Gautam Adani (File photo)
ಗೌತಮ್ ಅದಾನಿ (ಸಂಗ್ರಹ ಚಿತ್ರ)

ಗೌತಮ್ ಅದಾನಿ ವಿರುದ್ಧ US ಕೋರ್ಟ್ ಬಂಧನ ವಾರಂಟ್ ಜಾರಿ?: Reports

ನ್ಯಾಯಾಲಯದ ದಾಖಲೆಗಳನ್ನು ಉಲ್ಲೇಖಿಸಿ, ಬಂಧನ ವಾರಂಟ್ ನ್ನು ವಿದೇಶಿ ಕಾನೂನು ಜಾರಿ ಅಧಿಕಾರಿಗಳಿಗೆ ನೀಡಲಾಗುತ್ತದೆ.
Published on

ನ್ಯೂಯಾರ್ಕ್: ಬಹು ಶತಕೋಟಿ ಡಾಲರ್ ವಂಚನೆಯ ಆರೋಪದ ಮೇಲೆ ಅಮೆರಿಕದಲ್ಲಿ ಪ್ರಮುಖ ಉದ್ಯಮಿ ಗೌತಮ್ ಅದಾನಿ ಅವರ ಮೇಲೆ ದೋಷಾರೋಪ ಹೊರಿಸಿದ್ದ ನ್ಯೂಯಾರ್ಕ್​ನ ಜಿಲ್ಲಾ ನ್ಯಾಯಾಲಯ ನ್ಯೂಯಾರ್ಕ್ ನ್ಯಾಯಾಧೀಶರು ಗೌತಮ್ ಅದಾನಿಯವರ ಬಂಧನಕ್ಕೆ ವಾರಂಟ್ ಹೊರಡಿಸಿದ್ದಾರೆ ಎಂದು ಕೆಲ ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ.

ನ್ಯಾಯಾಲಯದ ದಾಖಲೆಗಳನ್ನು ಉಲ್ಲೇಖಿಸಿ, ಬಂಧನ ವಾರಂಟ್ ನ್ನು ವಿದೇಶಿ ಕಾನೂನು ಜಾರಿ ಅಧಿಕಾರಿಗಳಿಗೆ ನೀಡಲಾಗುತ್ತದೆ. ಈ ಹಿಂದೆ, ಯುಎಸ್ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಕಮಿಷನ್ (SEC) ಅದಾನಿ ಗ್ರೂಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಬಿಲಿಯನೇರ್ ಗೌತಮ್ ಅದಾನಿ ವಿರುದ್ಧ ಅಮೆರಿಕದ ಹೂಡಿಕೆದಾರರಿಗೆ ವಂಚನೆ ಮತ್ತು ಅಧಿಕಾರಿಗಳಿಗೆ ಲಂಚ ನೀಡಿದ ಆರೋಪ ಹೊರಿಸಿತ್ತು.

ಏನಿದು ಆರೋಪ: ಅದಾನಿ ಗ್ರೀನ್ ಎನರ್ಜಿ ಮತ್ತು ಅಜುರೆ ಪವರ್ ಸಂಸ್ಥೆಗಳು ಭಾರತದಲ್ಲಿ ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ದರದಲ್ಲಿ ಸೌರಶಕ್ತಿ ಗುತ್ತಿಗೆಗಳನ್ನು ಪಡೆಯಲು ಭಾರತೀಯ ಅಧಿಕಾರಿಗಳಿಗೆ 250 ಮಿಲಿಯನ್ ಡಾಲರ್​ಗೂ ಅಧಿಕ ಮೊತ್ತದಷ್ಟು ಲಂಚ ನೀಡಲಾಗಿದೆ ಎಂಬುದು ಆರೋಪ. 2020-24ರ ಅವಧಿಯಲ್ಲಿ ಲಂಚಗಳನ್ನು ನೀಡಿದ ಅಥವಾ ನೀಡಲು ಯೋಜಿಸಿದ ಘಟನೆಗಳು ನಡೆದಿವೆ ಎಂದು ಹೇಳಲಾಗಿದೆ.

ನವೀಕರಿಸಬಹುದಾದ ಇಂಧನ ಕಂಪನಿಗಳಾದ ಅದಾನಿ ಗ್ರೀನ್ ಮತ್ತು ಅಜುರೆ ಪವರ್‌ಗೆ ಭಾರತ ಸರ್ಕಾರವು ನೀಡಿದ ಬಹು ಶತಕೋಟಿ ಡಾಲರ್ ಸೌರ ಶಕ್ತಿ ಯೋಜನೆಯನ್ನು ಲಾಭ ಮಾಡಿಕೊಳ್ಳಲು ಲಂಚದ ಯೋಜನೆಯನ್ನು ರೂಪಿಸಲಾಗಿದೆ ಎಂದು ಎಸ್‌ಇಸಿ ಆರೋಪಿಸಿದೆ.

