ಇಸ್ರೇಲ್ ದಾಳಿಗೆ ಬೆಚ್ಚಿಬಿದ್ದ ಉಗ್ರ ನಾಯಕ: 'ಯಾವ ಸ್ಥಾನವೂ ಬೇಕಿಲ್ಲ... Hezbollah ಸಹವಾಸವೇ ಬೇಡ.. ನನ್ನ ಬಿಟ್ಬಿಡಿ'- Naim Qassem ಅಳಲು!

ಒಂದೆಡೆ ಲೆಬೆನಾನ್ ನಲ್ಲಿ ಇಸ್ರೇಲ್ ವಾಯುಸೇನೆ ಹೆಜ್ಬೊಲ್ಲಾ ಬಂಡುಕೋರರ ಘಟಕಗಳನ್ನು ಮತ್ತು ಅಡಗುದಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದರೆ, ಇತ್ತ ಹೆಜ್ಬೊಲ್ಲಾ ಉಗ್ರ ಸಂಘಟನೆಯ ಒಬ್ಬೊಬ್ಬರೇ ನಾಯಕರು ಕಣ್ಮರೆಯಾಗುತ್ತಿದ್ದಾರೆ.
Naim Qassem-Israel
ಇಸ್ರೇಲ್ ವಾಯುದಾಳಿ ಮತ್ತು ನೆಮ್ ಖಾಸಿಮ್
Updated on

ಟೆಲ್ ಅವೀವ್: ಲೆಬೆನಾನ್ ನಲ್ಲಿ Hezbollah ಉಗ್ರ ಸಂಘಟನೆಯ ಮೇಲಿನ ಇಸ್ರೇಲ್ ದಾಳಿಗೆ ಬೆಚ್ಚಿಬಿದ್ದಿರುವ ಹೆಜ್ಬೊಲ್ಲಾ ನಾಯಕ ನೆಮ್ ಖಾಸಿಮ್ (Naim Qassem) ತನಗೆ ಒಲಿದು ಬಂದ ಸಂಘಟನೆಯ ಸರ್ವೋಚ್ಛ ನಾಯಕನ ಸ್ಥಾನ ತೊರೆದಿದ್ದು ಮಾತ್ರವಲ್ಲದೇ ತನಗೆ ಹೆಜ್ಬೊಲ್ಲಾ ಸಂಘಟನೆಯ ಸಹವಾಸವೇ ಬೇಡ ಎಂದು ಹೇಳಿದ್ದಾರೆ.

ಒಂದೆಡೆ ಲೆಬೆನಾನ್ ನಲ್ಲಿ ಇಸ್ರೇಲ್ ವಾಯುಸೇನೆ ಹೆಜ್ಬೊಲ್ಲಾ ಬಂಡುಕೋರರ ಘಟಕಗಳನ್ನು ಮತ್ತು ಅಡಗುದಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದರೆ, ಇತ್ತ ಹೆಜ್ಬೊಲ್ಲಾ ಉಗ್ರ ಸಂಘಟನೆಯ ಒಬ್ಬೊಬ್ಬರೇ ನಾಯಕರು ಕಣ್ಮರೆಯಾಗುತ್ತಿದ್ದಾರೆ.

ಹೆಜ್ಬೊಲ್ಲಾ ನಾಯಕ ಸಯ್ಯದ್ ಹಸನ್ ನಸ್ರಲ್ಲಾಹ್ ಇಸ್ರೇಲ್ ವಾಯುದಾಳಿಯಲ್ಲಿ ಸಾವನ್ನಪ್ಪಿದ ಬೆನ್ನಲ್ಲೇ ಆತನ ಉತ್ತರಾಧಿಕಾರಿಗಳೂ ಕೂಡ ಒಬ್ಬರ ನಂತರ ಒಬ್ಬರು ನಾಪತ್ತೆಯಾಗುತ್ತಿದ್ದಾರೆ.

