ನವದೆಹಲಿ: ಬಾಂಗ್ಲಾದೇಶದಲ್ಲಿ ದೊಂಬಿ, ರಾಜಕೀಯ ಅಸ್ಥಿರತೆ ನಡುವೆ ರಾಷ್ಟ್ರ ಧ್ವಜ ಹಾಗೂ ರಾಷ್ಟ್ರ ಗೀತೆಯನ್ನು ಬದಲಾಯಿಸಬೇಕೆಂದು ಜನರ ಗುಂಪೊಂದು ಸಲಹೆ ನೀಡಿದೆ. ಈಗಿನ ರಾಷ್ಟ್ರ ಧ್ವಜವನ್ನು ನರೇನ್ ದಾಸ್ ವಿನ್ಯಾಸಗೊಳಿಸಿದ್ದರೆ, ರಾಷ್ಟ್ರ ಗೀತೆಯನ್ನು ರವೀಂದ್ರನಾಥ ಟ್ಯಾಗೋರ್ ಬರೆದಿದ್ದಾರೆ. ಇಬ್ಬರೂ ಹಿಂದೂ ಆಗಿದ್ದಾರೆ.
ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಬದಲಾಯಿಸುವ ಬಗ್ಗೆ ಸಾಕಷ್ಟು ಆಸಕ್ತಿ ವ್ಯಕ್ತವಾಗುತ್ತಿದೆ. ಬ್ರಿಗೇಡಿಯರ್ ಜನರಲ್ (ನಿವೃತ್ತ) ಅಬ್ದುಲ್ಲಾಹಿಲ್ ಅಮಾನ್ ಅಜ್ಮಿ ಇತ್ತೀಚಿಗೆ ಇದನ್ನು ಪ್ರಸ್ತಾಪಿಸಿದ್ದು, ಸೇನಾ ಮುಖ್ಯಸ್ಥ ಜನರಲ್ ವೇಕರ್-ಉಜ್-ಜಮಾನ್ ಅವರ ಬಗ್ಗೆಯೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದುಪ್ರೊಫೆಸರ್ ನಜ್ಮುಲ್ ಅಹ್ಸನ್ ಕಲೀಮುಲ್ಲಾ TNIE ಗೆ ತಿಳಿಸಿದರು.
ಬ್ರಿಗೇಡಿಯರ್ ಜನರಲ್ ಅಜ್ಮಿ ಬಾಂಗ್ಲಾದೇಶದ ಜಮಾತ್-ಎ-ಇಸ್ಲಾಮಿ ಪಕ್ಷದ ಸಂಸ್ಥಾಪಕನ ಮಗ. ಅವರು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಆಡಳಿತದಲ್ಲಿ ನಾಪತ್ತೆಯಾಗಿದ್ದರು. ಇತ್ತೀಚಿಗೆ ಅವರು ಕಾಣಿಸಿಕೊಳ್ಳುತ್ತಿದ್ದಾರೆ.
ಇಸ್ಲಾಂ ಧರ್ಮವನ್ನು ಚಿತ್ರಿಸುವ ಯಾವುದೇ ಚಿಹ್ನೆಯನ್ನು ಬಾಂಗ್ಲಾ ಧ್ವಜ ಹೊಂದಿಲ್ಲ, ಅರ್ಧಚಂದ್ರಾಕಾರ ಅಥವಾ ರಾಷ್ಟ್ರಗೀತೆಯು 1971 ರ ಸ್ವಾತಂತ್ರ್ಯ ಹೋರಾಟವನ್ನು ಚಿತ್ರಿಸುವುದಿಲ್ಲ, ಆದ್ದರಿಂದ ಬಹಳಷ್ಟು ಬಾಂಗ್ಲಾದೇಶಿಗಳು ಈಗ ಹೊಸದಾಗಿ ಯೋಚಿಸುತ್ತಿದ್ದು, ಎಲ್ಲರಿಗೂ ಇದ್ದಕ್ಕಿದ್ದಂತೆ ಹೊಸ ಧ್ವಜ ಮತ್ತು ಹೊಸ ರಾಷ್ಟ್ರ ಗೀತೆ ಕಾರ್ಯರೂಪಕ್ಕೆ ಬರಬಹುದು ಅಂದುಕೊಂಡಿದ್ದಾರೆ ಎಂದು ಮೂಲವೊಂದು ತಿಳಿಸಿದೆ.
