ಫ್ರಾನ್ಸ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಆರ್ಥಿಕ ಕೊರತೆ ಎದುರಿಸುತ್ತಿದೆ: ವಿತ್ತ ಸಚಿವ

ಈ ಹೇಳಿಕೆಯ ಮೂಲಕ ಹೊಸ ವಿತ್ತ ಸಚಿವರು, ಫ್ರಾನ್ಸ್ ನ ಆರ್ಥಿಕ ಸ್ಥಿತಿಯನ್ನು ಮರಳಿ ಹಳಿಗೆ ತರುವುದಕ್ಕೆ ಸಂಪತ್ಭರಿತ ಹಾಗೂ ದೊಡ್ಡ ಉದ್ಯಮಿಗಳಿಗೆ ಹೆಚ್ಚಿನ ತೆರಿಗೆ ವಿಧಿಸುವ ಸಾಧ್ಯತೆಗಳ ಸುಳಿವನ್ನು ನೀಡಿದ್ದಾರೆ.
Antoine Armand
ಫ್ರಾನ್ಸ್ ವಿತ್ತ ಸಚಿವ ಆಂಟೊಯಿನ್ ಅರ್ಮಾಂಡ್online desk
Updated on

ಪ್ಯಾರಿಸ್: ಫ್ರಾನ್ಸ್ ಈಗ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಸಾರ್ವಜನಿಕ ಕೊರತೆಯನ್ನು ಎದುರಿಸುತ್ತಿದೆ ಎಂದು ಹೊಸದಾಗಿ ನೇಮಕವಾಗಿರುವ ಆರ್ಥಿಕ ಸಚಿವರು ಹೇಳಿದ್ದಾರೆ.

ಈ ಹೇಳಿಕೆಯ ಮೂಲಕ ಹೊಸ ವಿತ್ತ ಸಚಿವರು, ಫ್ರಾನ್ಸ್ ನ ಆರ್ಥಿಕ ಸ್ಥಿತಿಯನ್ನು ಮರಳಿ ಹಳಿಗೆ ತರುವುದಕ್ಕೆ ಸಂಪತ್ಭರಿತ ಹಾಗೂ ದೊಡ್ಡ ಉದ್ಯಮಿಗಳಿಗೆ ಹೆಚ್ಚಿನ ತೆರಿಗೆ ವಿಧಿಸುವ ಸಾಧ್ಯತೆಗಳ ಸುಳಿವನ್ನು ನೀಡಿದ್ದಾರೆ.

ಆಂಟೊಯಿನ್ ಅರ್ಮಾಂಡ್ ಅವರು ಸರ್ಕಾರದ ಮಿತಿಮೀರಿದ ವೆಚ್ಚವನ್ನು ಕಡಿತಗೊಳಿಸುವ ಪ್ರಯತ್ನದಲ್ಲಿ ಒಕ್ಕೂಟಗಳು ಮತ್ತು ಮೇಲಧಿಕಾರಿಗಳ ಸಂಸ್ಥೆಗಳನ್ನು ಒಳಗೊಂಡಂತೆ ಆರ್ಥಿಕತೆಗೆ ಸಂಬಂಧಪಟ್ಟವರೊಂದಿಗೆ ಮಾತನಾಡುವುದಾಗಿ ಹೇಳಿದ್ದಾರೆ. ಸರ್ಕಾರದ ಮಿತಿಮೀರಿದ ವೆಚ್ಚ ರಾಷ್ಟ್ರೀಯ ಉತ್ಪಾದನೆಯ ಶೇ.5.6ರಷ್ಟು ಅಥವಾ ಅದಕ್ಕಿಂತಲೂ ಹೆಚ್ಚು ತಲುಪುವ ಸಾಧ್ಯತೆ ಇದ್ದು, ಇದು ಯುರೋಪಿಯನ್ ಯೂನಿಯನ್ ಮಿತಿಯ 2 ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

"ಕಳೆದ 50 (ವರ್ಷಗಳಲ್ಲಿ) ಒಂದು ಅಥವಾ ಎರಡು ಬಿಕ್ಕಟ್ಟಿನ ವರ್ಷಗಳನ್ನು ಹೊರತುಪಡಿಸಿ, ನಮ್ಮ ಇತಿಹಾಸದಲ್ಲಿ ನಾವು ಅತ್ಯಂತ ಕೆಟ್ಟ ಕೊರತೆಯನ್ನು ಹೊಂದಿದ್ದೇವೆ" ಎಂದು ಅರ್ಮಾಂಡ್ ಬ್ರಾಡ್‌ಕಾಸ್ಟರ್ ಫ್ರಾನ್ಸ್ ಇಂಟರ್‌ಗೆ ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಮೈಕೆಲ್ ಬಾರ್ನಿಯರ್ ನೇತೃತ್ವದ ಹೊಸ ಸರ್ಕಾರವು ಮುಂಬರುವ ತಿಂಗಳುಗಳಲ್ಲಿ ಸಂಸದೀಯ ಸವಾಲನ್ನು ಎದುರಿಸಲಿದೆ.

Antoine Armand
50 ಸಾವಿರ ಕೋಟಿ ರೂ. ಮೌಲ್ಯದ ರಾಫೆಲ್ ಮೆರೈನ್ ಜೆಟ್ ಒಪ್ಪಂದ: ಭಾರತ-ಫ್ರಾನ್ಸ್ ನಡುವೆ ಮಾತುಕತೆ!

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com