ಇಸ್ರೇಲ್ ವಿರುದ್ಧ ಕಠಿಣ ಪ್ರತೀಕಾರ ಶತಸಿದ್ಧ; ಸ್ಫೋಟಿಸಿದ್ದಕ್ಕೆ ಶಿಕ್ಷೆಯಾಗಲಿದೆ: ಹೆಜ್ಬುಲ್ಲಾ ಮುಖ್ಯಸ್ಥ

ಸ್ಫೋಟಗಳಿಗೆ "ಕಠಿಣ ಪ್ರತೀಕಾರ ಮತ್ತು ನ್ಯಾಯಯುತ ಶಿಕ್ಷೆ" ಎದುರಿಸಬೇಕಾಗುತ್ತದೆ ಎಂದು ನಸ್ರಲ್ಲಾಹ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
People attend a televised speech by the leader of the Hezbollah movement Hassan Nasrallah inside a house in the southern Lebanese village of Zawatar on September 19, 2024
ಹೆಜ್ಬೊಲ್ಲಾ ಮುಖ್ಯಸ್ಥರ ಭಾಷಣonline desk
Updated on

ಲೆಬನಾನ್: ಲೆಬನಾನ್ ನಲ್ಲಿ ಪೇಜರ್, ವಾಕಿ-ಟಾಕಿಗಳ ಸ್ಫೋಟದಿಂದಾಗಿ ಹೆಜ್ಬೊಲ್ಲ ಸಂಘಟನೆಯ 37 ಮಂದಿ ಸಾವನ್ನಪ್ಪಿದ್ದು, 3,000 ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದಾರೆ.

ಈ ಕೃತ್ಯದ ಹಿಂದೆ ಇಸ್ರೇಲ್ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಹೆಜ್ಬೊಲ್ಲಾ ಸಂಘಟನೆಯ ಮುಖ್ಯಸ್ಥ ನಸ್ರಲ್ಲಾಹ್ ಇಸ್ರೇಲ್ ಗೆ ಎಚ್ಚರಿಕೆ ರವಾನಿಸಿದ್ದಾರೆ.

ಸ್ಫೋಟಗಳಿಗೆ "ಕಠಿಣ ಪ್ರತೀಕಾರ ಮತ್ತು ನ್ಯಾಯಯುತ ಶಿಕ್ಷೆ" ಎದುರಿಸಬೇಕಾಗುತ್ತದೆ ಎಂದು ನಸ್ರಲ್ಲಾಹ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ದಾಳಿಯನ್ನು ಸಂಭವನೀಯ "ಯುದ್ಧದ ಕ್ರಿಯೆ" ಎಂದು ಹೇಳಿರುವ ನಸ್ರಲ್ಲಾಹ್, ಇಸ್ರೇಲ್ "ಕಠಿಣ ಪ್ರತೀಕಾರ ಮತ್ತು ನ್ಯಾಯಯುತ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದರೆ.

ದಾಳಿಗಳು "ಹತ್ಯಾಕಾಂಡ" ಆಗಿದ್ದು, "ಯುದ್ಧಾಪರಾಧ ಅಥವಾ ಯುದ್ಧದ ಘೋಷಣೆಯಾಗಿರಬಹುದು" ಎಂದು ಹೇಳಿರುವ, ನಸ್ರಲ್ಲಾಹ್ "ಎರಡು ನಿಮಿಷಗಳಲ್ಲಿ 5,000 ಕ್ಕಿಂತ ಕಡಿಮೆ ಜನರನ್ನು ಕೊಲ್ಲಲು ಇಸ್ರೇಲ್ ಬಯಸಿದೆ" ಎಂದು ಆರೋಪಿಸಿದರು.

People attend a televised speech by the leader of the Hezbollah movement Hassan Nasrallah inside a house in the southern Lebanese village of Zawatar on September 19, 2024
ಪೇಜರ್ ಗಳ ಸ್ಫೋಟ: ಲೆಬನಾನ್, ಸಿರಿಯಾದಲ್ಲಿ 9 ಸಾವು; 2800 ಹೆಜ್ಬೊಲ್ಲಾಗಳಿಗೆ ಗಾಯ; Israel ಕೈವಾಡ?

ಗಾಜಾದಲ್ಲಿ ಕದನ ವಿರಾಮವನ್ನು ತಲುಪುವವರೆಗೆ ಇಸ್ರೇಲ್ ವಿರುದ್ಧ ಹಿಜ್ಬುಲ್ಲಾದ ಹೋರಾಟವನ್ನು ಮುಂದುವರಿಸುವುದಾಗಿ ನಸ್ರಲ್ಲಾ ಪ್ರತಿಜ್ಞೆ ಮಾಡಿದ್ದಾರೆ.

"ಈ ಎಲ್ಲಾ ರಕ್ತ ಚೆಲ್ಲಿದ" ಹೊರತಾಗಿಯೂ "ಗಾಜಾ ಮೇಲಿನ ಆಕ್ರಮಣವು ನಿಲ್ಲುವವರೆಗೂ ಲೆಬನಾನಿನ ಸಂಘಟನೆ ನಿಲ್ಲುವುದಿಲ್ಲ" ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com