Justin Trudeau
ಜಸ್ಟಿನ್ ಟ್ರುಡೊ

ಕೆನಡಿಯನ್ನರ ಮೇಲೆ ದಾಳಿ ಮಾಡಲು ರಾಜತಾಂತ್ರಿಕರು, ಸಂಘಟಿತ ಅಪರಾಧಗಳನ್ನು ಭಾರತ ಬಳಸುತ್ತಿದೆ: ಜಸ್ಟಿನ್ ಟ್ರುಡೊ ಆರೋಪ

ಕಳೆದ ವರ್ಷ ಸಿಖ್ ತೀವ್ರಗಾಮಿ ಹರ್ದೀಪ್ ಸಿಂಗ್ ನಿಜ್ಜರ ಹತ್ಯೆಯಲ್ಲಿ ಭಾರತೀಯ ಏಜೆಂಟ್‌ಗಳ ಕೈವಾಡವಿದೆ ಎಂಬ ಕೆನಡಾದ ಆರೋಪವನ್ನು ಭಾರತ ಬಲವಾಗಿ ತಿರಸ್ಕರಿಸುತ್ತಿದೆ.
Published on

ಒಟ್ಟಾವೊ: ಭಾರತವು ತನ್ನ ರಾಜತಾಂತ್ರಿಕರನ್ನು ಬಳಸಿಕೊಂಡು ಸಂಘಟಿತ ಅಪರಾಧವನ್ನು ತನ್ನ ನಾಗರಿಕರ ಮೇಲೆ ದಾಳಿ ಮಾಡಲು ಮತ್ತು ಕೆನಡಾದಲ್ಲಿ ಅಸುರಕ್ಷಿತ ಭಾವನೆ ಮೂಡಿಸುತ್ತಿದೆ, ಈ ಮೂಲಕ ಭಾರತವು ಬಹುದೊಡ್ಡ ತಪ್ಪು ಮಾಡಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದಾರೆ.

ಸಿಖ್ ಉಗ್ರಗಾಮಿ ಹರ್ದೀಪ್ ಹತ್ಯೆಯ ತನಿಖೆಗೆ ರಾಯಭಾರಿಯನ್ನು ಸಂಪರ್ಕಿಸುವ ಒಟ್ಟಾವಾ ಅವರ ಆರೋಪಗಳನ್ನು ಬಲವಾಗಿ ತಳ್ಳಿಹಾಕಿದ ನಂತರ ಭಾರತವು ಕೆನಡಾದ ಆರು ರಾಜತಾಂತ್ರಿಕರನ್ನು ಹೊರಹಾಕಿದ ನಂತರ ಮತ್ತು ತನ್ನ ಹೈ ಕಮಿಷನರ್ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ನಂತರ ಕೆನಡಾ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ.

ಕೆನಡಾ ಆರು ಭಾರತೀಯ ರಾಜತಾಂತ್ರಿಕರನ್ನು ಹಿಂತೆಗೆದುಕೊಂಡಿರುವುದಾಗಿ ನಿನ್ನೆ ಘೋಷಿಸಿದೆ. ಕಳೆದ ವರ್ಷ ಸಿಖ್ ತೀವ್ರಗಾಮಿ ಹರ್ದೀಪ್ ಸಿಂಗ್ ನಿಜ್ಜರ ಹತ್ಯೆಯಲ್ಲಿ ಭಾರತೀಯ ಏಜೆಂಟ್‌ಗಳ ಕೈವಾಡವಿದೆ ಎಂಬ ಕೆನಡಾದ ಆರೋಪವನ್ನು ಭಾರತ ಬಲವಾಗಿ ತಿರಸ್ಕರಿಸುತ್ತಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟ್‌ಗಳ "ಸಂಭಾವ್ಯ" ಒಳಗೊಳ್ಳುವಿಕೆಯ ಆರೋಪ ಮಾಡಿದ್ದರು. ಬಳಿಕ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ತೀವ್ರ ಒತ್ತಡಕ್ಕೆ ಒಳಗಾಗಿದ್ದವು.

ನರಹತ್ಯೆ ಸೇರಿದಂತೆ ಕೆನಡಾದಲ್ಲಿ ವ್ಯಾಪಕ ಹಿಂಸಾಚಾರದಲ್ಲಿ ಭಾರತ ಸರ್ಕಾರದ ಏಜೆಂಟರು ಪಾತ್ರ ವಹಿಸುತ್ತಿದ್ದಾರೆ ಎಂದು ಆರೋಪಿಸಿ ಆರ್‌ಸಿಎಂಪಿ ಮುಖ್ಯಸ್ಥರು ಆರೋಪಗಳನ್ನು ಹೊರಿಸಿದ ಕೆಲವೇ ಗಂಟೆಗಳ ನಂತರ ಟ್ರುಡೊ ನಿನ್ನೆ ಸುದ್ದಿಗೋಷ್ಠಿ ನಡೆಸಿ ನಮ್ಮ ಸಾರ್ವಜನಿಕ ಸುರಕ್ಷತೆಗೆ ಭಾರತದಿಂದ ಗಂಭೀರ ಅಪಾಯವಿದೆ ಎಂದು ಆರೋಪಿಸಿದ್ದರು.

Justin Trudeau
ಕೆನಡಾ ಪ್ರಜೆ ಹತ್ಯೆ ಮಾಹಿತಿಯನ್ನು ಐದು ಮೈತ್ರಿ ದೇಶಗಳೊಂದಿಗೆ ಹಂಚಿಕೊಂಡಿದ್ದೆವು; ಭಾರತ ಬಹುದೊಡ್ಡ ತಪ್ಪು ಮಾಡಿದೆ: ಜಸ್ಟಿನ್ ಟ್ರುಡೊ

ಕೆನಡಿಯನ್ನರ ಮೇಲೆ ದಾಳಿ ಮಾಡಲು, ಇಲ್ಲಿ ಭಾರತೀಯರಿಗೆ ಅಸುರಕ್ಷಿತ ಭಾವನೆ ಮೂಡಿಸಲು ಮತ್ತು ಇನ್ನೂ ಹೆಚ್ಚಿನದಾಗಿ ಹಿಂಸಾಚಾರ ಮತ್ತು ಕೊಲೆಗಳನ್ನು ಸೃಷ್ಟಿಸಲು ಭಾರತವು ತಮ್ಮ ರಾಜತಾಂತ್ರಿಕರನ್ನು ಮತ್ತು ಸಂಘಟಿತ ಅಪರಾಧಗಳನ್ನು ಬಳಸಿಕೊಳ್ಳುವ ಮೂಲಕ ಒಂದು ದೊಡ್ಡ ತಪ್ಪು ಮಾಡಿದೆ ಎಂದು ಟ್ರುಡೋ ಆರೋಪಿಸಿದ್ದರು.

ಕಾನೂನು ಸುವ್ಯವಸ್ಥೆಗಾಗಿ ನಾವು ಒಟ್ಟಾಗಿ ನಿಲ್ಲುವುದರಿಂದ ನಾವು ನಮ್ಮ ಮಿತ್ರರಾಷ್ಟ್ರಗಳೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದರು. ಅಮೆರಿಕ ತನ್ನ ಎರಡು ನಿಕಟ ಮಿತ್ರರಾಷ್ಟ್ರಗಳು ಮತ್ತು ಪಾಲುದಾರರ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ಬಗ್ಗೆ ಇದುವರೆಗೆ ಯಾವುದೇ ಹೇಳಿಕೆಗಳನ್ನು ನೀಡಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com