G20 ಮುಕ್ತಾಯ: ಸುಸ್ಥಿರ ಅಭಿವೃದ್ಧಿ, ಹವಾಮಾನ ಹಣಕಾಸು ಸುಧಾರಣೆ ಘೋಷವಾಕ್ಯ; ಪಳೆಯುಳಿಕೆ ಇಂಧನದ ಬಗ್ಗೆ ಪ್ರಸ್ತಾಪವಿಲ್ಲ!

ಪಳೆಯುಳಿಕೆ ಇಂಧನಗಳಿಂದ ದೂರ ಸಾಗಲು ಸ್ಪಷ್ಟವಾದ ಮಾರ್ಗವಿಲ್ಲದೆ, ಜಗತ್ತು ಅಪಾಯಕಾರಿ ಹಾದಿಯಲ್ಲಿದೆ ಎಂದು ಇಟಾಲಿಯನ್ ಥಿಂಕ್ ಟ್ಯಾಂಕ್ ECCO ಯ ನಿರ್ದೇಶಕ ಲುಕಾ ಬರ್ಗಮಾಸ್ಚಿ ಎಚ್ಚರಿಸಿದ್ದಾರೆ.
G-20 rio summit
ಜಿ-20 ರಿಯೋ ಶೃಂಗಸಭೆ (ಸಂಗ್ರಹ ಚಿತ್ರ)online desk
Updated on

ರಿಯೋ: ರಿಯೊ ಡಿ ಜನೈರೊದಲ್ಲಿ ನಡೆದ G20 ನಾಯಕರ ಶೃಂಗಸಭೆಯು ಬಹುಪಕ್ಷೀಯತೆ, ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಹಣಕಾಸು ಸುಧಾರಣೆಗೆ ಬದ್ಧತೆಯನ್ನು ಪುನರುಚ್ಚರಿಸುವ ಘೋಷಣೆಯೊಂದಿಗೆ ಮುಕ್ತಾಯವಾಯಿತು.

ಆದರೆ, ಹಂತ ಹಂತವಾಗಿ ಪಳೆಯುಳಿಕೆ ಇಂಧನಗಳ ಬಳಕೆ ಮತ್ತು ಉತ್ಪಾದನೆಯನ್ನು ಕಡಿಮೆ ಮಾಡುವ UAE COP28 ಜಾಗತಿಕ ಸ್ಟಾಕ್‌ಟೇಕ್ (GST) ಫಲಿತಾಂಶದ ದಾಖಲೆ ಹಾಗೂ ಕಳೆದ ವರ್ಷದ ಜಿ-20 ಬದ್ಧತೆಗಳ ವಿಚಾರವಾಗಿ ಯಾವುದೇ ಉಲ್ಲೇಖಗಳನ್ನೂ ನೀಡಲಾಗಿಲ್ಲ.

ಜಿ-20ಯಲ್ಲಿ ಭಾಗಿಯಾಗಿದ್ದ ನಾಯಕರು ಮಹತ್ವಾಕಾಂಕ್ಷೆಯ ಹವಾಮಾನ ಹಣಕಾಸು ಉಪಕ್ರಮಗಳನ್ನು ಅನುಮೋದಿಸಿದರು, ಈ ಪೈಕಿ ಹಣಕಾಸಿನ ವ್ಯವಸ್ಥೆಯನ್ನು 'ಬಿಲಿಯನ್‌ಗಳಿಂದ ಟ್ರಿಲಿಯನ್‌ಗಳಿಗೆ' ಹೆಚ್ಚಿಸುವುದು ಮತ್ತು ಶುದ್ಧ ಇಂಧನ ಪರಿವರ್ತನೆಗಳಲ್ಲಿ ಹೂಡಿಕೆಗಳು ಸೇರಿದೆ. ಆದರೆ ಪಳೆಯುಳಿಕೆ ಇಂಧನಗಳನ್ನು ಹಂತಹಂತವಾಗಿ ಕಡಿಮೆ ಮಾಡುವುದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಒದಗಿಸಲು ವಿಫಲರಾಗಿದ್ದು, ಇದರಲ್ಲಿ ಸೌದಿ ಅರೇಬಿಯಾದಂತಹ ಪಳೆಯುಳಿಕೆ ಇಂಧನ ರಫ್ತುದಾರರಿಂದ ವ್ಯಕ್ತವಾದ ವಿರೋಧವು ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಲಾಗುತ್ತಿದೆ.

