ಡೊನಾಲ್ಡ್ ಟ್ರಂಪ್-ವ್ಲಾಡಿಮಿರ್ ಪುಟಿನ್ ಮಾತುಕತೆ: ಉಕ್ರೇನ್ ಯುದ್ಧ ಕೊನೆಗಾಣಿಸುವ ಬಗ್ಗೆ ಚರ್ಚೆ

ಇತ್ತೀಚಿನ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ನಂತರ, ಟ್ರಂಪ್ 70 ಕ್ಕೂ ಹೆಚ್ಚು ವಿಶ್ವ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಅವರು ಮಾತನಾಡಿದ ಮೊದಲಿಗರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಳಗೊಂಡಿದ್ದಾರೆ.
U.S. President Donald Trump, left, and Russian President Vladimir Putin shake hands.
ಡೊನಾಲ್ಡ್ ಟ್ರಂಪ್-ವ್ಲಾಡಿಮಿರ್ ಪುಟಿನ್
Updated on

ವಾಷಿಂಗ್ಟನ್: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಈ ವೇಳೆ ಉಕ್ರೇನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವ ಕುರಿತು ಹಲವು ಪ್ರಮುಖ ವಿಷಯಗಳ ನಡುವೆ ಚರ್ಚಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಇತ್ತೀಚಿನ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ನಂತರ, ಟ್ರಂಪ್ 70 ಕ್ಕೂ ಹೆಚ್ಚು ವಿಶ್ವ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಅವರು ಮಾತನಾಡಿದ ಮೊದಲಿಗರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಳಗೊಂಡಿದ್ದಾರೆ.

ವಿಶ್ವದ ಪ್ರಮುಖ ರಾಷ್ಟ್ರಗಳ ಇಬ್ಬರೂ ನಾಯಕರು ಐರೋಪ್ಯ ಖಂಡದಲ್ಲಿ ಶಾಂತಿ ಸ್ಥಾಪನೆ ಗುರಿ ಬಗ್ಗೆ ಚರ್ಚಿಸಿದರು. ಟ್ರಂಪ್ ಉಕ್ರೇನ್ ಯುದ್ಧದ ಪರಿಹಾರ ಬಗ್ಗೆ ಆಸಕ್ತಿಯನ್ನು ವ್ಯಕ್ತಪಡಿಸಿದರು ಎಂದು ವಾಷಿಂಗ್ಟನ್ ಪೋಸ್ಟ್ ವಿಶೇಷ ವರದಿಯಲ್ಲಿ ತಿಳಿಸಿದೆ.

ಪುಟಿನ್ ಕರೆಗೆ ಪರಿಚಿತರಾಗಿದ್ದ ಯುಎಸ್ ಮಾಜಿ ಅಧಿಕಾರಿಯೊಬ್ಬರು, ರಷ್ಯಾ-ಉಕ್ರೇನ್‌ನಲ್ಲಿ ಹೊಸ ಬಿಕ್ಕಟ್ಟನ್ನು ಬಗೆಹರಿಸಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಳ್ಳಲು ಬಯಸುತ್ತಿದ್ದಾರೆ ಎಂದು ಹೇಳುತ್ತಾರೆ. ಟ್ರಂಪ್ ಅವರು ಜನವರಿ 20, 2025 ರಂದು ಯುನೈಟೆಡ್ ಸ್ಟೇಟ್ಸ್ ನ 47 ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

U.S. President Donald Trump, left, and Russian President Vladimir Putin shake hands.
ಕ್ರೆಮ್ಲಿನ್‌ನಿಂದ ಶ್ವೇತ ಭವನ: ಟ್ರಂಪ್ ರಾಜಕೀಯ ಉತ್ಕರ್ಷದಲ್ಲಿ ಪುಟಿನ್ ಲೆಕ್ಕಾಚಾರದ ಪ್ರಭಾವ (ಜಾಗತಿಕ ಜಗಲಿ)

ಟ್ರಂಪ್-ಪುಟಿನ್ ಕರೆ ಕುರಿತು ಉಕ್ರೇನ್‌ಗೆ ಮಾಹಿತಿ

ಟ್ರಂಪ್ ಅವರು ಫ್ಲೋರಿಡಾದ ತಮ್ಮ ರೆಸಾರ್ಟ್‌ನಿಂದ ಕರೆದ ಸಮಯದಲ್ಲಿ, ಅವರು ಉಕ್ರೇನ್‌ನಲ್ಲಿ ಯುದ್ಧವನ್ನು ಉಲ್ಬಣಗೊಳಿಸದಂತೆ ರಷ್ಯಾದ ಅಧ್ಯಕ್ಷರಿಗೆ ಸಲಹೆ ನೀಡಿದರು. ಯುರೋಪ್‌ನಲ್ಲಿ ವಾಷಿಂಗ್ಟನ್‌ನ ಮಿಲಿಟರಿ ಇರುವಿಕೆ ಬಗ್ಗೆ ನೆನಪಿಸಿದರು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಈ ಮಧ್ಯೆ, ಚುನಾಯಿತ ಅಧ್ಯಕ್ಷ ಟ್ರಂಪ್ ಮತ್ತು ಇತರ ವಿಶ್ವ ನಾಯಕರ ನಡುವಿನ ಖಾಸಗಿ ಕರೆಗಳ ಬಗ್ಗೆ ಅವರು ಪ್ರತಿಕ್ರಿಯಿಸುವುದಿಲ್ಲ ಎಂದು ಟ್ರಂಪ್ ಸಂವಹನ ನಿರ್ದೇಶಕ ಸ್ಟೀವನ್ ಚೆಯುಂಗ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಅಧ್ಯಕ್ಷ ಟ್ರಂಪ್ ಐತಿಹಾಸಿಕ ಚುನಾವಣೆಯನ್ನು ನಿರ್ಣಾಯಕವಾಗಿ ಗೆದ್ದಿದ್ದಾರೆ ಮತ್ತು ಪ್ರಪಂಚದಾದ್ಯಂತದ ನಾಯಕರಿಗೆ ಅಮೆರಿಕವು ವಿಶ್ವ ವೇದಿಕೆಯಲ್ಲಿ ಪ್ರಾಮುಖ್ಯತೆ ನೀಡುತ್ತದೆ. ನಾಯಕರು 45 ನೇ ಮತ್ತು 47 ನೇ ಅಧ್ಯಕ್ಷರೊಂದಿಗೆ ಬಲವಾದ ಸಂಬಂಧಗಳನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ. ಅವರು ಜಾಗತಿಕ ಶಾಂತಿ ಮತ್ತು ಸ್ಥಿರತೆಯನ್ನು ಪ್ರತಿನಿಧಿಸುತ್ತಾರೆ ಎಂದು ಚೆಯುಂಗ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com