ಕೆನಡಾ ಪ್ರಜೆ ಹತ್ಯೆ ಮಾಹಿತಿಯನ್ನು ಐದು ಮೈತ್ರಿ ದೇಶಗಳೊಂದಿಗೆ ಹಂಚಿಕೊಂಡಿದ್ದೆವು; ಭಾರತ ಬಹುದೊಡ್ಡ ತಪ್ಪು ಮಾಡಿದೆ: ಜಸ್ಟಿನ್ ಟ್ರುಡೊ

ಕೆನಡಾ ಸರ್ಕಾರದ ಆರೋಪಗಳನ್ನು ಬಲವಾಗಿ ನಿರಾಕರಿಸಿದ ನಂತರ ಭಾರತ ಸರ್ಕಾರ, ಕೆನಡಾದಿಂದ ತನ್ನ ಅಧಿಕಾರಿ, ಭಾರತದ ಕೆನಡಾ ಹೈ ಕಮಿಷನರ್ ಮತ್ತು ಇತರ ಅಧಿಕಾರಿಗಳನ್ನು ವಾಪಸ್ ಕರೆಸಿಕೊಂಡಿತ್ತು ಮತ್ತು ಆರು ಮಂದಿ ಕೆನಡಾ ರಾಯಭಾರಿಗಳನ್ನು ಭಾರತ ಬಿಟ್ಟು ಹೋಗುವಂತೆ ಸೂಚಿಸಿತ್ತು.
Justin Trudeau
ಜಸ್ಟಿನ್ ಟ್ರುಡೊ
Updated on

ವಾಷಿಂಗ್ಟನ್: ಕಳೆದ ವರ್ಷ ಕೆನಡಾದ ಪ್ರಜೆಯೊಬ್ಬನ ಹತ್ಯೆಯಲ್ಲಿ ಭಾರತದ ಅಧಿಕಾರಿಯೊಬ್ಬರ ಕೈವಾಡವಿದ್ದ ಆರೋಪಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಕೆನಡಾ ತನ್ನ ಐದು ಮುಖ್ಯ ಸಹವರ್ತಿ ದೇಶಗಳೊಂದಿಗೆ ಅದರಲ್ಲೂ ಮುಖ್ಯವಾಗಿ ಅಮೆರಿಕ ಜೊತೆ ಹಂಚಿಕೊಂಡಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ.

ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ನ ಹತ್ಯೆಗೆ ಸಂಬಂಧಪಟ್ಟ ತನಿಖೆಯಲ್ಲಿ ಭಾರತೀಯ ರಾಯಭಾರಿಯ ಸಂಪರ್ಕವಿದೆ ಎಂಬ ಕೆನಡಾ ಸರ್ಕಾರದ ಆರೋಪಗಳನ್ನು ಬಲವಾಗಿ ನಿರಾಕರಿಸಿದ ನಂತರ ಭಾರತ ಸರ್ಕಾರ, ಕೆನಡಾದಿಂದ ತನ್ನ ಅಧಿಕಾರಿ, ಭಾರತದ ಕೆನಡಾ ಹೈ ಕಮಿಷನರ್ ಮತ್ತು ಇತರ ಅಧಿಕಾರಿಗಳನ್ನು ವಾಪಸ್ ಕರೆಸಿಕೊಂಡಿತ್ತು ಮತ್ತು ಆರು ಮಂದಿ ಕೆನಡಾ ರಾಯಭಾರಿಗಳನ್ನು ಭಾರತ ಬಿಟ್ಟು ಹೋಗುವಂತೆ ಸೂಚಿಸಿತ್ತು.

ಈ ಬೆಳವಣಿಗೆ ನಂತರ ನಿನ್ನೆ ಒಟ್ಟಾವೊದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ, ಈ ಪ್ರಕರಣದಲ್ಲಿ ಆರಂಭದಿಂದಲೂ ನಾವು ನಮ್ಮ ಐದು ಸಹವರ್ತಿ ದೇಶಗಳ ಜೊತೆ ನಿಕಟವಾಗಿ ಕೆಲಸ ಮಾಡಿದ್ದು ವಿಶೇಷವಾಗಿ ಅಮೆರಿಕದ ಜೊತೆಯಾಗಿ ಸಾಗಿದ್ದೇವೆ. ಕಾನೂನುಬಾಹಿರ ಹತ್ಯೆಯ ಪ್ರಯತ್ನಕ್ಕೆ ಸಂಬಂಧಿಸಿದಂತೆ ಅಮೆರಿಕ ಕೂಡ ಭಾರತದಿಂದ ಇದೇ ರೀತಿಯ ವರ್ತನೆ ಅನುಭವಿಸಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರು ಸೋಮವಾರ, ಅಕ್ಟೋಬರ್ 14, 2024 ರಂದು ಒಂಟಾರಿಯೊದ ಒಟ್ಟಾವಾದಲ್ಲಿರುವ ಪಾರ್ಲಿಮೆಂಟ್ ಹಿಲ್‌ನಲ್ಲಿ ಭಾರತದೊಂದಿಗೆ ಸಂಪರ್ಕದೊಂದಿಗೆ ಕೆನಡಾದಲ್ಲಿ ಸಂಭವಿಸುವ ಹಿಂಸಾತ್ಮಕ ಅಪರಾಧ ಚಟುವಟಿಕೆಗಳಿಗೆ ಸಂಬಂಧಿಸಿದ ತನಿಖಾ ಪ್ರಯತ್ನಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾರೆ. ಕಾನೂನು ಸುವ್ಯವಸ್ಥೆಗಾಗಿ ನಾವು ಒಟ್ಟಾಗಿ ನಿಲ್ಲುವುದರಿಂದ ನಾವು ನಮ್ಮ ಮಿತ್ರರಾಷ್ಟ್ರಗಳೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಅವರು ಹೇಳಿದರು.