ಬಾಂಗ್ಲಾದೇಶದಲ್ಲಿ ಬಹುತೇಕ ಮಂದಿ ಮುಸ್ಲಿಂ ಆಗಿದ್ದಾರೆ. ಈಗ ಶೇಕಡಾ 93 ರಷ್ಟು ಮಂದಿ ಮುಸ್ಲಿಂ ಜನರಿದ್ದಾರೆ. ಕ್ಷೀಣಿಸುತ್ತಿರುವ ಅಲ್ಪಸಂಖ್ಯಾತರಲ್ಲಿ ಶೇ. 5 ರಷ್ಟು ಹಿಂದೂಗಳು ಮತ್ತು ಉಳಿದವರು ಬೌದ್ಧರು ಮತ್ತು ಕ್ರಿಶ್ಚಿಯನ್ನರಾಗಿದ್ದಾರೆ.
"ಮಾಜಿ ಪ್ರಧಾನಿ ಶೇಖ್ ಹಸೀನಾ ದೇಶ ತೊರೆದ ನಂತರ ಅವಾಮಿ ಲೀಗ್ ಬಾಂಗ್ಲಾದೇಶದಲ್ಲಿ ಅಸ್ತಿತ್ವದ ಬಿಕ್ಕಟ್ಟನ್ನು ಹೊಂದಿದೆ.ಹೀಗಾಗಿ ಅವರು ಈ ಸಂಬಂಧ ಯಾವುದೇ ಹೇಳಿಕೆ ನೀಡುತ್ತಿಲ್ಲ. ಅದರ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರಿಗೆ ಸಂಬಂಧಿಸಿದ ಯಾವುದೇ ಕುರುಹುಗಳು ಸಹ ಉಳಿದಿಲ್ಲಅಥವಾ ಉಳಿದ್ದಿದ್ದರೂ ಅವು ಕಡಿಮೆ ಪ್ರಮಾಣದಲ್ಲಿವೆ. ಹೀಗಾಗಿ ಧ್ವಜ ಮತ್ತು ಗೀತೆಯನ್ನು ಬದಲಾಯಿಸುವುದು ಹೆಚ್ಚು ಸಮಸ್ಯೆಯಾಗುವುದಿಲ್ಲ ಎಂದು ಮೂಲಗಳು ಹೇಳಿವೆ.
ಪಾಕಿಸ್ತಾನ ಸರ್ಕಾರ ಮತ್ತು ಅಧಿಕಾರಿಗಳು ಬಾಂಗ್ಲಾದೇಶದಲ್ಲಿ ಹೊಸ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಇತ್ತೀಚೆಗೆ ಪಾಕಿಸ್ತಾನದ ಹೈಕಮಿಷನರ್ ಢಾಕಾ ವಿಶ್ವವಿದ್ಯಾಲಯದ ಉಪ ಕುಲಪತಿಯನ್ನು ಭೇಟಿಯಾಗಿದ್ದರು. ಪಾಕಿಸ್ತಾನವು ಬಾಂಗ್ಲಾದೇಶೀಯರಿಗೆ ವೀಸಾ ಮುಕ್ತ ಪ್ರಯಾಣ ಮತ್ತು ಉಭಯ ದೇಶಗಳ ನಡುವೆ ನೇರ ವಿಮಾನಗಳನ್ನು ನೀಡಲು ಸಿದ್ಧವಾಗಿದೆ. ಬಾಂಗ್ಲಾದೇಶಕ್ಕೆ ಹೊಸ ಸ್ವರೂಪ ನೀಡುವ ಪ್ರಯತ್ನದಲ್ಲಿ ಮಧ್ಯಂತರ ಸರ್ಕಾರ ಹೆಚ್ಚಿನ ಬದಲಾವಣೆಗಳನ್ನು ತರುವ ಸಾಧ್ಯತೆಯಿದೆ.
Advertisement