ನ್ಯೂಯಾರ್ಕ್: ಬಿಲಿಯನೇರ್ ಎಲಾನ್ ಮಸ್ಕ್ ತಮ್ಮ ಮಕ್ಕಳ ಪೈಕಿ ಓರ್ವ ಮಗ ಲಿಂಗಪರಿವರ್ತನೆಯಾಗಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ವಿವಿಯೆನ್ ಜೆನ್ನಾ ವಿಲ್ಸನ್ ಲಿಂಗಪರಿವರ್ತನೆಯಾಗಿರುವ ಎಲಾನ್ ಮಸ್ಕ್ ಪುತ್ರನಾಗಿದ್ದಾರೆ. ಆಕೆ ಇತ್ತೀಚೆಗೆ ಪೂರ್ಣಗೊಂಡ ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವಿನ ಬಗ್ಗೆ ಮಾತನಾಡುತ್ತಾ, ಟ್ರಂಪ್ ಅಧಿಕಾರ ವಹಿಸಿಕೊಳ್ಳುವ ಅಮೇರಿಕಾದಲ್ಲಿ ನನಗೆ ಭವಿಷ್ಯ ಕಾಣುತ್ತಿಲ್ಲ ಎಂದು ಹೇಳಿದ್ದರು.
“ನಾನು ಸ್ವಲ್ಪ ಸಮಯದವರೆಗೆ ಯೋಚಿಸುತ್ತಿದ್ದೆ, ಆದರೆ ನಿನ್ನೆ ನನಗೆ ಆ ಯೋಚನೆ ನನಗೆ ದೃಢವಾಗಿದೆ. ನನಗೆ ಅಮೇರಿಕಾದಲ್ಲಿ ಭವಿಷ್ಯ ಇಲ್ಲದಿರುವುದು ಸ್ಪಷ್ಟವಾಗುತ್ತಿದೆ" ಎಂದು ವಿವಿಯೆನ್ ಜೆನ್ನಾ ವಿಲ್ಸನ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು.
ಟ್ರಾನ್ಸ್-ವಿರೋಧಿ ನಿಯಮಗಳು ಮತ್ತು ಮತದಾರರಲ್ಲಿ ಟ್ರಂಪ್‌ಗೆ ಅಚಲವಾದ ಬೆಂಬಲದ ಕುರಿತ ಕಳವಳಗಳನ್ನು ಜೆನ್ನಾ ವಿಲ್ಸನ್ ಉಲ್ಲೇಖಿಸಿದ್ದಾರೆ.
ಲಿಂಗಪರಿವರ್ತಿತ ತಮ್ಮ ಮಗನ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಎಲಾನ್ ಮಸ್ಕ್, ವೋಕ್ ಮನಸ್ಥಿತಿ ನನ್ನ ಮಗನನ್ನು ಕೊಂದಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವಿಲ್ಸನ್ ತನ್ನ ತಂದೆಯ ಹೇಳಿಕೆಗೆ ತೀಕ್ಷ್ಣವಾದ ಟೀಕೆಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಅವಳು ಕಟುವಾದ ಸಂದೇಶದೊಂದಿಗೆ ಬರೆದಿರುವ ವಿಲನ್ಸ್, "ನೀವು ಇನ್ನೂ ಹೇಗೆ ದುಃಖದ ಕಥೆಯೊಂದಿಗೆ ಹೋಗುತ್ತಿದ್ದೀರಿ, “ಯಾವುದೋ ಒಂದರಿಂದ ಪ್ರಭಾವಿತಳಾಗಿದ್ದೇನೆ ಎಂಬುದು ಅವರು ನನ್ನನ್ನು ದ್ವೇಷಿಸಲು ಏಕೈಕ ಕಾರಣವಾಗಿದೆ ಎಂದು ಹೇಳಿದ್ದಾರೆ.
ವಿಲ್ಸನ್ ತನ್ನನ್ನು ತಾನು ಟ್ರಾನ್ಸ್‌ಜೆಂಡರ್ ಎಂದು ಗುರುತಿಸಿಕೊಂಡಿದ್ದಾಳೆ ಮತ್ತು ಮಸ್ಕ್‌ನಿಂದ ದೂರವಿರಲು ತನ್ನ ಹೆಸರು ಮತ್ತು ಲಿಂಗವನ್ನು ಕಾನೂನುಬದ್ಧವಾಗಿ ಬದಲಾಯಿಸಲು ಅರ್ಜಿಯನ್ನು ಸಲ್ಲಿಸಿದ ನಂತರ 2022 ರಿಂದ ತನ್ನ ಬಿಲಿಯನೇರ್ ತಂದೆಯಿಂದ ದೂರವಾಗಿದ್ದಾಳೆ.
ವೋಕ್ ಮನಸ್ಥಿತಿಯಿಂದ ನನ್ನ ಮಗನನ್ನು ಕಳೆದುಕೊಂಡ ಬಳಿಕ ನಾನು ವೋಕ್ ಮನಸ್ಥಿತಿಯನ್ನು ನಾಶ ಮಾಡುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಮಸ್ಕ್ ಹೇಳಿದ್ದಾರೆ.
Advertisement