕ್ಕೆ ಯಾವೆಲ್ಲಾ ಕ್ಷೇತ್ರಗಳಲ್ಲಿ ಲಾಭ ಆಗುವ ಸಾಧ್ಯತೆ ಇದೆ, ಉಂಟಾಗಲಿರುವ ನಷ್ಟ ಏನು ಎಂಬುದನ್ನ ಈ ಲೇಖನದಲ್ಲಿ ತಿಳಿದುಕೊಳ್ಳುವುದಾದರೆ...

ಸುಂಕಗಳು ಹಾಗೂ ವಲಸೆ ನಿರ್ಬಂಧ

ಡೊನಾಲ್ಡ್ ಟ್ರಂಪ್ Make America Great Again ಎಂಬ ಘೋಷವಾಕ್ಯದೊಂದಿಗೇ ಚುನಾವಣೆ ಎದುರಿಸಿ ಆರಿಸಿ ಬಂದಿದ್ದಾರೆ. ಅಮೇರಿಕಾ ಕೇಂದ್ರಿತ ಚಿಂತನೆಯ ನಡುವೆ, ಭಾರತ ಹೆಚ್ಚಿನ ಸುಂಕಗಳು ಮತ್ತು ವಲಸೆ ನಿರ್ಬಂಧಗಳ ಭಾರವನ್ನು ಟ್ರಂಪ್ ಆಡಳಿತದಲ್ಲಿ ಎದುರಿಸಬೇಕಾಗಬಹುದು. ಆದರೆ ಈ ಸವಾಲುಗಳ ಹೊರತಾಗಿಯೂ ಟ್ರಂಪ್ ಏನಾದರೂ ಚೀನಾದ ಮೇಲೆ ಹೆಚ್ಚಿನ ಸುಂಕಗಳನ್ನು ವಿಧಿಸಿದರೆ ಅದು ಭಾರತಕ್ಕೆ ಲಾಭವಾಗಲಿದೆ ಎಂದು ಫಿಲಿಪ್ ಕ್ಯಾಪಿಟಲ್ ವರದಿ ಹೇಳಿದೆ.

ಇದರ ಹೊರತಾಗಿ, ವಿಶೇಷವಾಗಿ ಅಂತರಾಷ್ಟ್ರೀಯ ವ್ಯಾಪಾರ, ಸುಂಕಗಳು ಮತ್ತು ವಲಸೆ ನೀತಿಗಳಲ್ಲಿ ಗಣನೀಯ ಬದಲಾವಣೆಗಳಾಗುವ ಸಾಧ್ಯತೆ ಇದೆ. ವ್ಯಾಪಾರ ನೀತಿಗಳಲ್ಲಿನ ಜಾಗತಿಕ ಬದಲಾವಣೆ ಭಾರತಕ್ಕೆ ಹಾನಿಯನ್ನುಂಟುಮಾಡುತ್ತದೆ ಆದರೆ "ಚೀನಾ +1" ವಿಧಾನ ಭಾರತಕ್ಕೆ ಗಣನೀಯ ಪ್ರಯೋಜನಗಳಿಗೆ ಕಾರಣವಾಗಬಹುದು, ವಿವಿಧ ಕ್ಷೇತ್ರಗಳಲ್ಲಿ ಚೀನಾದ ನಿಯಂತ್ರಣ ಕ್ರಮಗಳಿಂದ ಉಂಟಾಗುವ ಕೊರತೆಯನ್ನು ತುಂಬಲು ಭಾರತ ಸರ್ಕಾರ ಮತ್ತು ಕಾರ್ಪೊರೇಟ್ ವಲಯದಲ್ಲಿ ಸಕಾಲಿಕ ಕ್ರಮಗಳನ್ನು ನಿರೀಕ್ಷಿಸಬಹುದಾಗಿದೆ. ಈ ಬದಲಾವಣೆಯ ಗಾಳಿ ಅಂತಿಮವಾಗಿ ಭಾರತವನ್ನು ಮಧ್ಯಮದಿಂದ ದೀರ್ಘಾವಧಿಯಲ್ಲಿ ಧನಾತ್ಮಕವಾಗಿ ಇರಿಸಬಹುದು ಎಂದು ವರದಿ ವಿಶ್ವಾಸ ವ್ಯಕ್ತಪಡಿಸಿದೆ.

ಚೀನಾ ಮೇಲೆ ಅಮೇರಿಕಾದ ಹೆಚ್ಚಿನ ಸುಂಕ ಭಾರತಕ್ಕೆ ಲಾಭ!