Gautam Adani (File photo)
ಸರ್ಕಾರಿ ಅಧಿಕಾರಿಗಳಿಗೆ 2,100 ಕೋಟಿ ರೂ ಲಂಚ ನೀಡಿದ ಆರೋಪ ಆಧಾರ ರಹಿತ: ಅದಾನಿ ಗ್ರೂಪ್

ಈ ಮೂಲಕ ಅದಾನಿ ಗ್ರೂಪ್​ಗೆ ಹಿಂಡನ್ಬರ್ಗ್ ಬಳಿಕ ಮತ್ತೊಂದು ಗಂಡಂತಾರ ಎದುರಾಗಿದೆ. ಗೌತಮ್ ಅದಾನಿ ಸೇರಿದಂತೆ ಎಂಟು ಮಂದಿ ವಿರುದ್ಧ ಅಮೆರಿಕದಲ್ಲಿ ವಂಚನೆಯ ಆರೋಪಗಳು ದಾಖಲಾಗಿವೆ. ಕೆನಡಾದ ಪೆನ್ಷನ್ ಫಂಡ್ ಆದ ಸಿಡಿಪಿಕ್ಯೂನ ಮಾಜಿ ಎಂಡಿ, ಹಾಗು ಅಜುರೆ ಪವರ್ ಸಂಸ್ಥೆಯ ಮಾಜಿ ಎಕ್ಸಿಕ್ಯೂಟಿವ್ ಆದ ಸೈರಿಲ್ ಕೆಬನೆಸ್ ಅವರೂ ಆರೋಪಿತರಲ್ಲಿ ಸೇರಿದ್ದಾರೆ. ಗೌತಮ್ ಅದಾನಿ, ಸೈರಿಲ್ ಕೆಬನೆಸ್ ಅವರಲ್ಲದೆ, ಸಾಗರ್ ಅದಾನಿ, ವಿನೀತ್ ಜೈನ್, ರಂಜಿತ್ ಗುಪ್ತ, ಸೌರಭ್ ಅಗರ್ವಾಲ್, ದೀಪಕ್ ಮಲ್ಹೋತ್ರಾ, ರೂಪೇಶ್ ಅಗರ್ವಾಲ್ ಅವರು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

ಅಮೆರಿಕದ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಎಸ್​ಇಸಿ ನ್ಯೂಯಾರ್ಕ್​ನ ಡಿಸ್ಟ್ರಿಕ್ಟ್ ಕೋರ್ಟ್​ನಲ್ಲಿ ಗೌತಮ್ ಅದಾನಿ, ಸಾಗರ್ ಅದಾನಿ ಮತ್ತು ಸಿರಿಲ್ ಕೆಬನೆಸ್ ವಿರುದ್ಧ ಸಿವಿಲ್ ಚಾರ್ಜ್ ಹಾಕಿದೆ.

ಬಾಂಡ್ ಯೋಜನೆ ಕೈಬಿಟ್ಟ ಅದಾನಿ

ಅಮೆರಿಕಲ್ಲಿ ಕೋರ್ಟ್​ನಲ್ಲಿ ಗೌತಮ್ ಅದಾನಿ ಮತ್ತಿತರರ ವಿರುದ್ಧ ಆರೋಪಗಳು ದಾಖಲಾದ ಬೆನ್ನಲ್ಲೇ ಅದಾನಿ ಗ್ರೀನ್ ಎನರ್ಜಿ ಸಂಸ್ಥೆ ತನ್ನ 600 ಮಿಲಿಯನ್ ಯುಎಸ್ ಡಾಲರ್ ಬಾಂಡ್​ಗಳ ವಿತರಣೆಯ ಯೋಜನೆಯನ್ನು ಕೈಬಿಟ್ಟಿದೆ. ಈ ಬಾಂಡ್​ಗಳಿಗೆ ಸಾಕಷ್ಟು ಹೂಡಿಕೆದಾರರು ಅರ್ಜಿ ಹಾಕಿದ್ದರು. ಕೋರ್ಟ್​ನಲ್ಲಿ ಪ್ರಕರಣ ಬರುತ್ತಲ್ಲೇ ಸಂಸ್ಥೆ ತನ್ನ ನಡೆಯನ್ನು ಹಿಂಪಡೆದುಕೊಂಡಿದೆ.

ಈ ಬೆಳವಣಿಗೆ ಬೆನ್ನಲ್ಲೇ ಅದಾನಿ ಗ್ರೂಪ್​ನ ಬಹುತೇಕ ಎಲ್ಲಾ ಷೇರುಗಳ ಬೆಲೆ ಕುಸಿದಿವೆ.

X

Advertisement

X
Kannada Prabha
www.kannadaprabha.com