ಪೇಜರ್ ಗಳ ಸ್ಫೋಟ: ಲೆಬನಾನ್, ಸಿರಿಯಾದಲ್ಲಿ 9 ಸಾವು; 2800 ಹೆಜ್ಬೊಲ್ಲಾಗಳಿಗೆ ಗಾಯ; Israel ಕೈವಾಡ?

ನೂರಾರು ಹ್ಯಾಂಡ್‌ಹೆಲ್ಡ್ ಪೇಜರ್‌ಗಳು ಲೆಬನಾನ್‌ನಾದ್ಯಂತ ಮತ್ತು ಸಿರಿಯಾದ ಕೆಲವು ಭಾಗಗಳಲ್ಲಿ ಏಕಕಾಲದಲ್ಲಿ ಸ್ಫೋಟಗೊಂಡಿವೆ.
pagers explode
ಪೇಜರ್ ಸ್ಫೋಟ online desk
Updated on

ಸಿರಿಯಾ: ಲೆಬನಾನ್, ಸಿರಿಯಾಗಳಲ್ಲಿ ಪೇಜರ್ ಗಳು ಸ್ಫೋಟಗೊಂಡು 9ಮಂದಿ ಸಾವನ್ನಪ್ಪಿ 2,800 ಕ್ಕೂ ಹೆಚ್ಚಿನ ಹೆಜ್ಬೊಲ್ಲಾ ಸದಸ್ಯರು ತೀವ್ರವಾಗಿ ಗಾಯಗೊಂಡಿದ್ದಾರೆ. ಲೆಬನಾನ್ ನ ಆರೋಗ್ಯ ಸಚಿವ ಫಿರಾಸ್ ಅಬಿಯಾಡ್ ಈ ಘಟನೆಯನ್ನು ದೃಢಪಡಿಸಿದ್ದಾರೆ.

2,750 ಮಂದಿಯ ಪೈಕಿ 200 ಮಂದಿಗೆ ತೀವ್ರವಾಗಿ ಗಾಯಗಳಾಗಿದ್ದು, ಹೆಚ್ಚಿನ ಪ್ರಕರಣಗಳಲ್ಲಿ ಮುಖ, ಕೈ, ಹೊಟ್ಟೆಗಳಿಗೆ ಹಾನಿಯುಂಟಾಗಿದೆ ಎಂದು ಫಿರಾಸ್ ಅಬಿಯಾಡ್ ಹೇಳಿದ್ದಾರೆ. ಹಮಾಸ್‌ನ ಮಿತ್ರ ಪಕ್ಷವಾದ ಹಿಜ್ಬುಲ್ಲಾ, ಪೇಜರ್ ದಾಳಿಗೆ ಇಸ್ರೇಲ್ ಸಂಪೂರ್ಣ ಹೊಣೆಯಾಗಿದೆ ಎಂದು ಆರೋಪಿಸಿದೆ.

ನೂರಾರು ಹ್ಯಾಂಡ್‌ಹೆಲ್ಡ್ ಪೇಜರ್‌ಗಳು ಲೆಬನಾನ್‌ನಾದ್ಯಂತ ಮತ್ತು ಸಿರಿಯಾದ ಕೆಲವು ಭಾಗಗಳಲ್ಲಿ ಏಕಕಾಲದಲ್ಲಿ ಸ್ಫೋಟಗೊಂಡಿವೆ. ಅನಾಮಧೇಯತೆಯ ಷರತ್ತು ವಿಧಿಸಿ ಈ ಕುರಿತು ಮಾತನಾಡಿದ ಹೆಜ್ಬೊಲ್ಲಾ ಅಧಿಕಾರಿಯೊಬ್ಬರು ಅಸೋಸಿಯೇಟೆಡ್ ಪ್ರೆಸ್‌ ಗೆ ಹೇಳಿಕೆ ನೀಡಿದ್ದು, ಗುಂಪಿನ ಸದಸ್ಯರು ಸೇರಿದಂತೆ "ಹಲವಾರು ನೂರು" ಜನರು ತಮ್ಮ ಹ್ಯಾಂಡ್‌ಹೆಲ್ಡ್ ಪೇಜರ್‌ಗಳು ಸ್ಫೋಟಗೊಂಡ ಪರಿಣಾಮ ಲೆಬನಾನ್‌ನ ವಿವಿಧ ಭಾಗಗಳಲ್ಲಿ ಗಾಯಗೊಂಡಿದ್ದಾರೆ, ಸಿರಿಯಾದಲ್ಲೂ ಪೇಜರ್ ಗಳು ಸ್ಫೋಟಗೊಂಡು ತಮ್ಮ ಯೋಧರು ಗಾಯಗೊಂಡಿದ್ದಾರೆ ಇದರ ಹಿಂದೆ ಇಸ್ರೇಲ್ ಕೈವಾಡ ಇದೆ ಎಂದು ಆರೋಪಿಸಿದ್ದಾರೆ.

