'ಹಿಂದೂಗಳೇ ಗೋ ಬ್ಯಾಕ್: ಅಮೆರಿಕದಲ್ಲಿ ಮತ್ತೊಂದು BAPS ಹಿಂದೂ ದೇವಾಲಯ ಧ್ವಂಸ!

ದೇವಸ್ಥಾನದ ಹೊರಗಿರುವ ಬೋರ್ಡ್ ಮೇಲೆ ‘ಗೋ ಬ್ಯಾಕ್ ಹಿಂದೂ’ ಎಂದು ಬರೆಯಲಾಗಿದೆ ಎಂದು BAPS ಸಾರ್ವಜನಿಕ ವ್ಯವಹಾರಗಳ ಸಂಘಟನೆ ತಿಳಿಸಿದೆ.
ಪ್ರಾರ್ಥನೆ ಸಲ್ಲಿಸುತ್ತಿರುವ ದೇವಾಲಯದ ಸಮಿತಿ ಸದಸ್ಯರ ಚಿತ್ರ
ಪ್ರಾರ್ಥನೆ ಸಲ್ಲಿಸುತ್ತಿರುವ ದೇವಾಲಯದ ಸಮಿತಿ ಸದಸ್ಯರ ಚಿತ್ರ
Updated on

ಕ್ಯಾಲಿಫೋರ್ನಿಯಾ: ಅಮೆರಿಕದಲ್ಲಿ ಮತ್ತೊಂದು ಹಿಂದೂ ದೇವಾಲಯವೊಂದನ್ನು ಧ್ವಂಸಗೊಳಿಸಲಾಗಿದೆ. ಅಪರಿಚಿತ ದುಷ್ಕರ್ಮಿಗಳು ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊದಲ್ಲಿರುವ BAPS ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ್ದಾರೆ.

ದೇವಸ್ಥಾನದ ಹೊರಗಿರುವ ಬೋರ್ಡ್ ಮೇಲೆ ‘ಗೋ ಬ್ಯಾಕ್ ಹಿಂದೂ’ ಎಂದು ಬರೆಯಲಾಗಿದೆ ಎಂದು BAPS ಸಾರ್ವಜನಿಕ ವ್ಯವಹಾರಗಳ ಸಂಘಟನೆ ತಿಳಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ BAPS Public Affairs ಸಂಘಟನೆ ನ್ಯೂಯಾರ್ಕ್‌ನಲ್ಲಿರುವ BAPS ಹಿಂದೂ ದೇವಾಲಯವನ್ನು ಅಪವಿತ್ರಗೊಳಿಸಿದ 10 ದಿನಗಳ ನಂತರ, ಸ್ಯಾಕ್ರಮೆಂಟೊದ CA ಪ್ರದೇಶದಲ್ಲಿರುವ ದೇವಾಲಯವನ್ನು ಕಳೆದ ರಾತ್ರಿ ಹಿಂದೂ ವಿರೋಧಿ ದ್ವೇಷದಿಂದ ಅಪವಿತ್ರಗೊಳಿಸಲಾಗಿದೆ.

ಹಿಂದೂಗಳೇ ಗೋ ಬ್ಯಾಕ್ ಎಂದು ಬೋರ್ಡ್ ಮೇಲೆ ಬರೆಯಲಾಗಿದೆ. ಶಾಂತಿಯ ಪ್ರಾರ್ಥನೆಯೊಂದಿಗೆ ದ್ವೇಷದ ವಿರುದ್ಧ ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ ಎಂದು ಬರೆಯಲಾಗಿದೆ. ಸೆಪ್ಟೆಂಬರ್ 17 ರಂದು ನ್ಯೂಯಾರ್ಕ್‌ನ ಮೆಲ್ವಿಲ್ಲೆಯಲ್ಲಿರುವ BAPS ಸ್ವಾಮಿನಾರಾಯಣ ದೇವಾಲಯವನ್ನು ಅಪವಿತ್ರಗೊಳಿಸಿದ ನಂತರ ಬುಧವಾರ ರಾತ್ರಿ ಈ ಘಟನೆ ನಡೆದಿದೆ.

ದ್ವೇಷದ ನಮ್ಮ ಖಂಡನೆಯು ದೃಢವಾಗಿ ಉಳಿದಿದೆ. ದುಃಖವು ತೀವ್ರವಾಗಿದ್ದು, ದ್ವೇಷ ಹೊಂದಿರುವವರು ಸೇರಿದಂತೆ ಎಲ್ಲರಿಗಾಗಿ ಪ್ರಾರ್ಥನೆ ಮಾಡಿದ್ದೇವೆ. ಈ ದ್ವೇಷದ ಅಪರಾಧ ಕುರಿತು ಕಾನೂನು ಜಾರಿ ಅಧಿಕಾರಿಗಳೊಂದಿಗೆ BAPS ಕಾರ್ಯನಿರ್ವಹಿಸುತ್ತಿದೆ ಎಂದು ಸಂಘಟನೆ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಾರ್ಥನೆ ಸಲ್ಲಿಸುತ್ತಿರುವ ದೇವಾಲಯದ ಸಮಿತಿ ಸದಸ್ಯರ ಚಿತ್ರ
ಕೆನಡಾ ಬಳಿಕ ಅಮೆರಿಕಾದಲ್ಲೂ ಹಿಂದೂ ದೇವಾಲಯ ಧ್ವಂಸ: ಭಾರತ ವಿರೋಧಿ ಘೋಷಣೆ ಬರೆದ ಖಲಿಸ್ತಾನಿಗಳು

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com