ಕೆನಡಾ ಸಂಸತ್ತಿನಲ್ಲಿ 23 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದ್ದ ದೀಪಾವಳಿ ಆಚರಣೆ ದಿಢೀರ್ ರದ್ದು!

ಕಳೆದ ವರ್ಷ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಹಳಸುತ್ತಿವೆ ಭಾರತದೊಂದಿಗೆ ನಡೆಯುತ್ತಿರುವ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ಕೆನಡಾದ ವಿರೋಧ ಪಕ್ಷದ ನಾಯಕ ಪಿಯರೆ ಪೊಲಿಯೆವ್ರೆ ಕಚೇರಿಯು ರದ್ದುಗೊಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರPTI
Updated on

ಕೆನಡಾ ಸಂಸತ್ತಿನಲ್ಲಿ ಭಾರತೀಯ-ಕೆನಡಿಯನ್ ಸಮುದಾಯದ ವಾರ್ಷಿಕ ದೀಪಾವಳಿ ಆಚರಣೆಯನ್ನು ಹಠಾತ್ ರದ್ದುಗೊಳಿಸಲಾಗಿದೆ. ಕೆನಡಾ ಮತ್ತು ಭಾರತದ ನಡುವೆ ಹೆಚ್ಚುತ್ತಿರುವ ರಾಜತಾಂತ್ರಿಕ ಉದ್ವಿಗ್ನತೆಯ ಮಧ್ಯೆ ಈ ನಿರ್ಧಾರವು ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಕಳೆದ ವರ್ಷ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಹಳಸುತ್ತಿವೆ ಭಾರತದೊಂದಿಗೆ ನಡೆಯುತ್ತಿರುವ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ಕೆನಡಾದ ವಿರೋಧ ಪಕ್ಷದ ನಾಯಕ ಪಿಯರೆ ಪೊಲಿಯೆವ್ರೆ ಅವರ ಕಚೇರಿಯು ಭಾರತೀಯ-ಕೆನಡಿಯನ್ ಸಮುದಾಯಕ್ಕಾಗಿ ಸಂಸತ್ತಿನ ಹಿಲ್‌ನಲ್ಲಿ ವಾರ್ಷಿಕ ದೀಪಾವಳಿ ಕಾರ್ಯಕ್ರಮವನ್ನು ರದ್ದುಗೊಳಿಸಿದೆ.

ಓವರ್‌ಸೀಸ್ ಫ್ರೆಂಡ್ಸ್ ಆಫ್ ಇಂಡಿಯಾ ಕೆನಡಾ (OFIC) ಸಂಘಟಕರ ಪ್ರಕಾರ, ಈ ವಿಷಯವನ್ನು ಹಠಾತ್ ಆಗಿ ತಿಳಿಸಲಾಗಿದ್ದು ಇದಕ್ಕೆ ಯಾವುದೇ ವಿವರಣೆಯನ್ನು ನೀಡಿಲ್ಲ. ಕಾರ್ಯಕ್ರಮವನ್ನು ದಿಢೀರ್ ರದ್ದು ಪಡಿಸುವ ಮೂಲಕ ಇದು ಹಿಂದೂಗಳ ಮೇಲಿನ 'ಜನಾಂಗೀಯ ಪಕ್ಷಪಾತ' ಎಂದು ಆರೋಪಿಸಿದರು.

ಕಳೆದ ವರ್ಷ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಕುರಿತು ಇತ್ತೀಚಿನ ವಾರಗಳಲ್ಲಿ ಭಾರತದೊಂದಿಗಿನ ದೇಶದ ಉದ್ವಿಗ್ನತೆಯು ಉತ್ತುಂಗಕ್ಕೇರಿರುವ ಸಮಯದಲ್ಲಿ ಕೆನಡಾ ಈ ಇತ್ತೀಚಿನ ಹೆಜ್ಜೆಯನ್ನು ತೆಗೆದುಕೊಂಡಿದೆ. ಖಲಿಸ್ತಾನ್ ಪರ ಚಳುವಳಿಯ ಸದಸ್ಯರನ್ನು ಗುರಿಯಾಗಿಸಲು ಕ್ರಿಮಿನಲ್ ಗ್ಯಾಂಗ್‌ಗಳನ್ನು ಬಳಸಿಕೊಂಡು ಭಾರತೀಯ ರಾಜತಾಂತ್ರಿಕರು ಮಾಹಿತಿ ಸಂಗ್ರಹಿಸುವಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಒಟ್ಟಾವಾ ಆರೋಪಿಸಿದ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಸಾರ್ವಕಾಲಿಕ ಕಡಿಮೆ ಮಟ್ಟವನ್ನು ತಲುಪಿದೆ.

ಸಂಗ್ರಹ ಚಿತ್ರ
ಸಿಖ್ ಪ್ರತ್ಯೇಕತಾವಾದಿಗಳ ವಿರುದ್ಧ ಹಿಂಸಾಚಾರಕ್ಕೆ ಆದೇಶ ನೀಡಿದ್ದು ಭಾರತದ ಗೃಹ ಸಚಿವ ಅಮಿತ್ ಶಾ: ಕೆನಡಾ ಅಧಿಕಾರಿ

ಇದರ ನಂತರ ಭಾರತವು ಕೆನಡಾದ ರಾಜಧಾನಿ ಒಟ್ಟಾವಾದಿಂದ ತನ್ನ ಉನ್ನತ ರಾಯಭಾರಿಯನ್ನು ಹಿಂಪಡೆಯಿತು. ಆರು ಕೆನಡಾದ ರಾಜತಾಂತ್ರಿಕರನ್ನು ನವದೆಹಲಿಯಿಂದ ಹೊರಹಾಕಲಾಯಿತು. OFIC ಅಧ್ಯಕ್ಷ ಶಿವಭಾಸ್ಕರ್ ಅವರು ದೀಪಾವಳಿ ಆಚರಣೆಯನ್ನು ರದ್ದುಗೊಳಿಸುವ ಈ ನಿರ್ಧಾರದ ಬಗ್ಗೆ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿ ಪಿಯರ್ ಪೊಯಿಲಿವ್ರೆ ಅವರಿಗೆ ಪತ್ರ ಬರೆದಿದ್ದಾರೆ.

ಸಂಗ್ರಹ ಚಿತ್ರ
America ಶ್ವೇತಭವನದಲ್ಲಿ ನಡೆದ ದೀಪಾವಳಿ ಆಚರಣೆ ಹೀಗಿತ್ತು ನೋಡಿ...

ಓವರ್‌ಸೀಸ್ ಫ್ರೆಂಡ್ಸ್ ಆಫ್ ಇಂಡಿಯಾ ಕೆನಡಾದ ಅಧ್ಯಕ್ಷ ಶಿವಭಾಸ್ಕರ್, ಕಾರ್ಯಕ್ರಮವನ್ನು ರದ್ದುಗೊಳಿಸಿದ ಬಗ್ಗೆ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ವಿರೋಧ ಪಕ್ಷದ ನಾಯಕರ ಕಚೇರಿಯಿಂದ ಯಾವುದೇ ವಿವರಣೆಯನ್ನು ನೀಡಿಲ್ಲ ಎಂದು ಹೇಳಿದರು. ಕಳೆದ 23 ವರ್ಷಗಳಿಂದ ಈ ಕಾರ್ಯವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಇದರಲ್ಲಿ ಹಿಂದೂಗಳು, ಬೌದ್ಧರು, ಜೈನರು ಮತ್ತು ಸಿಖ್ಖರು ಭಾಗವಹಿಸಿದ್ದರು ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com