ಪೇಶಾವರ: ಪಾಕಿಸ್ತಾನದ ಗಿಲ್ಗಿಟ್-ಬಾಲ್ಟಿಸ್ತಾನ್ ಪರ್ವತ ಪ್ರದೇಶದಲ್ಲಿ ಮದುವೆಗೆ ಅತಿಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಸಿಂಧೂ ನದಿಗೆ ಬಿದ್ದ ಪರಿಣಾಮ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದು, ಓರ್ವ ಮಹಿಳೆ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಡೈಮರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬಸ್ ಅಸ್ಟೋರ್‌ನಿಂದ ಪಂಜಾಬ್‌ನ ಚಕ್ವಾಲ್ ಜಿಲ್ಲೆಗೆ ತೆರಳುತ್ತಿದ್ದಾಗ ಟೆಲ್ಚಿ ಸೇತುವೆಯಿಂದ ನದಿಗೆ ಬಿದ್ದಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
16 ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಡೈಮರ್ ಹಿರಿಯ ಪೊಲೀಸ್ ಅಧೀಕ್ಷಕ ಶೇರ್ ಖಾನ್ ಖಚಿತಪಡಿಸಿದ್ದಾರೆ. ಉಳಿದ ವ್ಯಕ್ತಿಗಳಿಗಾಗಿ ಹುಡುಕಾಟ ಮುಂದುವರೆದಿದೆ" ಎಂದು ಖಾನ್ ಹೇಳಿರುವುದಾಗಿ ಪತ್ರಿಕೆ ವರದಿ ಮಾಡಿದೆ. ವಧುವಿನ ಕಡೆಯ ಮಹಿಳೆಯೊಬ್ಬರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, 22 ಮಂದಿ ನೀರಿನಲ್ಲಿ ಮುಳುಗಿದ್ದು, ಒಬ್ಬರನ್ನು ರಕ್ಷಿಸಲಾಗಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಪಂಜಾಬ್ ನ ಚಕ್ವಾಲ್ ಜಿಲ್ಲೆಯಿಂದ ಆಸ್ಟೋರ್ ಗೆ ಮದುವೆಗೆ ಅತಿಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಡೈಮರ್ ಜಿಲ್ಲೆಯ ಮಿತಿಯಲ್ಲಿರುವ ಟೆಲ್ಚಿ ಸೇತುವೆಯಿಂದ ಸಿಂಧೂ ನದಿಗೆ ಬಿದ್ದಿದೆ ಎಂದು 1122 ರಕ್ಷಣಾ ತಂಡದ ವಕ್ತಾರ ಶೌಕತ್ ರಿಯಾಜ್ ತಿಳಿಸಿದ್ದಾರೆ. ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಘಟನೆಗೆ ದು;ಖ ವ್ಯಕ್ತಪಡಿಸಿದ್ದು, ಮೃತರ ಕುಟುಂಬಸ್ಥರು ಹಾಗೂ ಸಂಬಂಧಿಕರಿಗೆ ಸಂತಾಪ ಸೂಚಿಸಿದ್ದಾರೆ.
Advertisement