ಪಳೆಯುಳಿಕೆ ಇಂಧನಗಳಿಂದ ದೂರ ಸಾಗಲು ಸ್ಪಷ್ಟವಾದ ಮಾರ್ಗವಿಲ್ಲದೆ, ಜಗತ್ತು ಅಪಾಯಕಾರಿ ಹಾದಿಯಲ್ಲಿದೆ ಎಂದು ಇಟಾಲಿಯನ್ ಥಿಂಕ್ ಟ್ಯಾಂಕ್ ECCO ಯ ನಿರ್ದೇಶಕ ಲುಕಾ ಬರ್ಗಮಾಸ್ಚಿ ಎಚ್ಚರಿಸಿದ್ದಾರೆ.

ಮುಂದಿನ ವರ್ಷವನ್ನು ನೋಡುವಾಗ, COP30 ಪ್ರಕ್ರಿಯೆಯನ್ನು ದುರ್ಬಲಗೊಳಿಸುವ ಪಟ್ಟಭದ್ರ ಹಿತಾಸಕ್ತಿಗಳನ್ನು ತಡೆಗಟ್ಟಲು ಬ್ರೆಜಿಲ್‌ಗೆ ಇದು ಒಂದು ಎಚ್ಚರಿಕೆ ಮತ್ತು ಪಾಠವಾಗಿದೆ ಎಂದು ಲುಕಾ ಬರ್ಗಮಾಸ್ಚಿ ಹೇಳಿದ್ದಾರೆ.

G-20 rio summit
G20 ಶೃಂಗಸಭೆ: ಗ್ಲೋಬಲ್ ಸೌತ್ ದೇಶಗಳಿಗೆ ಪ್ರಬಲ ಧ್ವನಿಯಾದ ಪ್ರಧಾನಿ ಮೋದಿ

ಬಾಕುನಲ್ಲಿ ಯಶಸ್ವಿ ಹೊಸ ಕಲೆಕ್ಟಿವ್ ಕ್ವಾಂಟಿಫೈಡ್ ಗೋಲ್ (NCQG) ಫಲಿತಾಂಶಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ, ನಾವು COP29 ಅಧ್ಯಕ್ಷ ಸ್ಥಾನಕ್ಕೆ ನಮ್ಮ ಬೆಂಬಲವನ್ನು ಪ್ರತಿಜ್ಞೆ ಮಾಡುತ್ತೇವೆ ಮತ್ತು ಬಾಕುದಲ್ಲಿ ಯಶಸ್ವಿ ಮಾತುಕತೆಗಳಿಗೆ ಬದ್ಧರಾಗಿದ್ದೇವೆ ಎಂದು ಘೋಷಣೆ ಹೇಳಿದೆ.

ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ COP29 ಪ್ರಮುಖ ಸಮಾಲೋಚಕ ಯಾಲ್ಚಿನ್ ರಫಿಯೆವ್, G20 ಘೋಷಣೆಯಲ್ಲಿ ಧನಾತ್ಮಕತೆಯನ್ನು ಕಂಡಿರುವುದಾಗಿ ಹೇಳಿದ್ದು, ಎನ್‌ಸಿಕ್ಯೂಜಿಯ ಸಂಪೂರ್ಣ ಕರಡು ಪಠ್ಯದ ಮೊದಲ ಪುನರಾವರ್ತನೆಯನ್ನು ಬುಧವಾರ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com