ಟ್ರಂಪ್ ಈ ಹಿಂದೆಯೂ ಸುಂಕಗಳನ್ನು ವಿಧಿಸುವ ವಿಷಯದಲ್ಲಿ ವಿಶೇಷವಾಗಿ ಚೀನಾದ ಆಮದುಗಳ ಮೇಲೆ ಆಕ್ರಮಣಕಾರಿ ನಿಲುವನ್ನು ತೋರಿಸಿದ್ದಾರೆ. ಇದು ಅಮೇರಿಕಾ- ಚೀನಾ ವ್ಯಾಪಾರ ಸಂಬಂಧಗಳನ್ನು ಅಡ್ಡಿಪಡಿಸಬಹುದು ಆದರೆ ಭಾರತಕ್ಕೆ ಅಮೇರಿಕಾದ ದೊಡ್ಡ ವ್ಯಾಪಾರ ಪಾಲುದಾರನಾಗುವ ಅವಕಾಶಗಳನ್ನು ನೀಡುತ್ತದೆ. ಆದಾಗ್ಯೂ ಟ್ರಂಪ್‌ ಅವರ ಕಠಿಣ ವಲಸೆ ನೀತಿಗಳು ಭಾರತೀಯ ಐಟಿ ಸಂಸ್ಥೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ವರದಿ ಹೇಳಿದೆ. ಆದರೆ ಕಾರ್ಯತಂತ್ರದ ಸ್ಥಳೀಯ ನೇಮಕಾತಿ ಮತ್ತು near-shore centres (ನೆರೆ ರಾಷ್ಟ್ರಗಳ ಕೇಂದ್ರಗಳಲ್ಲಿ) ಗಳ ಮೂಲಕ ಭಾರತೀಯ ಕಂಪನಿಗಳು ಪರಿಸ್ಥಿತಿಗಳಿಗೆ ಹೊಂದಿಕೊಳ್ಳಬಹುದು ವಿಶ್ಲೇಷಿಸಲಾಗುತ್ತಿದೆ.

PM Modi- Donald Trump
ಮಹಿಳೆಗೆ ಆದ್ಯತೆ ನೀಡಿದ ಡೊನಾಲ್ಡ್ ಟ್ರಂಪ್: ಶ್ವೇತಭವನ ಮುಖ್ಯಸ್ಥೆಯಾಗಿ ಸೂಸಿ ವೈಲ್ಸ್ ನೇಮಕ

EV ಹಾಗೂ ಇಂಧನ ಕ್ಷೇತ್ರ

ಭಾರತದಿಂದ ಇವಿ ಘಟಕಗಳಿಗೆ ಅಲ್ಪಾವಧಿಯ ಬೇಡಿಕೆ ಟ್ರಂಪ್ ಆಡಳಿತದಲ್ಲಿ ಕಡಿಮೆಯಾಗಬಹುದು, ಆದರೆ ಹೈಬ್ರಿಡ್ ವಾಹನಗಳು ಹೆಚ್ಚಿನ ಆಡ್ಯತೆ ಪಡೆಯುವ ಸಾಧ್ಯತೆ ಇದೆ. ಹೆಚ್ಚಿದ ಮೂಲಸೌಕರ್ಯ ವೆಚ್ಚ ಟ್ರಕ್ ಘಟಕಗಳನ್ನು ತಯಾರಿಸುವಲ್ಲಿ ತೊಡಗಿರುವ ಕಂಪನಿಗಳಿಗೆ ಪ್ರಯೋಜನವನ್ನು ನೀಡಲಿದೆ.

ಟ್ರಂಪ್ ತಮ್ಮ ಅಧ್ಯಕ್ಷತೆಯ ಅವಧಿಯಲ್ಲಿ ಪಳೆಯುಳಿಕೆ ಇಂಧನಗಳಿಗೆ ಒಲವು ತೋರಬಹುದು, ಇದು ಯುಎಸ್‌ನಲ್ಲಿ ಹೆಚ್ಚಿನ ತೈಲ ಮತ್ತು ಅನಿಲ ಉತ್ಪಾದನೆಗೆ ಕಾರಣವಾಗಬಹುದು. ಪರಿಣಾಮವಾಗಿ ಇಂಧನ ಬೆಲೆಗಳು ಸ್ಥಿರವಾಗುವುದರಿಂದ ಭಾರತೀಯ ತೈಲ ಸಂಸ್ಕರಣಾಗಾರಗಳು ಮತ್ತು ಅನಿಲ ಉಪಯುಕ್ತತೆಗಳಿಗೆ ಪ್ರಯೋಜನವಾಗಲಿದೆ.

ಚೀನಾದ ಬಗ್ಗೆ ಟ್ರಂಪ್ ಅವರ ಕಠಿಣ ನಿಲುವು ಯುಎಸ್-ಭಾರತ ರಕ್ಷಣಾ ಸಹಕಾರಕ್ಕೆ ಹೆಚ್ಚಿನ ವೇಗ ನೀಡಬಹುದು. ಅಮೇರಿಕಾದಲ್ಲಿ ಹೆಚ್ಚಿದ ಮೂಲಸೌಕರ್ಯ ಖರ್ಚು ಮತ್ತು ಪಳೆಯುಳಿಕೆ ಇಂಧನ ಹೂಡಿಕೆ ಲೋಹಗಳಿಗೆ ಬೇಡಿಕೆಯನ್ನು ಹೆಚ್ಚಿಸುತ್ತದೆ. ಇದು ಗಣಿಗಾರಿಕೆ ಮತ್ತು ಲೋಹಗಳಲ್ಲಿ ತೊಡಗಿರುವ ಭಾರತೀಯ ಕಂಪನಿಗಳಿಗೆ ಪ್ರಯೋಜನವನ್ನು ನೀಡುವ ಸಾಧ್ಯತೆಗಳು ಹೆಚ್ಚಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com