ತೆಹ್ರಾನ್: ಇಸ್ರೇಲ್ ದಾಳಿ ಮಾಡಿದರೆ ಇರಾನ್ ದೃಢ ಪ್ರತಿಕ್ರಿಯೆ ನೀಡಲಿದೆ ಎಂದು ಇರಾನ್ ನ ಉನ್ನತ ಮಟ್ಟದ ರಾಜತಾಂತ್ರಿಕ ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ. ಇಸ್ರೇಲ್ ದಾಳಿಗಳ ವಿರುದ್ಧ ವಿಶ್ವಸಂಸ್ಥೆಯ ಕ್ರಮಕ್ಕೆ ಇರಾನ್ ನ ರಾಜತಾಂತ್ರಿಕ ಅಧಿಕಾರಿ ಆಗ್ರಹಿಸಿದ್ದಾರೆ.
ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದರೆ, ಇರಾನ್ ಸಹ ದೃಢವಾದ, ಮಾರಕ ದಾಳಿ ನಡೆಸಲು ಸಿದ್ಧವಿದೆ ಎಂದು ರಾಜತಾಂತ್ರಿಕ ಅಧಿಕಾರಿ ತಿಳಿಸಿದ್ದಾರೆ.
ತನ್ನ ಇಬ್ಬರು ನಿಕಟ ಮಿತ್ರರಾದ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಮತ್ತು ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಮತ್ತು ಇರಾನ್ ಜನರಲ್ ಅವರ ಹತ್ಯೆಗೆ ಪ್ರತೀಕಾರವಾಗಿ ಇಸ್ಲಾಮಿಕ್ ಗಣರಾಜ್ಯ ಅಕ್ಟೋಬರ್ 1 ರಂದು ಇಸ್ರೇಲ್ ಮೇಲೆ ಸುಮಾರು 200 ಕ್ಷಿಪಣಿಗಳನ್ನು ಹಾರಿಸಿದೆ.
ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಕಳೆದ ವಾರ ತನ್ನ ದೇಶದ ಪ್ರತೀಕಾರದ ಕ್ರಮ "ಮಾರಣಾಂತಿಕ, ನಿಖರ ಮತ್ತು ಆಶ್ಚರ್ಯಕರವಾಗಿರಲಿದೆ" ಎಂದು ಎಚ್ಚರಿಕೆ ನೀಡಿದ್ದರು.
"ಈ ಪ್ರದೇಶದ ಶಾಂತಿ ಮತ್ತು ಭದ್ರತೆಯನ್ನು ರಕ್ಷಿಸಲು ಇರಾನ್ ಸಂಪೂರ್ಣ ಪ್ರಯತ್ನಗಳನ್ನು ಮಾಡುತ್ತಿರುವಾಗ, ಇಸ್ರೇಲ್‌ನ ಯಾವುದೇ ಸಾಹಸಗಳಿಗೆ ನಿರ್ಣಾಯಕ ಪ್ರತಿಕ್ರಿಯೆಗೆ ಸಂಪೂರ್ಣವಾಗಿ ಸಿದ್ಧವಾಗಿದೆ" ಎಂದು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘಿ ಗುಟೆರೆಸ್ ಅವರೊಂದಿಗಿನ ದೂರವಾಣಿ ಕರೆಯಲ್ಲಿ ಹೇಳಿದ್ದಾರೆಂದು ಬುಧವಾರ ಅವರ ಕಚೇರಿಯಿಂದ ಬಿಡುಗಡೆಯಾದ ಹೇಳಿಕೆ ತಿಳಿಸಿದೆ.
Advertisement