ಲೆಬನಾನ್ ಮೇಲೆ ಪೇಜರ್ ದಾಳಿಗೆ ಆದೇಶ ನೀಡಿದ್ದೆ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು

ನೆತನ್ಯಾಹು ಅವರು ಲೆಬನಾನ್‌ನಲ್ಲಿ ಪೇಜರ್ ಕಾರ್ಯಾಚರಣೆಗೆ ಸೂಚನೆ ನೀಡಿದರು ಎಂದು ದೃಢಪಡಿಸಿದ್ದಾರೆ ಎಂದು ಅವರ ವಕ್ತಾರ ಒಮರ್ ದೋಸ್ತ್ರಿ ಅವರು ದಾಳಿಯ ಬಗ್ಗೆ ಪತ್ರಕರ್ತರಿಗೆ ತಿಳಿಸಿದರು.
Israeli Prime Minister Benjamin Netanyahu
ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು
Updated on

ಲೆಬನಾನ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಿನ್ನೆ ಭಾನುವಾರ ಮಹತ್ವದ ವಿಚಾರವನ್ನು ಬಹಿರಂಗಪಡಿಸಿದ್ದು, ಲೆಬನಾನ್‌ನಾದ್ಯಂತ ನೂರಾರು ಸಂವಹನ ಸಾಧನಗಳು ಸ್ಫೋಟಗೊಂಡ ಹಿಜ್ಬೊಲ್ಲಾಹ್ ಮೇಲೆ ಸೆಪ್ಟೆಂಬರ್ ತಿಂಗಳು ನಡೆದ ದಾಳಿಗೆ ತಾನು ಒಪ್ಪಿಗೆ ನೀಡಿದ್ದೆ ಎಂಬ ವಿಚಾರ ಹೇಳಿದ್ದಾರೆ.

ನೆತನ್ಯಾಹು ಅವರು ಲೆಬನಾನ್‌ನಲ್ಲಿ ಪೇಜರ್ ಕಾರ್ಯಾಚರಣೆಗೆ ಸೂಚನೆ ನೀಡಿದರು ಎಂದು ದೃಢಪಡಿಸಿದ್ದಾರೆ ಎಂದು ಅವರ ವಕ್ತಾರ ಒಮರ್ ದೋಸ್ತ್ರಿ ಅವರು ದಾಳಿಯ ಬಗ್ಗೆ ಪತ್ರಕರ್ತರಿಗೆ ತಿಳಿಸಿದರು.

ಇರಾನ್ ಬೆಂಬಲಿತ ಉಗ್ರಗಾಮಿ ಗುಂಪಿಗೆ ದೊಡ್ಡ ಹೊಡೆತವನ್ನು ನೀಡಿದ ಮತ್ತು ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡಿದ ಸ್ಫೋಟಗಳಿಗೆ ಲೆಬನಾನಿನ ಸರ್ಕಾರಿ ಅಧಿಕಾರಿಗಳು ಮತ್ತು ಹೆಜ್ಬೊಲ್ಲಾ ಈ ಹಿಂದೆ ಇಸ್ರೇಲ್ ನ್ನು ದೂಷಿಸಿತ್ತು. ಸೆಪ್ಟಂಬರ್ ಮಧ್ಯ ಭಾಗದಲ್ಲಿ ಸೂಪರ್ ಮಾರ್ಕೆಟ್ ಗಳಲ್ಲಿ, ಬೀದಿಗಳಲ್ಲಿ ಮತ್ತು ಅಂತ್ಯಕ್ರಿಯೆಗಳಲ್ಲಿ ಹೆಜ್ಬೊಲ್ಲಾ ಕಾರ್ಯಕರ್ತರು ಬಳಸಿದ ಕೈಯಲ್ಲಿ ಹಿಡಿದ ಸಾಧನಗಳು ಸತತವಾಗಿ ಎರಡು ದಿನ ಸ್ಫೋಟಗೊಂಡವು.

ಘಟನೆಯಲ್ಲಿ ಸುಮಾರು 40 ಜನರು ಮೃತಪಟ್ಟಿದ್ದರು. ಸುಮಾರು 3,000 ಜನರನ್ನು ಗಾಯಗೊಳಿಸಿತ್ತು, ಕಳೆದ ವರ್ಷ ಅಕ್ಟೋಬರ್ ನಲ್ಲಿ ಹೆಜ್ಬೊಲ್ಲಾ ಮತ್ತು ಇಸ್ರೇಲ್ ನಡುವಿನ ಘರ್ಷಣೆಗಳು ಪ್ರಾರಂಭವಾದಾಗಿನಿಂದ ಲೆಬನಾನ್‌ನಲ್ಲಿ 3,000 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ, ಆರೋಗ್ಯ ಸಚಿವಾಲಯದ ಪ್ರಕಾರ, ಸೆಪ್ಟೆಂಬರ್ 23 ರಿಂದ ಕನಿಷ್ಠ 1,964 ಜನರು ಸೇರಿದಂತೆ, ಅಧಿಕೃತ ಅಂಕಿಅಂಶಗಳ ಎಎಫ್‌ಪಿ ಲೆಕ್ಕಾಚಾರದ ಪ್ರಕಾರ ಮೃತಪಟ್ಟಿದ್ದಾರೆ.

Israeli Prime Minister Benjamin Netanyahu
ಪೇಜರ್, ವಾಕಿಟಾಕಿಗಳ ಸ್ಫೋಟದ ಬೆನ್ನಲ್ಲೇ ಲೆಬನಾನ್‌ ಮೇಲೆ ಇಸ್ರೇಲ್ ದಾಳಿ: ಹೆಜ್ಬುಲ್ಲಾ ಭದ್ರಕೋಟೆಗಳ ಮೇಲೆ ಬಾಂಬ್‌ಗಳ ಸುರಿಮಳೆ!

ಮಾನವೀಯತೆಯ ವಿರುದ್ಧ ಭೀಕರ ಯುದ್ಧ

ಲೆಬನಾನ್ ಈ ವಾರದ ಆರಂಭದಲ್ಲಿ ಇಸ್ರೇಲ್ ನ್ನು ದೂಷಿಸಿ ಮಾರಣಾಂತಿಕ ದಾಳಿಗಳ ಬಗ್ಗೆ ವಿಶ್ವಸಂಸ್ಥೆಯ ಕಾರ್ಮಿಕ ಸಂಸ್ಥೆಗೆ ದೂರು ಸಲ್ಲಿಸಿದೆ ಎಂದು ಹೇಳಿದೆ. ಲೆಬನಾನಿನ ಕಾರ್ಮಿಕ ಸಚಿವ ಮುಸ್ತಫಾ ಬಯ್ರಾಮ್ ಅವರು ಈ ದಾಳಿಯನ್ನು "ಮಾನವೀಯತೆಯ ವಿರುದ್ಧ, ತಂತ್ರಜ್ಞಾನದ ವಿರುದ್ಧ, ಕೆಲಸದ ವಿರುದ್ಧದ ಭೀಕರ ಯುದ್ಧ" ಎಂದು ಕರೆದರು, ಜಿನೀವಾದಲ್ಲಿನ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಗೆ ತಮ್ಮ ದೇಶವು ದೂರು ಸಲ್ಲಿಸಿದೆ ಎಂದು ದೃಢಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com