"ಯುದ್ಧದ ಹೊಸ ಹಂತ ಆರಂಭ": ಪೇಜರ್ ಸ್ಫೋಟದ ಹಿಂದೆ ಇರುವುದು ತಾನೇ ಎಂದು ಸುಳಿವು ನೀಡಿತಾ ಇಸ್ರೇಲ್?

ಸಶಸ್ತ್ರ ಗುಂಪು ಹೆಜ್ಬೊಲ್ಲಾಹ್ ಬಳಸಿದ ಪೇಜರ್ ಗಳು 9 ಜನರನ್ನು ಕೊಂದು, ದೇಶದಾದ್ಯಂತ ಸ್ಫೋಟಿಸಿದ ಒಂದು ಗಂಟೆಯ ನಂತರ ಇಸ್ರೇಲ್ನಿಂದ ಈ ಹೇಳಿಕೆ ಬಂದಿದೆ.
Israeli Defense Minister Yoav Gallant
ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್online desk
Updated on

ಟೆಲ್ ಅವೀವ್: ಲೆಬನಾನ್ ಹಾಗೂ ಸಿರಿಯಾಗಳಲ್ಲಿ ಹೆಜ್ಬೊಲ್ಲಾ ಸಂಘಟನೆಯ ನೂರಾರು ಮಂದಿ ಪೇಜರ್, ವಾಕಿ-ಟಾಕಿ ಸ್ಫೋಟಗೊಂಡು ತಮ್ಮ ಅಂಗಾಂಗಗಳನ್ನು ಕಳೆದುಕೊಂಡಿದ್ದಾರೆ. ಈ ಗೌಪ್ಯ ದಾಳಿಯ ಹಿಂದೆ ಇಸ್ರೇಲ್ ಕೈವಾಡ ಇರುವ ಶಂಕೆ ವ್ಯಕ್ತವಾಗತೊಡಗಿದೆ.

ಇದಕ್ಕೆ ಪೂರಕವೆಂಬಂತೆ, ಸ್ಫೋಟಗಳು ಸಂಭವಿಸುತ್ತಿರುವ ಬೆನ್ನಲ್ಲೇ ಇಸ್ರೇಲ್ ರಕ್ಷಣಾ ಸಚಿವರು ಮಾರ್ಮಿಕ ಹೇಳಿಕೆ ನೀಡಿದ್ದಾರೆ.

ಯುದ್ಧದ ಹೊಸ ಹಂತ ಆರಂಭವನ್ನು ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್, ಸೇನಾ ಪಡೆಗಳೊಂದಿಗೆ ಮಾತನಾಡುತ್ತಾ, ಇಸ್ರೇಲ್ ಸೇನೆ ಹಾಗೂ ಭದ್ರತಾ ಏಜೆನ್ಸಿಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಯೋವ್ ಗ್ಯಾಲಂಟ್, ಎಲೆಕ್ಟ್ರಾನಿಕ್ ಉಪಕರಣಗಳ ಸ್ಫೋಟ ಪ್ರಕರಣಗಳನ್ನು ಎಲ್ಲಿಯೂ ಉಲ್ಲೇಖಿಸಿಲ್ಲವಾದರೂ, ಫಲಿತಾಂಶಗಳು ಬಹಳ ಪ್ರಭಾವಶಾಲಿಯಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗಾಜಾದಲ್ಲಿ ಹಮಾಸ್ ಉಗ್ರಗಾಮಿಗಳ ವಿರುದ್ಧದ ತಿಂಗಳುಗಳ ಯುದ್ಧದ ನಂತರ, "ಸಂಪನ್ಮೂಲಗಳು ಮತ್ತು ಬಲಗಳನ್ನು ತಿರುಗಿಸುವ ಮೂಲಕ ಗುರುತ್ವಾಕರ್ಷಣೆಯ ಕೇಂದ್ರ ಉತ್ತರಕ್ಕೆ ಸ್ಥಳಾಂತರಗೊಳ್ಳುತ್ತಿದೆ" ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ. "ನಾವು ಯುದ್ಧದಲ್ಲಿ ಹೊಸ ಹಂತದ ಪ್ರಾರಂಭದಲ್ಲಿದ್ದೇವೆ, ಇದಕ್ಕೆ ಧೈರ್ಯ, ನಿರ್ಣಯ ಮತ್ತು ಪರಿಶ್ರಮದ ಅಗತ್ಯವಿದೆ" ಎಂದು ಅವರು ಹೇಳಿದರು.

Israeli Defense Minister Yoav Gallant
ಹೆಜ್ಬುಲ್ಲಾಗಳ ಸಾವಿರಾರು ಪೇಜರ್ ಸ್ಫೋಟ; ಇಸ್ರೇಲ್ ಮಾಡಿದ್ದೇನು?

ಸಶಸ್ತ್ರ ಗುಂಪು ಹೆಜ್ಬೊಲ್ಲಾಹ್ ಬಳಸಿದ ಪೇಜರ್ ಗಳು 9 ಜನರನ್ನು ಕೊಂದು, ದೇಶದಾದ್ಯಂತ ಸ್ಫೋಟಿಸಿದ ಒಂದು ಗಂಟೆಯ ನಂತರ ಇಸ್ರೇಲ್ನಿಂದ ಈ ಹೇಳಿಕೆ ಬಂದಿದೆ.

ಇದಷ್ಟೇ ಅಲ್ಲದೇ ಹೊಸದಾಗಿ ವಾಕಿ-ಟಾಕಿ ಸ್ಫೋಟಗಳು 14 ಮಂದಿಯನ್ನು ಕೊಂದು 300 ಕ್ಕೂ ಹೆಚ್ಚು ಜನರ ಗಾಯಗೊಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com