ಭಾರತದ ವಿರುದ್ಧದ ಉಗ್ರವಾದ, ಹಿಂಸಾಚಾರ ಮತ್ತು ಪ್ರತ್ಯೇಕತಾವಾದಕ್ಕೆ ಟ್ರುಡೊ ಸರ್ಕಾರದ ಬೆಂಬಲಕ್ಕೆ ಪ್ರತಿಕ್ರಿಯೆಯಾಗಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಭಾರತ ಹೊಂದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೇಳಿಕೆಯಲ್ಲಿ ತಿಳಿಸಿದೆ.

ಪ್ರಧಾನಿ ಟ್ರುಡೊ ಅವರ ಭಾರತದ ಮೇಲಿನ ಹಗೆತನವು ಬಹಳ ಹಿಂದಿನಿಂದಲೂ ಸಾಕ್ಷಿಯಾಗಿದೆ ಎಂದು ಸಚಿವಾಲಯ ಹೇಳಿದೆ. 2018 ರಲ್ಲಿ, ವೋಟ್ ಬ್ಯಾಂಕ್‌ನೊಂದಿಗೆ ಒಲವು ಗಳಿಸುವ ಗುರಿಯನ್ನು ಹೊಂದಿದ್ದ ಅವರ ಭಾರತ ಭೇಟಿಯು ಅವರ ಮನಸ್ಥಿತಿಯನ್ನು ತಿಳಿಸುತ್ತದೆ. ಅವರ ನೇತೃತ್ವದ ಸರ್ಕಾರವು ಭಾರತಕ್ಕೆ ಸಂಬಂಧಿಸಿದಂತೆ ಉಗ್ರಗಾಮಿ ಮತ್ತು ಪ್ರತ್ಯೇಕತಾವಾದಿ ಕಾರ್ಯಸೂಚಿಯೊಂದಿಗೆ ಬಹಿರಂಗವಾಗಿ ಸಂಬಂಧ ಹೊಂದಿರುವ ವ್ಯಕ್ತಿಗಳನ್ನು ಒಳಗೊಂಡಿದೆ.

ಡಿಸೆಂಬರ್ 2020 ರಲ್ಲಿ ಭಾರತದ ಆಂತರಿಕ ರಾಜಕೀಯದಲ್ಲಿ ಅವರ ಹಸ್ತಕ್ಷೇಪವು ಕೆನಡಾ ಸರ್ಕಾರದ ನಿಲುವನ್ನು ತೋರಿಸುತ್ತದೆ ಎಂದಿದ್ದಾರೆ.

Justin Trudeau
ಭಾರತೀಯ ರಾಯಭಾರಿ ವಿರುದ್ಧ ಅಸಂಬದ್ಧ ಆರೋಪ: ಕೆನಡಾ ಹೈಕಮಿಷನರ್‌ ಕರೆಸಿ ಕುಟುಕಿದ MEA!

ಈಗಿನ ಪರಿಸ್ಥಿತಿ ಅತ್ಯಂತ ಅನಪೇಕ್ಷಿತವಾಗಿದೆ. ಕೆನಡಿಯನ್ನರು ಅವರ ಸಮುದಾಯಗಳಲ್ಲಿ, ಅವರ ಮನೆಗಳಲ್ಲಿ ಹಿಂಸೆಗೆ ಒಳಗಾಗುವುದನ್ನು ನಾವು ಬಯಸುವುದಿಲ್ಲ, ಭಾರತದೊಂದಿಗಿನ ಸಂಬಂಧಗಳಲ್ಲಿ ಈ ಉದ್ವಿಗ್ನತೆಗಳನ್ನು ಹೊಂದಲು ನಾವು ಬಯಸುವುದಿಲ್ಲ ಎಂದು ಹೇಳಿದರು.

ಅದಕ್ಕಾಗಿಯೇ ಕಳೆದ ವಾರ, ನಾವು ನಮ್ಮ ಭದ್ರತಾ ಏಜೆನ್ಸಿಗಳು, ರಾಜತಾಂತ್ರಿಕರು ಮತ್ತು ಪೊಲೀಸ್ ಏಜೆನ್ಸಿಗಳ ಮೂಲಕ ಭಾರತ ಸರ್ಕಾರವನ್ನು ಸಂಪರ್ಕಿಸಿದ್ದೇವೆ, ಕೆನಡಿಯನ್ನರನ್ನು ರಕ್ಷಿಸಲು, ಪರಿಹಾರಕ್ಕೆ ಮಾರ್ಗಗಳನ್ನು ಹುಡುಕಲು ನಾವು ಬಯಸುತ್ತೇವೆ ಹೊರತು ಭಾರತ ಮತ್ತು ಕೆನಡಾ ನಡುವಿನ ಉತ್ತಮ ಸಂಬಂಧಗಳನ್ನು ಹಾಳುಮಾಡಲು ಅಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com