ಕೆನಡಾ ಬಳಿಕ ಅಮೆರಿಕಾದಲ್ಲೂ ಹಿಂದೂ ದೇವಾಲಯ ಧ್ವಂಸ: ಭಾರತ ವಿರೋಧಿ ಘೋಷಣೆ ಬರೆದ ಖಲಿಸ್ತಾನಿಗಳು

ಅಮೆರಿಕಾದ ಕ್ಯಾಲಿಫೋರ್ನಿಯಾದ ನೆವಾರ್ಕ್‌ನಲ್ಲಿರುವ ಹಿಂದೂ ದೇವಾಲಯದ ಮೇಲೆ ಖಲಿಸ್ತಾನಿ ಬೆಂಬಲಿಗರು ದಾಳಿ ನಡೆಸಿದ್ದು, ದೇವಾಲಯದ ಗೋಡೆಗಳ ಮೇಲೆ ಭಾರತ ವಿರೋಧಿ ಮತ್ತು ಖಲಿಸ್ತಾನ್ ಪರ ಘೋಷಣೆಗಳನ್ನು ಬರೆದು ಹಾನಿ ಮಾಡಲಾಗಿದೆ.
ಭಾರತ ವಿರೋಧಿ ಗೋಡೆ ಬರಹಗಳನ್ನು ಬರೆದಿರುವುದು.
ಭಾರತ ವಿರೋಧಿ ಗೋಡೆ ಬರಹಗಳನ್ನು ಬರೆದಿರುವುದು.

ಕ್ಯಾಲಿಫೋರ್ನಿಯಾ: ಅಮೆರಿಕಾದ ಕ್ಯಾಲಿಫೋರ್ನಿಯಾದ ನೆವಾರ್ಕ್‌ನಲ್ಲಿರುವ ಹಿಂದೂ ದೇವಾಲಯದ ಮೇಲೆ ಖಲಿಸ್ತಾನಿ ಬೆಂಬಲಿಗರು ದಾಳಿ ನಡೆಸಿದ್ದು, ದೇವಾಲಯದ ಗೋಡೆಗಳ ಮೇಲೆ ಭಾರತ ವಿರೋಧಿ ಮತ್ತು ಖಲಿಸ್ತಾನ್ ಪರ ಘೋಷಣೆಗಳನ್ನು ಬರೆದು ಹಾನಿ ಮಾಡಲಾಗಿದೆ.

ಹಿಂದೂ ಅಮೇರಿಕನ್ ಫೌಂಡೇಶನ್, ಕ್ಯಾಲಿಫೋರ್ನಿಯಾದ ನೆವಾರ್ಕ್‌ನಲ್ಲಿರುವ ಸ್ವಾಮಿನಾರಾಯಣ ಮಂದಿರ ವಸನಾ ಸಂಸ್ಥೆಯನ್ನು ಖಲಿಸ್ತಾನ್ ಪರ ಘೋಷಣೆಗಳಿಂದ ವಿರೂಪಗೊಳಿಸಲಾಗಿದೆ.

ಘಟನೆ ಕುರಿತು ಪ್ರಕಿತ್ರಿಯೆ ನೀಡಿರುವ ಅಮೆರಿಕಾ, ಇದು ದ್ವೇಷದ ಅಪರಾಧ ಎಂದು ಪರಿಗಣಿಸಲಾಗಿದ್ದು, ಸಂಪೂರ್ಣ ತನಿಖೆ ನಡೆಸುವ ಭರವಸೆ ನೀಡಿದೆ.

ಈ ಹಿಂದೆ ಜನವರಿ 31 ರಂದು, ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಪ್ರಮುಖ ಹಿಂದೂ ದೇವಾಲಯವನ್ನು ಭಾರತ ವಿರೋಧಿ ಗೀಚುಬರಹದೊಂದಿಗೆ ಧ್ವಂಸಗೊಳಿಸಲಾಗಿತ್ತು. ಈ ಕೃತ್ಯಕ್ಕೆ ಭಾರತೀಯ ಸಮುದಾಯದಿಂದ ತೀವ್ ಆಕ್ರೋಶಗಳು ವ್ಯಕ್ತವಾಗಿತ್ತು.

ಈ ವರ್ಷದ ಏಪ್ರಿಲ್‌ನಲ್ಲಿ, ಕೆನಡಾದ ಒಂಟಾರಿಯೊದಲ್ಲಿರುವ ಮತ್ತೊಂದು ಹಿಂದೂ ದೇವಾಲಯದಲ್ಲಿ ಭಾರತ ವಿರೋಧಿ ಬರಹವನ್ನು ಹಾಕಲಾಗಿತ್ತು. ಇದೀಗ ಅಮೆರಿಕಾದಲ್ಲೂ ಇಂತಹದ್ದೇ ಕೃತ್ಯ ನಡೆದಿದ್ದು, ಇಂದು ಭಾರತೀಯರ ಕಣ್ಣು ಕೆಂಪಗಾಗುವಂತೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com