ಬೈರುತ್: ಲೆಬನಾನ್ ದಕ್ಷಿಣ ನಗರವಾದ ನಬಾಟಿಯೆಹ್‌ನಲ್ಲಿ ಮುನ್ಸಿಪಲ್ ಕಟ್ಟಡಗಳ ಮೇಲೆ ಬುಧವಾರ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಹೆಜ್ಬುಲ್ಲಾ ಮತ್ತು ಅದರ ಮಿತ್ರ ಅಮಲ್ ಅಧಿಕಾರವನ್ನು ತನ್ನ ಕೈಯಲ್ಲಿ ಹಿಡಿದಿಟ್ಟುಕೊಂಡಿದ್ದು ಮೃತಪಟ್ಟವರಲ್ಲಿ ಮೇಯರ್ ಕೂಡ ಇದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಬತಿಯೆಹ್ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಒಂದು ರೀತಿಯ ಬೆಂಕಿಯ ಬಲೆಯಂತಾಗಿದೆ. ಅಲ್ಲಿ 11 ಬಾರಿ ವಾಯುದಾಳಿ ನಡೆಸಲಾಗಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದರು. ಅಲ್ಲದೆ ನಾಗರಿಕರ ರಕ್ಷಣೆಗಾಗಿ ವಿಶ್ವಸಂಸ್ಥೆ ಮಧ್ಯೆಪ್ರವೇಶಿಸಬೇಕು ಎಂದು ಮನವಿ ಮಾಡಿದರು. ಇನ್ನು ಲೆಬನಾನ್‌ನ ಪ್ರಧಾನ ಮಂತ್ರಿ, ಈ ದಾಳಿಯು ನಗರದ ಮುನ್ಸಿಪಲ್ ಕೌನ್ಸಿಲ್‌ನ ಸಭೆಯನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿದರು.
ನಬಾತಿಯೆ ಪುರಸಭೆ ಮತ್ತು ಪುರಸಭೆಗಳ ಒಕ್ಕೂಟದ ಎರಡು ಕಟ್ಟಡಗಳ ಮೇಲೆ ದಾಳಿ ನಡೆದಿದ್ದು ಆರು ಮಂದಿ ಬಲಿಯಾಗಿದ್ದು 43 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದ್ದು ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು. ಸದ್ಯ ಅವಶೇಷಗಳಡಿಯಲ್ಲಿ ಬದುಕುಳಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಅದು ಸೇರಿಸಿದೆ.
ನಬಾತಿಯೆಹ್ ಮೇಯರ್, ಇತರರ... ಹುತಾತ್ಮರಾಗಿದ್ದು, ಇದು ಹತ್ಯಾಕಾಂಡ, ನಬತಿಯೆಹ್ ಗವರ್ನರ್ ಹೋವೈಡಾ ಟರ್ಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೈನಂದಿನ ಬಿಕ್ಕಟ್ಟು ನಿರ್ವಹಣಾ ಸಭೆಯಲ್ಲಿ ಮೇಯರ್ ಅಹ್ಮದ್ ಕಹಿಲ್ ಅವರು ತಮ್ಮ ತಂಡದೊಂದಿಗೆ ಪುರಸಭೆಯ ಕಟ್ಟಡದಲ್ಲಿದ್ದರು. ಈ ವೇಳೆ ದಾಳಿಗಳು ನಡೆದಿವೆ ಎಂದು ಅವರು ಹೇಳಿದರು.
Advertisement