ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಪ್ರಮುಖ ಭಯೋತ್ಪಾದಕ ದಾಳಿಯ ಸಂಚನ್ನು ವಿಫಲಗೊಳಿಸಲಾಗಿದ್ದು, ಅಲ್-ಖೈದಾ,133 ಬ್ರಿಗೇಡ್ ಸೇರಿದಂತೆ ವಿವಿಧ ನಿಷೇಧಿತ ಗುಂಪುಗಳ 33 ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಈ ವಾರ ಪ್ರಾಂತ್ಯದ ವಿವಿಧ ಜಿಲ್ಲೆಗಳಲ್ಲಿ 475 ಗುಪ್ತಚರ-ಆಧಾರಿತ ಕಾರ್ಯಾಚರಣೆ ನಡೆಸಿರುವ ಪಂಜಾಬ್ ಪೊಲೀಸರ ಭಯೋತ್ಪಾದನಾ ನಿಗ್ರಹ ಇಲಾಖೆ (CTD) ಉಗ್ರರ ವಿರುದ್ಧ ವಿರುದ್ಧ 32 ಪ್ರಕರಣಗಳನ್ನು ದಾಖಲಿಸಿದೆ. ಅಲ್ಲದೇ ಅವರನ್ನು ಅಜ್ಞಾತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಕನಿಷ್ಠ 475 ಶಂಕಿತ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು CTD ಹೇಳಿಕೆಯಲ್ಲಿ ತಿಳಿಸಿದೆ.
ಪಂಜಾಬ್‌ನ ವಿವಿಧ ಪ್ರದೇಶಗಳಲ್ಲಿ ಕಾರ್ಯಾಚರಣೆಯ ಸಂದರ್ಭದಲ್ಲಿ ನಿಷೇಧಿತ ಸಂಘಟನೆಗಳಿಗೆ ಸೇರಿದ 33 ಭಯೋತ್ಪಾದಕರನ್ನು ಬಂಧಿಸುವ ಮೂಲಕ ಪಂಜಾಬ್‌ನಲ್ಲಿನ ಭಯೋತ್ಪಾದಕ ಸಂಚನ್ನು ವಿಫಲಗೊಳಿಸಲಾಗಿದೆ.
ಅಲ್-ಖೈದಾ, 133 ಬ್ರಿಗೇಡ್, ಸಿಪಾಹ್ ಸಹಬಾ ಪಾಕಿಸ್ತಾನ, ಲಷ್ಕರ್ ಜಾಂಗ್ವಿ ಮತ್ತು ತೆಹ್ರೀಕ್ ಜಫಾರಿಯಾ ಪಾಕಿಸ್ತಾನದ ಭಯೋತ್ಪಾದಕರನ್ನು ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಇತರ ನಿಷೇಧಿತ ವಸ್ತುಗಳೊಂದಿಗೆ ಬಂಧಿಸಲಾಗಿದೆ.
ಉಗ್ರರ ವಶದಿಂದ ಸ್ಫೋಟಕಗಳು, ಎರಡು ಹ್ಯಾಂಡ್ ಗ್ರೆನೇಡ್‌ಗಳು, ಎರಡು ಐಇಡಿ ಬಾಂಬ್‌ಗಳು, 26 ಡಿಟೋನೇಟರ್‌ಗಳು, ಸುರಕ್ಷತಾ ಫ್ಯೂಸ್ ವೈರ್, ನಾಲ್ಕು ಪಿಸ್ತೂಲ್‌ಗಳು, ಬುಲೆಟ್‌ಗಳು ಮತ್ತು ನಿಷೇಧಿತ ಸಾಹಿತ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು CTD ತಿಳಿಸಿದೆ.
Advertisement