ಈ ಹಿಂದೆ ಹೆಜ್ಬೊಲ್ಲಾ ಕಮಾಂಡರ್ ನಬಿಲ್ ಕೌಕ್, ಹೆಜ್ಬೊಲ್ಲಾ ಸಂಘಟನೆಯ ಸಂವಹನ ಘಟಕದ ಕಮಾಂಡರ್ ಮೊಹಮ್ಮದ್ ರಶೀದ್ ಸಕಾಫಿ, ನಸ್ರಲ್ಲಾಹ್ ಉತ್ತರಾಧಿಕಾರಿ ಎಂದೇ ಹೇಳಲಾಗುತ್ತಿದ್ದ ಹಶೆಮ್ ಸಫೀದ್ದೀನ್ ಇಸ್ರೇಲ್ ವಾಯುದಾಳಿಯಲ್ಲಿ ಹತರಾಗಿದ್ದರು.

ಇದೀಗ ಹೆಜ್ಬೊಲ್ಲಾದ ಮತ್ತೋರ್ವ ಕಮಾಂಡರ್ ಹಾಗೂ ನಸ್ರಲ್ಲಾಹ್ ನ ಸಂಭಾವ್ಯ ಉತ್ತರಾಧಿಕಾರಿ ಕೂಡ ಕಣ್ಮರೆಯಾಗಿದ್ದು, ಆತ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ವರದಿಯಾಗಿದೆ. ಶುಕ್ರವಾರದಿಂದಲೇ ಅಂದರೆ ಇಸ್ರೇಲಿ ವೈಮಾನಿಕ ದಾಳಿಯ ಆತನ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಲೆಬನಾನಿನ ಭದ್ರತಾ ಮೂಲಗಳು ರಾಯಿಟರ್ಸ್ ಸುದ್ದಿಸಂಸ್ಥೆಗೆ ತಿಳಿಸಿವೆ.

Naim Qassem-Israel
ಇಸ್ರೇಲ್ ವಾಯುದಾಳಿ ಬಳಿಕ Hezbollah ಮುಖ್ಯಸ್ಥ 'ನಸ್ರಲ್ಲಾಹ್ ಉತ್ತರಾಧಿಕಾರಿ' ಕೂಡ ನಾಪತ್ತೆ; ವರದಿ

Hezbollah ಸಹವಾಸವೇ ಬೇಡ.. ನನ್ನ ಬಿಟ್ಬಿಡಿ'; Naim Qassem

ಅತ್ತ ಹೆಜ್ಬೊಲ್ಲಾ ನಾಯಕರ ನಾಪತ್ತೆ ಬೆನ್ನಲ್ಲೇ ಘಟನೆಯಿಂದ ಪ್ರಾಣಭೀತಿಯಲ್ಲಿ ಸಮಯ ಕಳೆಯುತ್ತಿರುವ ಹೆಜ್ಬೊಲ್ಲಾದ ಮತ್ತೋರ್ವ ಹಿರಿಯ ನಾಯಕ ನೆಮ್ ಖಾಸಿಮ್ (Naim Qassem) ತಾನು ಸಂಘಟನೆಯ ಸರ್ವೋಚ್ಛ ನಾಯಕ ಸ್ಥಾನ ವಹಿಸಿಕೊಳ್ಳುವುದಿಲ್ಲ.. ಅಲ್ಲದೆ ತಾನು ಸಂಘಟನೆಯಲ್ಲೇ ಇರುವುದಿಲ್ಲ ಎಂದು ಹೇಳಿ ತನ್ನ ಹಾಲಿ ಸ್ಥಾನಕ್ಕೂ ರಾಜಿನಾಮೆ ನೀಡಿದ್ದಾನೆ ಎನ್ನಲಾಗಿದೆ.

