ಲೆಬನಾನ್ ನಲ್ಲಿ ಇಸ್ರೇಲ್ ವಾಯುದಾಳಿ; ಮೂವರು ಹೆಜ್ಬುಲ್ಲಾ ಕಮಾಂಡರ್ ಗಳ ಹತ್ಯೆ

ದಕ್ಷಿಣ ಲೆಬನಾನ್ ನ ಹಾಜಿರ್ ಪ್ರದೇಶದಲ್ಲಿ ಹೆಜ್ಬೊಲ್ಲಾದ ಕ್ಷಿಪಣಿ ವಿರೋಧಿ ಘಟಕ 'ನಾಸರ್' ಕಮಾಂಡರ್ ಅಯ್ಮನ್ ಮುಹಮ್ಮದ್ ನಬುಲ್ಸಿಯನ್ನು ಭಾನುವಾರ ಹತ್ಯೆ ಮಾಡಲಾಗಿದೆ.
Lebanon Casual Images
ಲೆಬನಾನ್ ಸಾಂದರ್ಭಿಕ ಚಿತ್ರ
Updated on

ಲೆಬನಾನ್: ದಕ್ಷಿಣ ಲೆಬನಾನ್ ನಲ್ಲಿ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಮೂವರು ಹೆಜ್ಬುಲ್ಲಾ ಕಮಾಂಡರ್ ಗಳನ್ನು ಹತ್ಯೆಮಾಡಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ಬುಧವಾರ ಖಚಿತಪಡಿಸಿದೆ. ಬೈರುತ್‌ನ ದಹೀಹ್ ಜಿಲ್ಲೆಯಲ್ಲಿ ಉಗ್ರರ ಗುಂಪಿನ ಬಹುತೇಕ ಶಸ್ತ್ರಾಸ್ತ್ರ ಸಂಗ್ರಹಣೆ ಮತ್ತು ತಯಾರಿಕೆ ಸೌಲಭ್ಯಗಳನ್ನು ನಾಶಪಡಿಸಲಾಗಿದೆ ಎಂದು ಸೇನೆ ಮಂಗಳವಾರ ರಾತ್ರಿ ಬಹಿರಂಗಪಡಿಸಿದ ಬೆನ್ನಲ್ಲೇ ಈ ಸುದ್ದಿ ಹೊರಬಿದ್ದಿದೆ.

ಉದ್ದೇಶಿತ ದಾಳಿ ಉತ್ತರ ಗಡಿಯಲ್ಲಿ ಇಸ್ರೇಲಿ ನಾಗರಿಕರ ವಿರುದ್ಧ ದಕ್ಷಿಣ ಲೆಬನಾನ್‌ನಿಂದ ದಾಳಿ ನಡೆಸುವ ಹೆಜ್ಬುಲ್ಲಾದ ಸಾಮರ್ಥ್ಯವನ್ನು ಮತ್ತಷ್ಟು ಕುಗ್ಗಿಸುತ್ತದೆ ಎಂದು ಸೇನೆ ಹೇಳಿದೆ.

ದಕ್ಷಿಣ ಲೆಬನಾನ್ ನ ಹಾಜಿರ್ ಪ್ರದೇಶದಲ್ಲಿ ಹೆಜ್ಬೊಲ್ಲಾದ ಕ್ಷಿಪಣಿ ವಿರೋಧಿ ಘಟಕ 'ನಾಸರ್' ಕಮಾಂಡರ್ ಅಯ್ಮನ್ ಮುಹಮ್ಮದ್ ನಬುಲ್ಸಿಯನ್ನು ಭಾನುವಾರ ಹತ್ಯೆ ಮಾಡಲಾಗಿದೆ. ಘಜರ್ ಪ್ರದೇಶದ ಮತ್ತೊಬ್ಬ ಕಮಾಂಡರ್ ಜೊತೆಗೆ ಟೆಬ್ನಿಟ್ ಪ್ರದೇಶದ ಹೆಜ್ಬೂಲ್ಲಾದ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದ ಹಜ್ ಅಲಿ ಯುಸೆಫ್ ಸಲಾಹ್ ಅವರನ್ನು ಇತ್ತೀಚಿನ ವಾಯುದಾಳಿಯಲ್ಲಿ ಕೊಲ್ಲಲಾಗಿದೆ ಎಂದು IDF ಹೇಳಿದೆ.

Lebanon Casual Images
ಲೆಬನಾನ್ ಮೇಲೆ ಪೇಜರ್ ದಾಳಿಗೆ ಆದೇಶ ನೀಡಿದ್ದೆ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು

ಅಕ್ಟೋಬರ್‌ನಲ್ಲಿ ಖಿಯಾಮ್ ಪ್ರದೇಶದ ಹೆಜ್ಬೂಲ್ಲಾದ ಕಮಾಂಡರ್ ಮುಹಮ್ಮದ್ ಮೂಸಾ ಸಲಾಹ್ ಹತ್ಯೆಯಾಗಿರುವುದಾಗಿ ಸೇನೆ ದೃಢಪಡಿಸಿದೆ. ಉತ್ತರ ಇಸ್ರೇಲ್ ಮತ್ತು ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲಿ ಪಡೆಗಳ ಮೇಲೆ 2,500 ಕ್ಕೂ ಹೆಚ್ಚು ರಾಕೆಟ್‌ಗಳ ಉಡಾವಣೆಗಳಿಗೆ ಸಲಾಹ್ ಕಾರಣರಾಗಿದ್ದರು. ಈ ಮಧ್ಯೆ ಬೈರುತ್‌ನ ದಹೀಹ್ ಜಿಲ್ಲೆಯಲ್ಲಿ ಉಗ್ರರ ಗುಂಪಿನ ಬಹುತೇಕ ಶಸ್ತ್ರಾಸ್ತ್ರ ಸಂಗ್ರಹಣೆ ಮತ್ತು ತಯಾರಿಕೆ ಸೌಲಭ್ಯಗಳನ್ನು ನಾಶಪಡಿಸಲಾಗಿದೆ ಎಂದು ಸೇನೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com