
ಫ್ರಾನ್ಸ್: ಮಾದಕ ವಸ್ತು ಹಿಂಸಾಚಾರ ಪ್ರಕರಣದಲ್ಲಿ 15 ವರ್ಷದ ಬಾಲಕನಿಗೆ 50 ಬಾರಿ ಇರಿಯಲಾಗಿದ್ದು, ಆತನನ್ನು ಜೀವಂತವಾಗಿ ಸುಡಲಾಗಿದೆ.
ಫ್ರಾನ್ಸ್ ನ ದಕ್ಷಿಣ ಪ್ರದೇಶದಲ್ಲಿರುವ ಮಾರ್ಸಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಮಾರ್ಸಿಲ್ಲೆ ಪ್ರಾಸಿಕ್ಯೂಟರ್ ನಿಕೋಲಸ್ ಬೆಸ್ಸೋನ್, 15 ವರ್ಷದ ಬಾಲಕನನ್ನು ಬುಧವಾರ ಹತ್ಯೆ ಮಾಡಲಾಗಿದೆ. ಪ್ರಕರಣವನ್ನು "ಹಿಂದೆಂದೂ ಕಾಣದ ಅನಾಗರಿಕತೆ" ಎಂದು ಹೇಳಿದ್ದಾರೆ.
ಫ್ರಾನ್ಸ್‌ನ ಎರಡನೇ ಅತಿ ದೊಡ್ಡ ನಗರವಾದ ಮಾರ್ಸೆಲ್ಲೆ, ಅದರ ಅತ್ಯಂತ ಬಡ ನಗರಗಳಲ್ಲಿ ಒಂದಾಗಿದೆ, ಇದು ಮಾದಕ ದ್ರವ್ಯ-ಸಂಬಂಧಿತ ಹಿಂಸಾಚಾರದಿಂದ ಪೀಡಿತವಾಗಿದೆ. ಇಂತಹ ಹಿಂಸಾಚಾರದ ಬಲಿಪಶುಗಳು ಮತ್ತು ಅಪರಾಧಿಗಳ ಪೈಕಿ ಹೆಚ್ಚು ಮಂದಿ ಕಿರಿಯ ವಯಸ್ಸಿನವರಾಗಿದ್ದಾರೆ ಎಂದು ಬೆಸ್ಸೋನ್ ಹೇಳಿದ್ದಾರೆ.
ನಗರ ಇತ್ತೀಚಿನ ವರ್ಷಗಳಲ್ಲಿ DZ ಮಾಫಿಯಾ ಸೇರಿದಂತೆ ವಿವಿಧ ಲಾಭದಾಯಕ ಡ್ರಗ್ಸ್ ಮಾರುಕಟ್ಟೆಯ ನಿಯಂತ್ರಣಕ್ಕಾಗಿ ಯುದ್ಧಕ್ಕೆ ಸಾಕ್ಷಿಯಾಗಿದೆ. ಈ ಹದಿಹರೆಯದವರನ್ನು 23 ವರ್ಷದ ಖೈದಿಯೊಬ್ಬ ಸ್ಪರ್ಧಿಯನ್ನು ಬೆದರಿಸಲು ನೇಮಿಸಿಕೊಂಡಿದ್ದರು, ಪ್ರಾಸಿಕ್ಯೂಟರ್ ಪ್ರಕಾರ ಯುವಕನಿಗೆ 2,000 ಯೂರೋಗಳ ಆಮಿಷವೊಡ್ಡಿದ್ದರು ಎಂದು ತಿಳಿದುಬಂದಿದೆ.
ಅದೇ ಖೈದಿ ನಂತರ 14 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕನನ್ನು ಸೇಡು ತೀರಿಸಿಕೊಳ್ಳಲು ಮತ್ತು ಬ್ಲ್ಯಾಕ್ಸ್ ಗ್ಯಾಂಗ್‌ನ ಸದಸ್ಯನನ್ನು ಕೊಲ್ಲಲು ನೇಮಿಸಿಕೊಂಡಿದ್ದ. ಆತನಿಗೆ 50,000 ಯುರೋಗಳನ್ನು ಪಾವತಿಸುವ ಭರವಸೆ ನೀಡಿದ್ದ ಎಂದು ತಿಳಿದುಬಂದಿದೆ.
ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ವರ್ಷದ ಆರಂಭದಿಂದ ಮಾರ್ಸೆಲ್ಲೆಯಲ್ಲಿ ಮಾದಕವಸ್ತು ಸಂಬಂಧಿತ ಹತ್ಯೆಗಳ ಸಂಖ್ಯೆ 17ಕ್ಕೆ ಏರಿದೆ.
Advertisement