ಬೈರುತ್‌ನ ದಕ್ಷಿಣದ ಉಪನಗರಗಳಲ್ಲಿ ವರದಿಯಾದ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಸ್ಥಳೀಯ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಜನರು ತಮ್ಮ ಕೈಗಳ ಮೇಲೆ ಅಥವಾ ಅವರ ಪ್ಯಾಂಟ್ ಪಾಕೆಟ್‌ಗಳ ಬಳಿ ಗಾಯಗಳೊಂದಿಗೆ ಪಾದಚಾರಿ ಮಾರ್ಗದ ಮೇಲೆ ಮಲಗಿರುವುದು ಕಂಡಿಬಂದಿದೆ.

pagers explode
Hezbollah ಉಗ್ರರಿಂದ ರಾಕೆಟ್ ದಾಳಿ: 48 ಗಂಟೆಗಳ ತುರ್ತು ಪರಿಸ್ಥಿತಿ ಘೋಷಿಸಿದ Israel!

ಮೊಬೈಲ್ ಕೊಂಡೊಯ್ಯದಂತೆ ಎಚ್ಚರಿಕೆ ನೀಡಿದ್ದ ಹೆಜ್ಬೊಲ್ಲಾ ನಾಯಕ ಹಸನ್ ನಸ್ರಲ್ಲಾ

ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಅವರು ಈ ಹಿಂದೆ ಗುಂಪಿನ ಸದಸ್ಯರಿಗೆ ಸೆಲ್‌ಫೋನ್‌ಗಳನ್ನು ಕೊಂಡೊಯ್ಯದಂತೆ ಎಚ್ಚರಿಕೆ ನೀಡಿದ್ದರು, ಇಸ್ರೇಲ್ ತಮ್ಮ ಚಲನವಲನಗಳನ್ನು ಪತ್ತೆಹಚ್ಚಲು ಮತ್ತು ಉದ್ದೇಶಿತ ಸ್ಟ್ರೈಕ್‌ಗಳನ್ನು ನಡೆಸಲು ಅವುಗಳನ್ನು ಬಳಸಬಹುದು ಎಂದು ಎಚ್ಚರಿಕೆ ನೀಡಿದ್ದರು.

ಲೆಬನಾನ್‌ನ ಆರೋಗ್ಯ ಸಚಿವಾಲಯವು ಎಲ್ಲಾ ಆಸ್ಪತ್ರೆಗಳಿಗೆ ತುರ್ತು ರೋಗಿಗಳನ್ನು ತೆಗೆದುಕೊಳ್ಳಲು ಮತ್ತು ಪೇಜರ್‌ಗಳನ್ನು ಹೊಂದಿರುವ ಜನರು ಅವರಿಂದ ದೂರವಿರಲು ಜಾಗರೂಕರಾಗಿರಲು ಕರೆ ನೀಡಿದೆ. ವೈರ್‌ಲೆಸ್ ಸಾಧನಗಳನ್ನು ಬಳಸದಂತೆ ಆರೋಗ್ಯ ಕಾರ್ಯಕರ್ತರನ್ನು ಕೇಳಿದೆ.

ಪೇಜರ್ ಸರ್ವರ್ ಗಳನ್ನು ಬಳಸಿ ಇಸ್ರೇಲ್ ನಿಂದ ದಾಳಿ!?

ಎಲ್ ಬಿಸಿಐ ಮಾಹಿತಿಯ ಪ್ರಕಾರ, ಪ್ರಾಥಮಿಕ ವರದಿಗಳನ್ನು ನಂಬುವುದಾದರೆ, ಸರ್ವರ್ ಗಳನ್ನು ಬಳಸಿಕೊಂಡು ಪೇಜರ್ ಬ್ಯಾಟರಿಗಳನ್ನು ಓವರ್ ಲೋಡ್ ಮಾಡಿ ಸ್ಫೋಟಿಸಿದೆ.

ಬ್ಯಾಟರಿಗಳು ಸ್ಫೋಟಗೊಂಡು ವ್ಯಕ್ತಿ ಯಾವ ಸ್ಥಳದಲ್ಲಿ ಪೇಜರ್ ಗಳನ್ನಿಟ್ಟುಕೊಂಡಿರುತ್ತಾರೆ ಎಂಬುದರ ಆಧಾರದಲ್ಲಿ ಗಾಯದ ತೀವ್ರತೆ ವ್ಯತ್ಯಯವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com