ಈ ನೆಮ್ ಖಾಸಿಮ್ (Naim Qassem) 1991ರಿಂದಲೂ ಹೆಜ್ಬೊಲ್ಲಾ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು, ಸಂಘಟನೆಯ ಉಪ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ. ಇತ್ತೀಚೆಗೆ ಸಂಘಟನೆಯ ಸರ್ವೋಚ್ಛ ನಾಯಕರು ಹತರಾಗಿ ಕೆಲ ನಾಯಕರು ನಾಪತ್ತೆಯಾಗುತ್ತಿದ್ದಂತೆಯೇ ಈತನ ಹೆಸರು ಸಂಘಟನೆಯ ಸರ್ವೋಚ್ಛ ನಾಯಕ ಸ್ಥಾನಕ್ಕೆ ಕೇಳಿಬಂದಿತ್ತು. ಆದರೆ ತನಗೆ ಯಾವ ಸ್ಥಾನವೂ ಬೇಡ ಎಂದು ಹೇಳಿರುವ ಖಾಸಿಮ್ ತಾನು ಸಂಘಟನೆಯನ್ನೇ ತೊರೆಯುತ್ತಿರುವುದಾಗಿ ವಿಡಿಯೋ ಹೇಳಿಕೆ ನೀಡಿದ್ದಾನೆ.

ವಿಡಿಯೋ ಮಾಡುತ್ತಲೇ ಭಯದಿಂದ ಬೆವರೊರಿಸಿಕೊಳ್ಳುತ್ತಿರುವ ನಾಯಕ

ಇನ್ನು ಇಸ್ರೇಲ್ ವಾಯುದಾಳಿಗೆ ಹೆಜ್ಬೊಲ್ಲಾ ನಾಯಕರು ಯಾವ ಮಟ್ಟಿಗೆ ಬೆಚ್ಚಿ ಬಿದ್ದಿದ್ದಾರೆ ಎಂದರೆ, ಇಂದು ವಿಡಿಯೋ ಬಿಡುಗಡೆ ಮಾಡಿರುವ ನೇಮ್ ಖಾಸಿಮ್ ವಿಡಿಯೋ ಮಾಡುತ್ತಲೇ ಭಯದಿಂದ ಬೆವರೊರೆಸಿಕೊಳ್ಳುತ್ತಿರುವುದು ದಾಖಲಾಗಿದೆ. ಯಾವಕ್ಷಣದಲ್ಲಿ ಎಲ್ಲಿ ಬಾಂಬ್ ಸ್ಫೋಟವಾಗುತ್ತದೋ ಎಂದು ಖಾಸಿಮ್ ಪ್ರಾಣಭೀತಿಯಿಂದಲೇ ವಿಡಿಯೋದಲ್ಲಿ ಮಾತನಾಡುತ್ತಿರುವು ಕಂಡುಬಂದಿದೆ.

ಇಸ್ರೇಲ್ ಗೂಢಚಾರಿ ಎಂದ ಹೆಜ್ಬೊಲ್ಲಾ

ಇನ್ನು ಒಂದೆಡೆ ನೇಮ್ ಖಾಸಿಮ್ ಸಂಘಟನೆ ತೊರೆಯುತ್ತಲೇ ಆತನ ವಿರುದ್ಧ ಕೆಂಡಕಾರಿರುವ ಹೆಜ್ಬೊಲ್ಲಾ ಸಂಘಟನೆ ಆತನನ್ನು ಇಸ್ರೇಲಿ ಸ್ಪೈ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಸಂಘಟನೆಯಲ್ಲಿದ್ದುಕೊಂಡೇ ಇಸ್ರೇಲಿ ಸೇನೆಪರ ಕೆಲಸ ಮಾಡಿದ್ದಾರೆ.. ಸಂಘಟನೆ ತೊರೆಯುವ ಮೂಲಕ ತಾವೊಬ್ಬ ಇಸ್ರೇಲಿ ಗೂಢಚಾರಿ ಎಂದು ಸಾಬೀತು ಪಡಿಸಿದ್ದಾರೆ ಹೆಜ್ಬೊಲ್ಲಾ ಆರೋಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com