ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪಾಕಿಸ್ತಾನ ಪ್ರಧಾನಿ Shehbaz Sharif, ವ್ಯಾಪಕ ಟ್ರೋಲ್

ಅಮರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ಅಮೆರಿಕ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಅಭಿನಂದಿಸುವ ಮೂಲಕ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ವ್ಯಾಪಕ ಟ್ರೋಲ್ ಗೆ ತುತ್ತಾಗಿದ್ದಾರೆ.
Shehbaz Sharif-Donald Trump
ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್
Updated on

ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದು, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ವ್ಯಾಪಕ ಟ್ರೋಲ್ ಗೆ ತುತ್ತಾಗಿದ್ದಾರೆ.

ಹೌದು.. ಅಮರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ಅಮೆರಿಕ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಅಭಿನಂದಿಸುವ ಮೂಲಕ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ವ್ಯಾಪಕ ಟ್ರೋಲ್ ಗೆ ತುತ್ತಾಗಿದ್ದಾರೆ.

ಅರೆ ಟ್ರಂಪ್ ರನ್ನು ಅಭಿನಂದಿಸಿದರೆ ತಪ್ಪೇನು.. ಅದನ್ನೇಕೆ ಟ್ರೋಲ್ ಮಾಡಬೇಕು ಎಂಬ ಪ್ರಶ್ನೆ ಮೂಡಬಹುದು.. ಆದರೆ ಶೆಹಬಾಜ್ ಷರೀಫ್ ಟ್ರಂಪ್ ರನ್ನು ಅಭಿನಂದಿಸಲು ನಿಷೇಧಿತ ಆ್ಯಪ್ ಅನ್ನು ಬಳಕೆ ಮಾಡಿದ್ದಾರೆ.

ಪಾಕಿಸ್ತಾನದಲ್ಲಿ ಎಕ್ಸ್ (ಟ್ವಿಟರ್) ಅನ್ನು ನಿಷೇಧಿಸಲಾಗಿದ್ದು, ಹೀಗಾಗಿ ಸಾಮಾನ್ಯವಾಗಿ ಪಾಕಿಸ್ತಾನದ ವೆಬ್ ಬ್ರೌಸರ್ ಗಳಲ್ಲಿ ಎಕ್ಸ್ ದೊರೆಯುವುದಿಲ್ಲ. ಆದರೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಅಮೆರಿಕ ಅಧ್ಯಕ್ಷರಾಗಿ ಆಯ್ಕೆಗೊಂಡ ಟ್ರಂಪ್‍ರನ್ನು ಅಭಿನಂದಿಸಲು ಪಾಕಿಸ್ತಾನ ಪ್ರಧಾನಿ ಶಹಬಾಝ್ ಷರೀಫ್ ವಿಪಿಎನ್ ಬಳಸಿ ಸಿಕ್ಕಿಬಿದ್ದಿದ್ದಾರೆ.

Shehbaz Sharif-Donald Trump
Watch | ಪಾಕಿಸ್ತಾನ: ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಪ್ರಬಲ ಸ್ಫೋಟ; 24 ಸಾವು, 46 ಮಂದಿಗೆ ಗಾಯ

ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ಷರೀಫ್ ಸರಕಾರ ಈ ವರ್ಷದ ಆರಂಭದಲ್ಲಿ ಪಾಕಿಸ್ತಾನದಲ್ಲಿ `ಎಕ್ಸ್'ಗೆ ನಿಷೇಧ ವಿಧಿಸಿತ್ತು. ಬಲೂಚಿಸ್ತಾನ್ ಲಿಬರೇಷನ್ ಆರ್ಮಿ(ಬಿಎಲ್‍ಎ) ಉಗ್ರಗಾಮಿಗಳು ದೇಶವಿರೋಧಿ ಚಟುವಟಿಕೆಗಳನ್ನು ಹರಡಲು ವೇದಿಕೆಯನ್ನು ಬಳಸುತ್ತಿದ್ದರು ಎಂದು ಪಾಕಿಸ್ತಾನದ ಮಾಹಿತಿ ಸಚಿವ ಅತಾವುಲ್ಲಾ ತರಾರ್ ಪ್ರತಿಪಾದಿಸಿದ್ದರು. ಹೀಗಾಗಿ ಪಾಕಿಸ್ತಾನದಲ್ಲಿ ಎಕ್ಸ್ ನಿಷೇಧಕ್ಕೆ ತುತ್ತಾಗಿತ್ತು. ಆದರೆ ಇದೀಗ ಅವರದ್ದೇ ಪ್ರಧಾನಿ ವಿಪಿಎನ್ ಮೂಲಕ ಎಕ್ಸ್ ಬಳಕೆ ಮಾಡಿದ್ದಾರೆ.

`ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡನೇ ಅವಧಿಗೆ ಐತಿಹಾಸಿಕ ವಿಜಯ ದಾಖಲಿಸಿರುವುದಕ್ಕೆ ಅಭಿನಂದನೆಗಳು. ಪಾಕಿಸ್ತಾನ-ಅಮೆರಿಕ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಮತ್ತು ವಿಸ್ತರಿಸಲು ಹೊಸ ಆಡಳಿತದೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ' ಎಂದು ಷರೀಫ್ ನವೆಂಬರ್ 6ರಂದು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ಆದರೆ ಅವರದ್ದೇ ಸರ್ಕಾರ ನಿಷೇಧಿಸಿರುವ , ಪಾಕಿಸ್ತಾನದಲ್ಲಿ ಕಾನೂನು ಬಾಹಿರವಾದ `ಎಕ್ಸ್'ನಲ್ಲಿ ಪೋಸ್ಟ್ ಮಾಡಲು ಪ್ರಧಾನಿ ಷರೀಫ್ ವಿಪಿನ್ ಬಳಸಿದ್ದಾರೆ' ಎಂದು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಅಂದಹಾಗೆ ವಿಪಿಎನ್ (ವರ್ಚುವಲ್ ಪ್ರೈವೇಟ್ ನೆಟ್‍ವರ್ಕ್) ಇಂಟರ್ನೆಟ್ ಮೂಲಕ ಸಾಧನಗಳ ನಡುವೆ ಖಾಸಗಿ ನೆಟ್‍ವರ್ಕ್ ಸಂಪರ್ಕವನ್ನು ಸಾಧಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com